ದಿನ ಭವಿಷ್ಯ: ಇಂದು ಯಾರಿಗೆ ಶುಭ ಫಲ?

Daily Horoscope: ಇಂದು (ಗುರುವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.

Sep 3, 2026 - 09:53
ದಿನ ಭವಿಷ್ಯ:  ಇಂದು ಯಾರಿಗೆ ಶುಭ ಫಲ?

ಮೇಷ:

ಹಬ್ಬದ ಆಚರಣೆಗೆ ಸಿದ್ಧತೆ.. ಉದ್ಯೋಗ ಸ್ಥಾನದಲ್ಲಿ ಸಾಧನೆ ನಿರಾತಂಕ. ಹೊಸ ಹೂಡಿಕೆಗಳಲ್ಲಿ ಲಾಭದ ಸೂಚನೆ. ಮಹಿಳಾ ಉದ್ಯಮಿಗಳಿಗೆ ಯಶಸ್ಸು. ಸಚ್ಚಾರಿತ್ರ್ಯ ಮೆರೆದ ನಾಯಕರಿಗೆ ವಿಜಯ.ಗಣೇಶ ಕವಚ, ಶಿವಸಹಸ್ರನಾಮ, ಶನಿಮಹಾತ್ಮೆ ಓದಿ.

ವೃಷಭ:

ಈ ಗುರುವಾರ ಅಮೋಘವಾಗಿದೆ.. ಖಾದಿ ಉಡುಪು ಹಾಗೂ ವಸ್ತ್ರ ವ್ಯಾಪಾರಿಗಳಿಗೆ ಹೇರಳ ಲಾಭ. ಶ್ರಮಿಕ ವರ್ಗಕ್ಕೆ ಅನುಕೂಲವಾದ ವಾತಾವರಣ. ಕೇಟರಿಂಗ್ ವ್ಯವಹಾರಸ್ಥರಿಗೆ ಉತ್ತಮ ಲಾಭ. ವಿದ್ಯಾರ್ಥಿಗಳ ಅಧ್ಯಯನಾಸಕ್ತಿ ವೃದ್ಧಿ. ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ಗುರುಸ್ತೋತ್ರ ಓದಿ.

ಮಿಥುನ:

ಉದರದ ಆರೋಗ್ಯದ ಕಡೆಗೆ ನಿಗಾ ಇರಲಿ.. ದೂರ ಪ್ರಯಾಣ ಮಾಡುವುದು ಬೇಡ. ಹಿತ ಶತ್ರುಗಳ ವಿಷಯದಲ್ಲಿ ಎಚ್ಚರ ಇರಲಿ. ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ. ಹಿರಿಯರ ಜೀವನೋತ್ಸಾಹ ವೃದ್ಧಿ ಕೊರತೆ. ಗಣೇಶ ಅಷ್ಟಕ, ದತ್ತಾತ್ರೇಯ ಸ್ತೋತ್ರ, ಆದಿತ್ಯ ಹೃದಯ ಓದಿ.

ಕರ್ಕಾಟಕ:

ಉದ್ಯೋಗಸ್ಥರ ಆರ್ಥಿಕ ತೊಂದರೆ ಪರಿಹಾರ.. ಉದ್ಯಮಗಳಿಗೆ ಅನಾಯಾಸವಾಗಿ ನೆರವು. ಮಹಿಳಾ ಉದ್ಯಮಿಗಳಿಗೆ ಸಾಂಸ್ಥಿಕ ನೆರವು ಲಭ್ಯ. ಹಿರಿಯರಿಗೆ ಮನೋಬಲದಿಂದ ಆರೋಗ್ಯ ಪ್ರಾಪ್ತಿ. ಮಕ್ಕಳಿಗದ ಚಿತ್ರಕಲಾಯಲ್ಲಿ ಆಸಕ್ತಿ. ಗಣೇಶ ದ್ವಾದಶನಾಮ, ವಿಷ್ಣು ಸಹಸ್ರನಾಮ, ಹನುಮಾನ್ ಚಾಲೀಸಾ ಓದಿ.

ಸಿಂಹ:

ಅವಸರದ ತೀರ್ಮಾನಗಳು ಬೇಡ.. ಹಲವು  ವ್ಯವಹಾರಗಳತ್ತ ಗಮನ ಕೊಡಲು ಒತ್ತಡ. ಉದ್ಯೋಗಸ್ಥರಿಗೆ ಘಟಕದ ನೇತೃತ್ವ ಲಭ್ಯ. ಸಿವಿಲ್ ಎಂಜಿನಿಯರ್ ಗಳಿಗೆ ಅನುಕೂಲದ ದಿನ. ನ್ಯಾಯಾಲಯದಲ್ಲಿರುವ ವ್ಯಾಜ್ಯ ಮುಂದಕ್ಕೆ. ಗಣೇಶ ಪಂಚರತ್ನ, ದಕ್ಷಿಣಾಮೂರ್ತಿ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

ಕನ್ಯಾ:

ಕಾರ್ಯಕ್ಷೇತ್ರದಲ್ಲಿ ಹಬ್ಬ ಆಚರಣೆಗೆ ಸಿದ್ಧತೆ.. ಪ್ರತಿಭೆ ಹಾಗೂ ಕಾರ್ಯನಿಷ್ಠೆಗೆ ಉನ್ನತರ ಮೆಚ್ಚುಗೆ. ಉದ್ಯೋಗ ಅರಸುವವರಿಗೆ  ಯೋಗ್ಯ ಹುದ್ದೆಯ ಭರವಸೆ. ದೂರದೂರಿಗೆ ಪ್ರಯಾಣ ಮುಂದಕ್ಕೆ. ಅಧ್ಯಾಪಕರ ಆತಂಕ ನಿವಾರಣೆ. ಸಂಕಷ್ಟನಾಶನ ಗಣೇಶ ಸ್ತೋತ್ರ, ದಾರಿದ್ರ್ಯದಹನ ಶಿವಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

ತುಲಾ:

ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಅವಕಾಶ ಗೋಚರ.. ಲೇವಾದೇವಿ ವ್ಯವಹಾರ ಬೇಡ. ಸಂಸಾರದಲ್ಲಿ ಹುಳಿ ಹಿಂಡುವವರಿಗೆ ಯೋಗ್ಯ ಪಾಠ. ಹಿರಿಯರ ಆಸ್ತಿ ಜೋಪಾನಕ್ಕೆ ಕ್ರಮ. ದೇವಾಲಯ ದರ್ಶನದ ಸಾಧ್ಯತೆ. ಗಣೇಶ ಅಷ್ಟಕ, ದತ್ತಪಂಜರ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.

ವೃಶ್ಚಿಕ:

ಎಲ್ಲ ಬಗೆಯ ವೃತ್ತಿಗಳವರಿಗೆ ಹಿತಾನುಭವ.. ಉದ್ಯೋಗಸ್ಥರ ಸ್ಥಾನ ಗೌರವ ವೃದ್ಧಿ. ಸರ್ಕಾರಿ ಅಧಿಕಾರಿಗಳಿಗೆ ಸ್ವಲ್ಪ ನೆಮ್ಮದಿ. ಉನ್ನತ ರಾಜಕಾರಣಿಗಳಿಗೆ ಅಧಿಕಾರ ದಾಹ. ವಸ್ತ್ರ, ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

ಧನು:

ಪ್ರತಿಭೆ ಕೌಶಲ ಉಳ್ಳವರಿಗೆ ಯಶಸ್ಸು ಖಚಿತ.. ಉದ್ಯೋಗ ಘಟಕದ ಕಾರ್ಯ ನಿರ್ವಹಣೆಗೆ ಹೊಸ ರೂಪ. ಪರಿಸರದ ಸ್ವರೂಪ ಬದಲಾವಣೆಗೆ ಆದ್ಯತೆ. ಬಂಧುಗಳ ಮನೆಯಲ್ಲಿ ಹಬ್ಬದ ಸಿದ್ಧತೆ. ಹಿರಿಯರ ಆರೋಗ್ಯದ ಕುರಿತು ಕಾಳಜಿ. ಗಣೇಶ ಪಂಚರತ್ನ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.

ಮಕರ:

ಪ್ರಕೃತಿಯೊಂದಿಗೆ ಸಾಮರಸ್ಯ ಸಾಧಿಸುವ ಪ್ರಯತ್ನ.. ವೃತ್ತಿಪರರಿಗೆ ಸಮಯದ ಒತ್ತಡ. ಬಂಧುವರ್ಗದಲ್ಲಿ ಸಾಮರಸ್ಯ ಸ್ಥಾಪನೆ. ಹಿರಿಯರ, ಮಕ್ಕಳ ಆರೋಗ್ಯ ಸುಧಾರಣೆ. ಮಕ್ಕಳನ್ನು ಸಾಕುಪ್ರಾಣಿಗಳಿಂದ ದೂರವಿಡಿ. ಗಣೇಶ ಕವಚ, ದತ್ತಪಂಜರ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

ಕುಂಭ:

ಉದ್ಯೋಗಸ್ಥರಿಗೆ ಹಿತವಾದ ಅನುಭವ.. ಸರ್ಕಾರಿ ನೌಕರರಿಗೆ ಜವಾಬ್ದಾರಿಗಳ ಹೊರೆ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಸಂಗೀತ, ನೃತ್ಯ ಕಲೆಗಳನ್ನು ಅಭ್ಯಾಸ ಮಾಡುವವರಿಗೆ ಸಂತೃಪ್ತಿಯ ಅನುಭವ. ತೋಟಗಾರಿಕೆ ಬೆಳೆಗಳಲ್ಲಿ ಆಸಕ್ತಿ. ಗಣಪತಿ ಅಥರ್ವಶೀರ್ಷ, ವೇದಸಾರ ಶಿವಸ್ತೋತ್ರ, ಶನಿಮಹಾತ್ಮೆ ಓದಿ.

ಮೀನ:

ಅಧಿಕಾರಿ ವರ್ಗದವರಿಂದ ಸರ್ವವಿಧ ಸಹಾಯ.. ಸ್ವಂತ ಉದ್ಯಮ ಹೊಸ ರೂಪದಲ್ಲಿ ಮುನ್ನಡೆ. ದೇವತಾ ಸಾನ್ನಿಧ್ಯಕ್ಕೆ ಭೇಟಿ. ಮಕ್ಕಳ ಅಧ್ಯಯನಾಸಕ್ತಿ ವೃದ್ಧಿಗೆ ಪ್ರಯತ್ನ. ಹಳೆಯ ಗೆಳೆಯನ ಭೇಟಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.