Puttur: ಹಿಂದೂಪರ ಸಂಘಟನೆಗಳಿಂದ ಪುತ್ತೂರು ಚಲೋ.. ಬೇಡಿಕೆ ಈಡೇರಿಕೆಗೆ ಒತ್ತಾಯ
Puttur: ಹಿಂದೂಪರ ಸಂಘಟನೆಗಳಿಂದ 'ಪುತ್ತೂರು ಚಲೋ ರ‍್ಯಾಲಿ' ನಡೆಸಲಾಯಿತು.
ಪುತ್ತೂರು: ಇತ್ತೀಚೆಗೆ ದರ್ಬೆಯ ಅಂಗಡಿಯೊಂದರಲ್ಲಿ ನಡೆದ ಘಟನೆ ಖಂಡಿಸಿ ಹಾಗೂ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಇಂದು ಹಿಂದೂ ಜಾಗರಣ ವೇದಿಕೆ, ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದಿಂದ ಪುತ್ತೂರು ಚಲೋ ರ‍್ಯಾಲಿ (Puttur Chalo Rally) ನಡೆಯಿತು.
ದರ್ಬೆ ವೃತ್ತದಿಂದ ಹಿಂದೂಪರ ಸಂಘಟನೆಗಳ ಕಾಲ್ನಡಿಗೆ ಜಾಥಾ ಶುರುವಾಗಿ, ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ಪ್ರಾರ್ಥನೆಯೊಂದಿಗೆ ಮುಕ್ತಾಯಗೊಂಡಿತು.

ಈ ಚಲೋ ಹಿನ್ನಲೆ, ನಗರಾದ್ಯಂತ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಜಾಥಾದಲ್ಲಿ 1500 ಮಂದಿಗೆ ಭಾಗವಹಿಸಲು ಮಾತ್ರ ಅನುಮತಿ ನೀಡಿದ್ದರು.
5 ಪ್ರಮುಖ ಬೇಡಿಕೆ ಈಡೇರಿಕೆಗೆ ಒತ್ತಾಯ:
ಅಂಜನಾ ಪೈ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿ, ಕಠಿಣ ಕ್ರಮ ಕೈಗೊಳ್ಳಬೇಕು. ನಿಯಾಜ್ ಹಾಗೂ ನೌಷಾದ್ ವಿರುದ್ಧ ಗೂಂಡಾ ಕಾಯ್ದೆ ಹಾಕಬೇಕು. ಘಟನೆಯಲ್ಲಿ ನಿಷೇಧಿತ ಪಿಎಫ್‌ಐ ಸಂಘಟನೆ ಪಾತ್ರದ ಬಗ್ಗೆ ತನಿಖೆ ಮಾಡಬೇಕು. ಕಾರ್ಯಕರ್ತರ ಮೇಲೆ ಆಧಾರ ರಹಿತ ಪ್ರಕರಣ ದಾಖಲಿಸಬಾರದು ಹಾಗೂ ಪೊಲೀಸ್ ಇಲಾಖೆ ನಿಷ್ಪಕ್ಷಪಾತ ತನಿಖೆ ನಡೆಸಲು ಆಗ್ರಹಿಸಿದರು.