Jeetendra Mishra: ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ CEO ಆಗಿ ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ನೇಮಕ
Jeetendra Mishra: ಶ್ರೀರಾಮ ಜನ್ಮಭೂಮಿ ತೀರ್ಥ ಟ್ರಸ್ಟ್‌ನ ಮೊದಲ ಪೂರ್ಣ ಅವಧಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿ, ನಿವೃತ್ತ ಬುಧವಾರ ಜೀತೇಂದ್ರ ಮಿಶ್ರಾ ನೇಮಕಗೊಂಡಿದ್ದಾರೆ.
ಅಯೋಧ್ಯೆ: ಶ್ರೀರಾಮ ಜನ್ಮಭೂಮಿ ತೀರ್ಥ ಟ್ರಸ್ಟ್‌ನ ಮೊದಲ ಪೂರ್ಣ ಅವಧಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿ, ನಿವೃತ್ತ ಬುಧವಾರ ಜೀತೇಂದ್ರ ಮಿಶ್ರಾ (Jeetendra Mishra) ಬುಧವಾರ ನೇಮಕಗೊಂಡಿದ್ದಾರೆ.
ಯುದ್ಧ ವಿಮಾನ ಪೈಲಟ್ ಆಗಿದ್ದ ಮಿಶ್ರಾ ಅವರು, 'ಆಪರೇಷನ್ ಸಿಂಧೂರ'ದ ವೇಳೆ, ಪಶ್ಚಿಮ ವಾಯು ಕಮಾಂಡ್‌ನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಅವರಿಗೆ ಸರ್ವೋತ್ತಮ ಯುದ್ಧ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ ಹಾಗೂ ವಿಶಿಷ್ಟ ಸೇವಾ ಪದಕ ಸೇರಿದಂತೆ ವಿವಿಧ ಸೇನಾ ಪುರಸ್ಕಾರಗಳು ಸಂದಿವೆ.
ಜೀತೇಂದ್ರ ಮಿಶ್ರಾ ಅವರೊಂದಿಗೆ ಸಿಇಒ ಹುದ್ದೆಗೆ ಮಾಜಿ ಐಪಿಎಸ್ ಅಧಿಕಾರಿ ರಾಜೇಶ್ ಪಾಂಡೆ, ನಿವೃತ್ತ ಐಎಎಸ್ ಅಧಿಕಾರಿ ದಿನೇಶ್ ಚಂದ್ರ, ಮಾಜಿ ಐಎಎಸ್ ಅಧಿಕಾರಿ ಯೋಗೇಶ್ವರ ರಾಮ್ ಮಿಶ್ರಾ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಪರೇಶ್ ಸಕ್ಸೇನಾ ಅವರ ಹೆಸರುಗಳು ಕೂಡ ಕೇಳಿಬಂದಿದ್ದವು.
ದೇಣಿಗೆ ಅಕ್ರಮಗಳ ಆರೋಪ ಹಾಗೂ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ರಾಜೀನಾಮೆ ಹಿನ್ನೆಲೆ, ಈ ಬದಲಾವಣೆ ಮಾಡಲಾಗಿದೆ. ಸಿಇಒ ಟ್ರಸ್ಟ್ ಪ್ರಧಾನ ಕಾರ್ಯದರ್ಶಿಗೆ ವರದಿ ಮಾಡಲಿದ್ದು, ದೀರ್ಘಕಾಲೀನ ಯೋಜನೆ ರೂಪಿಸುವ ಜವಾಬ್ದಾರಿಯನ್ನು ವಹಿಸುವ ನಿರೀಕ್ಷೆಯಿದೆ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.