Toxic: ರೂ.300 ಕೋಟಿ ಕಲೆಕ್ಷನ್‌ನತ್ತ ಟಾಕ್ಸಿಕ್!

Toxic: ರಾಕಿಂಗ್ ಸ್ಟಾರ್ ಯಶ್ ನಟನೆಯ ಪ್ಯಾನ್-ಇಂಡಿಯಾ ಸಿನಿಮಾ ಟಾಕ್ಸಿಕ್, ರೂ.300 ಕೋಟಿ ಕಲೆಕ್ಷನ್‌ನತ್ತ ಮುನ್ನುಗ್ಗುತ್ತಿದೆ.

Aug 31, 2026 - 16:18
Aug 31, 2026 - 16:21
Toxic: ರೂ.300 ಕೋಟಿ ಕಲೆಕ್ಷನ್‌ನತ್ತ ಟಾಕ್ಸಿಕ್!

ರಾಕಿಂಗ್ ಸ್ಟಾರ್ ಯಶ್ (Yash) ನಟನೆಯ ಪ್ಯಾನ್-ಇಂಡಿಯಾ ಸಿನಿಮಾ ಟಾಕ್ಸಿಕ್ (Toxic), ರೂ.300 ಕೋಟಿ ಕಲೆಕ್ಷನ್‌ನತ್ತ ಮುನ್ನುಗ್ಗುತ್ತಿದೆ. 5ನೇ ದಿನವಾದ ಭಾನುವಾರವು ಭರ್ಜರಿ ಬ್ಯುಸಿನೆಸ್ ಮಾಡಿದೆ. 

ಸ್ಯಾಕ್ನಿಲ್ಕ್ ಪ್ರಕಾರ ದೇಶಾದ್ಯಂತ ರೂ.23 ಕೋಟಿ ನೆಟ್ ಗಳಿಕೆ ಕಂಡಿದೆ. ಹಿಂದಿಯಲ್ಲಿ ರೂ.14.50 ಕೋಟಿ, ಕನ್ನಡದಲ್ಲಿ ರೂ.6.40 ಕೋಟಿ ಹಾಗೂ ತೆಲುಗಿನಲ್ಲಿ ರೂ.1.40 ಕೋಟಿಯಷ್ಟು ಬಾಚಿದೆ. 16,241 ಶೋಗಳು ಪ್ರದರ್ಶನಗೊಂಡಿವೆ. ಈ ಮೂಲಕ ವಿಶ್ವಾದ್ಯಂತ ರೂ.285.20 ಕೋಟಿ ಗ್ರಾಸ್ ಕಲೆಕ್ಷನ್‌ ಮಾಡಿದೆ.

ಕಳೆದ ಬುಧವಾರ ಬಿಡುಗಡೆಗೊಂಡಿದ್ದ ಈ ಚಿತ್ರ, ಭಾರತದಲ್ಲಿ ಮೊದಲ ದಿನ ರೂ.101.10 ಕೋಟಿ, ಎರಡನೇ ದಿನ ರೂ.37.65 ಕೋಟಿ, ಮೂರನೇ ದಿನ ರೂ.25.15 ಕೋಟಿ ಮತ್ತು ನಾಲ್ಕನೇ ದಿನ ರೂ.25.15 ಕೋಟಿ (ನೆಟ್) ಗಳಿಕೆ ಮಾಡಿದೆ.

ಈ ಸಿನಿಮಾಕ್ಕೆ ಗೀತು ಮೋಹನ್‌ದಾಸ್ ಆಕ್ಷನ್ ಕಟ್ ಹೇಳಿದ್ದು, ಕೆವಿಎನ್ ಪ್ರೊಡಕ್ಷನ್ಸ್ ಬಿಗ್ ಬಜೆಟ್‌ನಲ್ಲಿ ನಿರ್ಮಿಸಿದೆ. ಯಶ್‌ರ ಅಬ್ಬರವು ಜೋರಾಗಿದ್ದು, ದ್ವಿಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ನಯನತಾರಾ, ತಾರಾ ಸುತಾರಿಯಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.