ದಿನ ಭವಿಷ್ಯ: ಇಂದು ಯಾವ ರಾಶಿಗೆ ಶುಭ ಫಲ?
Daily Horoscope: ಇಂದು (ಮಂಗಳವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.
ಮೇಷ:
ಗುರುತರವಾದ ಹೊಣೆಗಾರಿಕೆಗಳು.. ಸಮಯಕ್ಕೆ ತಕ್ಕ ಮಾರ್ಗೋಪಾಯ ಅನುಸರಣೆ. ಸರ್ಕಾರಿ ಉದ್ಯೋಗಸ್ಥರ ಸತ್ವಪರೀಕ್ಷೆಗೆ ಭೂಮಿಕೆ ಸಜ್ಜು. ಉದ್ಯಮಿಗಳ ವರ್ಗಕ್ಕೆ ಸಮಾಧಾನ. ಮಕ್ಕಳಿಗೆ ಕಲಿಕೆಯಲ್ಲಿ ಉತ್ಸಾಹ ವೃದ್ಧಿ. ಗಣೇಶ ಕವಚ, ದತ್ತಪಂಜರ ಸ್ತೋತ್ರ, ಶನಿಮಹಾತ್ಮೆ ಓದಿ.
ವೃಷಭ:
ಅವಕಾಶಗಳು ಮತ್ತು ಅದೃಷ್ಟವನ್ನೂ ಹೊತ್ತು ತಂದ ಮಂಗಳವಾರ.. ವಾಹನ ದುರಸ್ತಿ ಮಾಡುವವರಿಗೆ ಅನುಕೂಲದ ದಿನ. ಸಿದ್ಧ ಉಡುಪುಗಳು ಹಾಗೂ ವಸ್ತ್ರ ಉದ್ಯಮಕ್ಕೆ ಶುಕ್ರದೆಶೆ. ಕುಟುಂಬದಲ್ಲಿ ಸಾಮರಸ್ಯ ವೃದ್ಧಿ. ಆಹಾರ ಸೇವನೆಯಲ್ಲಿ ಎಚ್ಚರ ಇರಲಿ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.
ಮಿಥುನ:
ಸಕಾಲಕ್ಕೆ ಕಾರ್ಯ ನಿರ್ವಹಿಸುವ ಚಾಕಚಕ್ಯತೆ.. ಹುದ್ದೆಯಲ್ಲಿ ಮುಂದುವರಿಯುವ ನಿರ್ಧಾರ. ಹಳೆಯ ಗೆಳೆಯ ಮತ್ತೆ ಸಂಪರ್ಕಕ್ಕೆ. ಜನಸೇವಾ ಕಾರ್ಯಗಳಲ್ಲಿ ಆಸಕ್ತಿ. ಆರೋಗ್ಯ ವೃದ್ಧಿಯಿಂದ ನೆಮ್ಮದಿ. ಗಣೇಶ ದ್ವಾದಶನಾಮ ಸ್ತೋತ್ರ, ವಿಷ್ಣು ಸಹಸ್ರನಾಮ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
ಕರ್ಕಾಟಕ:
ಶಿಸ್ತುಬದ್ಧ ಜೀವನ, ಕ್ರಮಬದ್ಧ ಕಾರ್ಯಶೈಲಿ.. ಉದ್ಯೋಗಸ್ಥರಿಗೆ ಉತ್ತೇಜನದ ಅನುಭವ. ಉದ್ಯಮಗಳ ಬೆಳವಣಿಗೆಗೆ ಅನುಕೂಲದ ಸನ್ನಿವೇಶ. ಮಹಿಳೆಯರ ಸ್ವೋದ್ಯೋಗ ಯೋಜನೆಗಳಿಗೆ ಕೀರ್ತಿ ರಾತ್ರಿ ಪ್ರಯಾಣದಲ್ಲಿ ಎಚ್ಚರ. ಗಣೇಶ ಪಂಚರತ್ನ, ಸುಬ್ರಹ್ಮಣ್ಯ ಸ್ತೋತ್ರ, ಆದಿತ್ಯ ಹೃದಯ ಓದಿ.
ಸಿಂಹ:
ಉದ್ಯೋಗಸ್ಥರಿಗೆ ಎಲ್ಲರ ಸಹಕಾರ.. ಉದ್ಯಮಕ್ಕೆ ನವಚೈತನ್ಯ ನೀಡುವ ಪ್ರಕ್ರಿಯೆ ಮುಂದುವರಿಕೆ. ಪರಿಣತರ ಸಲಹೆಯಂತೆ ಹೊಸ ಕ್ರಮಗಳು. ಕುಟುಂಬದಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ. ಲೋಕಹಿತ ಚಿಂತನೆಯಿಂದ ನೆಮ್ಮದಿ. ಸಂಕಷ್ಟನಾಶನ ಗಣೇಶ ಸ್ತೋತ್ರ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಸೂರ್ಯಮಂಡಲ ಸ್ತೋತ್ರ ಓದಿ.
ಕನ್ಯಾ:
ಸ್ವಪ್ರಯತ್ನದಿಂದ ಮಾತ್ರ ಉನ್ನತಿ.. ಸಣ್ಣ ಉದ್ಯಮ ಘಟಕಗಳ ಪ್ರಗತಿ ಆರಂಭ. ದೂರದೇಶದಲ್ಲಿರುವ ಮಿತ್ರರಿಂದ ವ್ಯವಹಾರದ ಪ್ರಸ್ತಾವ. ಕೇಟರಿಂಗ್ ವ್ಯವಹಾರಸ್ಥರಿಗೆ ಮಧ್ಯಮ ಫಲ. ವಿವಾಹ ಮಾತುಕತೆಯಲ್ಲಿ ಭಾಗಿ. ಗಣಪತೀ ಅಥರ್ವಶೀರ್ಷ, ದೇವೀಸ್ತೋತ್ರ, ಹನುಮಾನ್ ಚಾಲೀಸಾ ಓದಿ.
ತುಲಾ:
ಪರಿಚಿತರಲ್ಲಿ ಮಿತ್ರತ್ವ ವೃದ್ಧಿ. ಉತ್ಪಾದನಾ ಕ್ಷೇತ್ರದಲ್ಲಿ ಪೈಪೋಟಿ ಶಮನ. ಉದ್ಯೋಗಾಪೇಕ್ಷಿಗಳಿಗೆ ಅನುಕೂಲ ವಾತಾವರಣ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಅಪರಿಚಿತ ಸ್ಥಳದಲ್ಲಿ ಆಹಾರ ಸೇವಿಸುವಾಗ ಎಚ್ಚರ. ಗಣೇಶ ಅಷ್ಟಕ, ರಾಮರಕ್ಷಾ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
ವೃಶ್ಚಿಕ:
ಉದ್ಯೋಗಸ್ಥರಿಗೆ ಮಧ್ಯಮ ಅನುಭವ.. ಸರ್ಕಾರಿ ಅಧಿಕಾರಿಗಳಿಗೆ ಸತ್ವಪರೀಕ್ಷೆ. ರಾಜಕಾರಣಿಗಳಿಗೆ ಅನಿಶ್ಚಿತ ಪರಿಸ್ಥಿತಿ. ವಸ್ತ್ರ, ಆಭರಣ, ಗೃಹೋಪಯೋಗಿ ಸಾಮಗ್ರಿಗಳ ವ್ಯಾಪಾರಿಗಳಿಗೆ ಲಾಭ. ಆಸ್ತಿ ಖರೀದಿ-ಮಾರಾಟ ವ್ಯವಹಾರಸ್ಥರಿಗೆ ಹಾನಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.
ಧನು:
ವೈವಿಧ್ಯೀಕರಣದಿಂದ ಲಾಭ. ಹಿರಿಯ ನಾಗರಿಕರ ಆರೋಗ್ಯ ರಕ್ಷಣೆಗೆ ಸಹಾಯ. ಮಕ್ಕಳ ಪ್ರತಿಭೆ ವಿಕಸನಕ್ಕೆ ಪ್ರೋತ್ಸಾಹ. ಸಾಮೂಹಿಕ ಪ್ರಯತ್ನದಿಂದ ವಾತಾವರಣ ಶುದ್ಧಿ. ಬೌದ್ಧಿಕ ಶ್ರಮಕ್ಕೆ ಯೋಗ್ಯ ಪ್ರತಿಫಲ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.
ಮಕರ:
ಹೆಸರು ಕೆಡಿಸುವವರ ಮಸಲತ್ತಿಗೆ ಸೋಲು.. ಉದ್ಯಮಿಗಳಿಗೆ ಹಠಾತ್ ನಷ್ಟವಾಗುವ ಭೀತಿ. ಯಂತ್ರೋಪಕರಣ ಉದ್ಯಮಿಗಳಿಗೆ ಅನುಕೂಲದ ವಾತಾವರಣ. ಹಿರಿಯರನ್ನು ಸಮ್ಮಾನಿಸುವ ಅವಕಾಶ ಪ್ರಾಪ್ತಿ. ಮಕ್ಕಳ ಓದು ಸುಧಾರಣೆಯತ್ತ ಗಮನ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
ಕುಂಭ:
ಮುಖ್ಯ ಕಾರ್ಯಗಳ ನಿಯೋಜನೆ.. ಉದ್ಯೋಗಸ್ಥರಿಗೆ ಹಿತಕರವಾದ ವಾತಾವರಣ. ಸರ್ಕಾರಿ ನೌಕರರಿಗೆ ನಿಶ್ಚಿಂತೆಯ ಅನುಭವ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯಿಂದ ಲಾಭ. ಸಾಹಿತ್ಯ, ಲಲಿತ ಕಲೆಗಳಲ್ಲಿ ಆಸಕ್ತರಿಗೆ ಆನಂದ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.
ಮೀನ:
ವಾತಾವರಣ ಸಾಮಾನ್ಯವಾಗಿದ್ದರೂ ಕಾರ್ಯದಲ್ಲಿ ಮುನ್ನಡೆ... ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ. ಇಲಾಖೆಗಳವರಿಂದ ಉತ್ತಮ ಸಹಕಾರ. ಆವಶ್ಯಕತೆ ಉಳ್ಳವರಿಗೆ ಸಹಾಯ ಮಾಡುವ ಅವಕಾಶ. ಸಂಸಾರದಲ್ಲಿ ಪ್ರೀತಿ, ಸಾಮರಸ್ಯ ವೃದ್ಧಿ.ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.