Commercial LPG Cylinder Price: ದೇಶದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ.. ಎಷ್ಟು?
Commercial LPG Cylinder Price: ದೇಶೀಯ ತೈಲೋತ್ಪನ್ನ ಕಂಪನಿಗಳು, 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ (Commercial LPG Cylinder) ಬೆಲೆಯನ್ನು ಅತ್ಯಲ್ಪ ಏರಿಕೆ ಮಾಡಿವೆ.
ನವದೆಹಲಿ: ದೇಶೀಯ ತೈಲೋತ್ಪನ್ನ ಕಂಪನಿಗಳು, 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ (Commercial LPG Cylinder) ಬೆಲೆಯನ್ನು ಅತ್ಯಲ್ಪ ಏರಿಕೆ ಮಾಡಿವೆ. ಪರಿಷ್ಕೃತ ದರಗಳು ಇಂದಿನಿಂದಲೇ (ಸೆ.1) ಜಾರಿಗೆ ಬರಲಿವೆ.
ದೆಹಲಿಯಲ್ಲಿ ರೂ.9.50 ಹೆಚ್ಚಿಸಲಾಗಿದ್ದು, ರೂ.2,747.50ಕ್ಕೆ ತಲುಪಿದೆ. ಮುಂಬೈನಲ್ಲಿ ರೂ.2,701 ಹಾಗೂ ಚೆನ್ನೈನಲ್ಲಿ ರೂ.2,916.50 ಇದೆ. ಕೋಲ್ಕತ್ತಾ ಗರಿಷ್ಠ ಅಂದರೆ ರೂ.11.50 ಏರಿಕೆಯಾಗಿದ್ದು, ರೂ.2,884 ಆಗಿದೆ.
ಬೆಂಗಳೂರಿನಲ್ಲಿ ರೂ.10 ಹೆಚ್ಚಳವಾಗಿ ರೂ.2,831ಕ್ಕೆ ಬಂದಿದೆ. ತಿರುವನಂತಪುರಂನಲ್ಲಿಯೂ ರೂ.10 ಅಧಿಕಗೊಂಡಿದ್ದು, ರೂ.2,784ಕ್ಕೆ ಮುಟ್ಟಿದೆ. ಭುವನೇಶ್ವರ ಹಾಗೂ ಹೈದರಾಬಾದ್‌ನಲ್ಲಿ ರೂ.11 ಏರಿಕೆಯಾಗಿದ್ದು, ಕ್ರಮವಾಗಿ 2,919 ಹಾಗೂ 2,996 ಇದೆ.
ಆದಾಗ್ಯೂ ತೈಲೋತ್ಪನ್ನ ಕಂಪನಿಗಳು, 14.2 ಕೆಜಿ ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಯಾವುದೇ ರೀತಿಯಲ್ಲಿ ಏರಿಕೆ ಮಾಡಿಲ್ಲ. ಇದರಿಂದ ಮಧ್ಯಮ ವರ್ಗದ ಜನರಿಗೆ ರಿಲೀಫ್ ದೊರೆತಿದೆ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.