ದಿನ ಭವಿಷ್ಯ: ಇಂದು ಯಾರಿಗೆ ಶುಭ?
Daily Horoscope: ಇಂದು (ಶುಕ್ರವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.
ಮೇಷ:
ಶ್ರಾವಣ ಮಾಸದ ಶುಕ್ರವಾರ, ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ.. ಉದ್ಯೋಗ, ಉದ್ಯಮಗಳಿಗೆ ಅನುಕೂಲ. ಗೃಹಿಣಿಯರಿಗೆ ಹಬ್ಬದ ತಯಾರಿಯಲ್ಲಿ ಮಗ್ನತೆ. ಪ್ರಕೃತಿಯ ಜೊತೆಯಲ್ಲಿ ಸಾಮರಸ್ಯದಿಂದ ಆನಂದ. ದತ್ತ ಕ್ಷೇತ್ರ ಅಥವಾ ಗುರುಸ್ಥಾನದ ದರ್ಶನ ಸಂಭವ. ಗಣೇಶ ಕವಚ, ಕೃಷ್ಣಾಷ್ಟೋತ್ತರ ಓದಿ.
ವೃಷಭ:
ಸಂತೋಷವಾಗಿ ಹಬ್ಬ ಆಚರಣೆ.. ಉದ್ಯೋಗ ಸ್ಥಾನದಲ್ಲಿ ಸಹಕಾರ. ವೃತ್ತಿಪರರಿಗೆ ಸಮಯದ ಸವಾಲು. ವಿವಾಹಾಪೇಕ್ಷಿಗಳಿಗೆ ಶುಭಸೂಚನೆ. ಮನೆಗಳಲ್ಲಿ ಸಂಭ್ರಮದ ವಾತಾವರಣ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ ಓದಿ.
ಮಿಥುನ:
ನಿಶ್ಚಿಂತೆಯಿಂದ ಹಬ್ಬ ಆಚರಿಸಿ.. ಉದ್ಯಮಿಗಳ ಪಾಲಿಗೆ ಒಳ್ಳೆಯ ದಿನ. ಅಕಸ್ಮಾತ್ ಧನಲಾಭ ಸಂಭವ. ಶುಭವಚನಗಳನ್ನೇ ಆಡಿರಿ. ಪೂರ್ವ ದಿಕ್ಕಿನಿಂದ ಶುಭವಾರ್ತೆ ನಿರೀಕ್ಷಿಸಿ. ಗಣೇಶ ಸ್ತೋತ್ರ, ವಿಷ್ಣು ಸಹಸ್ರನಾಮ ಓದಿ.
ಕರ್ಕಾಟಕ:
ಉದ್ಯೋಗ ಸ್ಥಾನದಲ್ಲಿ ಹರ್ಷದ ವಾತಾವರಣ.. ಖಾದಿ ಉದ್ಯಮ ಬೆಳೆಸಲು ಆಸಕ್ತಿ. ಹಿರಿಯರ ಆರೋಗ್ಯ ಗಮನಿಸಿ. ಹತ್ತಿರದ ಬಂಧುಗಳ ಕಡೆಯಿಂದ ಶುಭವಾರ್ತೆ. ಅರ್ಥಪೂರ್ಣವಾಗಿ ಹಬ್ಬ ಆಚರಣೆಗೆ ಸಂಕಲ್ಪ. ಗಣಪತಿ ಅಥರ್ವಶೀರ್ಷ, ದೇವೀಸ್ತೋತ್ರ ಓದಿ.
ಸಿಂಹ:
ಆಶ್ರಿತರ ಕುರಿತು ವಿಶೇಷ ಕಾಳಜಿ.. ಆಹಾರ ಕ್ಷೇತ್ರಕ್ಕೆ ಪದಾರ್ಪಣೆಗೆ ಚಿಂತನೆ. ವಸ್ತ್ರ, ಆಭರಣಾದಿಗಳ ಗ್ರಾಹಕರ ಸಂಖ್ಯೆ ಹೆಚ್ಚಳ. ಕುಶಲಕರ್ಮಿಗಳಿಗೆ ಮಾನ್ಯತೆ. ದೈವ ಚಿಂತನೆಯಿಂದ ನೆಮ್ಮದಿ. ಗಣೇಶ ಅಷ್ಟೋತ್ತರ ಶತನಾಮ ಸ್ತೋತ್ರ, ನರಸಿಂಹ ಕವಚ ಓದಿ.
ಕನ್ಯಾ:
ಮನೆಮಂದಿಯೊಡನೆ ಸಂಭ್ರಮಾಚರಣೆ.. ಗೃಹೋಪಕರಣ ಖರೀದಿಗೆ ಧನವ್ಯಯ. ಹೊಲಿಗೆ ಕೆಲಸ ಬಲ್ಲವರಿಗೆ ಉದ್ಯೋಗಾವಕಾಶ. ರಕ್ಷಣಾ ವಿಭಾಗಗಳಲ್ಲಿ ಸೇವೆ ಸಲ್ಲಿಸುವವರಿಗೆ ಶುಭ...ಪೂರ್ವದಿಕ್ಕಿನಿಂದ ಶುಭ ವಾರ್ತೆ ನಿರೀಕ್ಷಿಸಿ. ಗಣೇಶ ಕವಚ, ದುರ್ಗಾಸ್ತೋತ್ರ ಓದಿ.
ತುಲಾ:
ಆರಾಧನಾ ಸ್ಥಾನದ ಆಚರಣೆಯಲ್ಲಿ ಭಾಗಿ.. ಕಸೂತಿ, ಕರಕೌಶಲದ ಕೆಲಸಗಳನ್ನು ಬಲ್ಲವರಿಗೆ ಬೇಡಿಕೆ. ಮಕ್ಕಳ ಪಾಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ. ಸಂಗೀತ ಕಲಿಕೆಯಲ್ಲಿ ಆಸಕ್ತಿ. ಬಂಧುಗಳ ಹಠಾತ್ ಭೇಟಿ.ಗಣೇಶ ಅಷ್ಟಕ, ಹನುಮಾನ್ ಚಾಲೀಸಾ ಓದಿ.
ವೃಶ್ಚಿಕ:
ಎರಡು ದಿನಗಳ ಸಂಭ್ರಮಾಚರಣೆಗೆ ಸಿದ್ಧತೆ.. ಗೃಹೋದ್ಯಮ ಉತ್ಪನ್ನಗಳಿಗೆ ಹೊಸ ಗಿರಾಕಿಗಳು. ಉದ್ಯೋಗ ಅರಸುವ ಶಿಕ್ಷಿತರಿಗೆ ಮಾರ್ಗದರ್ಶನ. ಲೌಕಿಕ- ಆಧ್ಯಾತ್ಮಿಕ ಜೀವನ ಸಮನ್ವಯ. ಹತ್ತಿರದ ನೆಂಟರ ಆಗಮನ.ಗಣೇಶ ಕವಚ, ರಾಮರಕ್ಷಾ ಸ್ತೋತ್ರ ಓದಿ.
ಧನು:
ಸಾಮೂಹಿಕ ಹಬ್ಬ ಆಚರಣೆಯಲ್ಲಿ ಭಾಗಿ.. ಉದ್ಯೋಗಸ್ಥರ ನಡುವೆ ಪರಸ್ಪರ ಸಹಕಾರ. ಸಣ್ಣ ಪ್ರಮಾಣದ ಗೃಹೋದ್ಯಮ ಪ್ರಗತಿಯಲ್ಲಿ. ಕರಕುಶಲ ಸಾಮಗ್ರಿ ತಯಾರಕರಿಗೆ ಪ್ರೋತ್ಸಾಹ. ಸಮಾಜ ಸಂಘಟನೆಯಲ್ಲಿ ಆಸಕ್ತಿ. ಗಣೇಶ ಕವಚ, ಆದಿತ್ಯ ಹೃದಯ ಓದಿ.
ಮಕರ:
ಸಾಂಸಾರಿಕ ರಂಗದಲ್ಲಿ ನೆಮ್ಮದಿ.. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ. ಮಕ್ಕಳ ಜ್ಞಾನವೃದ್ಧಿಗೆ ವಿಶೇಷ ಪ್ರಯತ್ನ. ಅಸಹಾಯಕರಿಗೆ ನೆರವಾಗುವ ಅವಕಾಶ. ಪೂಜೆ, ಭಜನೆಯಲ್ಲಿ ಭಾಗಿ. ಗಣಪತಿ ಅಥರ್ವಶೀರ್ಷ, ಹನುಮಾನ್ ಚಾಲೀಸಾ ಓದಿ.
ಕುಂಭ:
ಉದ್ಯೋಗಸ್ಥರಿಗೆ ಹೊಸ ವಿಭಾಗದಲ್ಲಿ ಯಶಸ್ಸು.. ವೃತ್ತಿರಂಗದ ಮಿತ್ರರಿಂದ ಸಹಾಯಕ್ಕೆ ಕೋರಿಕೆ. ಗ್ರಾಹಕರ ವಿಶ್ವಾಸ ಉಳಿಸುವ ಪ್ರಯತ್ನ. ಉದ್ಯೋಗಾಸಕ್ತರಿಗೆ ಅವಕಾಶ ಗೋಚರ. ಬಂಧುವರ್ಗದಲ್ಲಿ ವಿವಾಹ ಪ್ರಯತ್ನ. ಗಣೇಶ ಸ್ತೋತ್ರ, ಶನಿಮಹಾತ್ಮೆ ಓದಿ.
ಮೀನ:
ಕೊಂಚ ಸಡಿಲಾದ ಕೆಲಸಗಳ ಒತ್ತಡ.. ಪ್ರಭಾವಿ ವ್ಯಕ್ತಿಯ ನೆರವಿನ ಭರವಸೆ. ಭೂಮಿ ವ್ಯವಹಾರ ಮತ್ತೆ ಆರಂಭ. ಗುರುಸಮಾನ ವ್ಯಕ್ತಿಯ ಆಗಮನ. ಪ್ರಕೃತಿ ಸಂರಕ್ಷಣೆಯಲ್ಲಿ ಭಾಗಿ.ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ ಓದಿ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.