ಇಂದ್ರಪ್ರಸ್ಥ ವಿದ್ಯಾಲಯ: ಶಿಕ್ಷಕರ ದಿನ ಆಚರಣೆ
Indraprastha Vidyalaya: ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಸೆ.5 ರಂದು ಶಿಕ್ಷಕರ ದಿನಾಚರಣೆ ಸಂಭ್ರಮ ಮನೆ ಮಾಡಿತ್ತು.
ಉಪ್ಪಿನಂಗಡಿ: ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಸೆ.5 ರಂದು ಶಿಕ್ಷಕರ ದಿನಾಚರಣೆ ಸಂಭ್ರಮ ಮನೆ ಮಾಡಿತ್ತು. ವಿದ್ಯಾರ್ಥಿಗಳು ತಮ್ಮ ಗುರುವೃಂದದವರನ್ನು ಬ್ಯಾಂಡ್ ವಾದನದೊಂದಿಗೆ, ಸಭೆಗೆ ಕರೆದುಕೊಂಡು ಬಂದರು. ಅವರುಗಳಿಗೆ ದೀಪ ಬೆಳಗಿ, ಪಾದ ಪೂಜೆ ಮಾಡಿದರು. ಜೊತೆಗೆ ನೆನಪಿನ ಕಾಣಿಕೆಯನ್ನು ನೀಡಿದರು.
ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕಿ ವೀಣಾ ಆರ್ ಪ್ರಸಾದ್, ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ತಮ್ಮ ಸಹೊದ್ಯೋಗಿಗಳಿಗೆ ಶುಭ ಹಾರೈಸಿದರು.
ಈ ಕಾರ್ಯಕ್ರಮವನ್ನು 10 ತರಗತಿ ವಿದ್ಯಾರ್ಥಿಗಳೇ ಯಶಸ್ವಿಯಾಗಿ ಆಯೋಜಿಸಿದ್ದರು. ಸಾನ್ವಿ ಎನ್ 'ಶಿಕ್ಷಕರ ದಿನ'ದ ಮಹತ್ವವನ್ನು ತಿಳಿಸಿದರು. ಆಸರೆ ಮತ್ತು ಬಳಗದವರು ಶುಭಾಶಯ ಗೀತೆ ಹಾಡಿದರು. ಪೂರ್ವಿ ಬಿ.ಜಿ ಮತ್ತು ಅನಘ ನಾಯಕ್ ಗುರುಗಳ ಕುರಿತಾದ ಸ್ವರಚಿತ ಕವನವನ್ನು ವಾಚಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಬಳಿಕ, ವಿದ್ಯಾರ್ಥಿ ಸಂಸತ್ತಿನ ಕ್ರೀಡಾ ಪ್ರತಿನಿಧಿ ಆಯತುಲ್ಲ ಸಲೀಂ ಹಾಗೂ ಬಳಗದವರು ಶಿಕ್ಷಕರಿಗೆ ಆಟೋಟ ಸ್ಪರ್ಧೆಯನ್ನು ಏರ್ಪಡಿಸಿದ್ದರು. ವಿಜೇತರಿಗೆ ಬಹುಮಾನ ನೀಡಿ ಗೌರವಿಸಿದರು. ವಿದ್ಯಾರ್ಥಿಗಳಾದ ಅಝ್ಮಲ್ ಮತ್ತು ಷಣ್ಮತ್ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲಾ ನಾಯಕಿ ವಿನ್ಯಾ ಪಿ.ಸಿ ವಂದಿಸಿದರು.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.