ದಿನ ಭವಿಷ್ಯ: ಇಂದು ಯಾವ ರಾಶಿಗೆ ಶುಭ ಫಲ?

Daily Horoscope: ಇಂದು (ಗುರುವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.

Aug 27, 2026 - 10:57
ದಿನ ಭವಿಷ್ಯ: ಇಂದು ಯಾವ ರಾಶಿಗೆ ಶುಭ ಫಲ?

ಮೇಷ:

ಸಪ್ತಾಹದಲ್ಲಿ ಮಹತ್ವದ  ದಿನವೇ ಗುರುವಾರ.. ದೈಹಿಕ, ಬೌದ್ಧಿಕ ಕಾರ್ಯಗಳ ಒತ್ತಡ. ಅನಿವಾರ್ಯವಾದ ಓಡಾಟ. ಉದ್ಯೋಗ, ಉದ್ಯಮಗಳಲ್ಲಿ ಯಶಸ್ಸು. ಆಪ್ತರಿಂದ ಸಕಾಲದಲ್ಲಿ ಸಹಾಯ ಲಭ್ಯ. ಗೃಹಿಣಿಯರ  ಆರೋಗ್ಯದ ಕಡೆಗೆ ಗಮನ ಇರಲಿ. ಬಂಧುಗಳ ಭೇಟಿಯ ಸಾಧ್ಯತೆ. ಗಣೇಶ ಕವಚ, ಶಿವಸಹಸ್ರನಾಮ, ಶನಿ ಮಹಾತ್ಮೆ ಓದಿ.

ವೃಷಭ:

ಗುರುವಿನ ಅನುಗ್ರಹದಿಂದ ನಿಶ್ಚಿಂತೆ.. ಉದ್ಯೋಗದಲ್ಲಿ ಹೆಚ್ಚು ಸಂತೃಪ್ತಿ. ಸರ್ಕಾರಿ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಸಮಾಧಾನ. ಉದ್ಯಮಗಳಲ್ಲಿ ಉತ್ಪಾದನೆ ಹೆಚ್ಚಳ ಹಿರಿಯ ಗೆಳೆಯರ ಅಕಸ್ಮಾತ್ ಭೇಟಿ. ಗಣೇಶ ಅಷ್ಟಕ, ರಾಮರಕ್ಷಾ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.

ಮಿಥುನ:

ಯಾವುದರಲ್ಲೂ ವಿಳಂಬ ನೀತಿ ಬೇಡ.. ಒಂದೇ ಬಾರಿಗೆ ಯಾರನ್ನೂ ನಂಬದಿರಿ. ಉದ್ಯಮದಲ್ಲಿ ಪ್ರಗತಿ ತೃಪ್ತಿಕರ. ವ್ಯವಹಾರ ನಿಮಿತ್ತ ಸಣ್ಣ ಪ್ರಯಾಣದ ಸಾಧ್ಯತೆ. ಅಸ್ವಸ್ಥರಿಗೆ ಮನಸ್ಥೈರ್ಯ ತುಂಬಲು ಪ್ರಯತ್ನ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಶನಿಸ್ತೋತ್ರ ಓದಿ.

ಕರ್ಕಾಟಕ:

ಉತ್ಪಾದನೆಗಳಲ್ಲಿ ಗುಣಮಟ್ಟಕ್ಕೆ  ಪ್ರಾಧಾನ್ಯ.. ವಸ್ತ್ರ, ಸಿದ್ಧ ಉಡುಪು, ಆಭರಣ, ಶೋಕಿ ವಸ್ತುಗಳ ವ್ಯಾಪಾರ ವೃದ್ಧಿ. ದೀರ್ಘಾವಧಿ ಹೂಡಿಕೆಗಳಿಂದ ಲಾಭ. ಉದ್ಯೋಗಸ್ಥರಿಗೆ ಸಾಮಾನ್ಯ ಅನುಭವ.  ಮನೆಯಲ್ಲಿ ಉಲ್ಲಾಸ, ಸಮಾಧಾನ. ಗಣೇಶ ದ್ವಾದಶನಾಮ ಸ್ತೋತ್ರ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

ಸಿಂಹ:

ಎಲ್ಲರ ಜೊತೆಯಲ್ಲಿ ಮುನ್ನಡೆ.. ಹೊಸ ಪರಿಚಯಸ್ಥರ ಸಹಾಯದಿಂದ ವ್ಯಾಪಾರ ವೃದ್ಧಿ. ಕಟ್ಟಡ ನಿರ್ಮಾಣ ಕಾಮಗಾರಿ ತ್ವರಿತ ಗತಿಯಲ್ಲಿ. ವಾಹನ ಖರೀದಿ-ಮಾರಾಟದಲ್ಲಿ ಲಾಭ. ಬಂಧುಗಳ ಮನೆಯ ಶುಭಕಾರ್ಯದಲ್ಲಿ ಭಾಗಿ. ಸಂಕಷ್ಟನಾಶನ ಗಣೇಶ ಸ್ತೋತ್ರ, ಶಿವಕವಚ, ಹನುಮಾನ್ ಚಾಲೀಸಾ ಓದಿ.

ಕನ್ಯಾ:

ಮನೆಯಲ್ಲಿ ಶಾಂತಿ,ಸಮಾಧಾನ.. ಆತ್ಮೀಯರ ಭೇಟಿಯಿಂದ ಹರ್ಷ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಉದ್ಯೋಗಾಸಕ್ತರಿಗೆ  ಆಶಾದಾಯಕ ಅವಕಾಶಗಳು. ಕೃಷ್ಯುತ್ಪನ್ನ ವ್ಯಾಪಾರ ಲಾಭದಾಯಕ. ಗಣೇಶ ಸ್ತೋತ್ರ, ರಾಮ ಭುಜಂಗಪ್ರಯಾತ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.

ತುಲಾ:

ಸಾಂಸಾರಿಕ ವಲಯದಲ್ಲಿ ನಿಶ್ಚಿಂತೆ.. ಪ್ರತಿಭಾವಂತರಿಗೆ ಗೌರವ ಪ್ರಾಪ್ತಿ. ಅಕಸ್ಮಾತ್ ಧನಾಗಮ. ಗೃಹಾಲಂಕಾರಕ್ಕೆ ಧನವ್ಯಯ. ಕುಶಲಕರ್ಮಿಗಳ ಕೃತಿಗಳಿಗೆ ಉತ್ತಮ ಬೇಡಿಕೆ. ಲಲಿತ ಕಲೆಗಳಲ್ಲಿ ಆಸಕ್ತರಿಗೆ ಅವಕಾಶ. ಗಣೇಶ ಪಂಚರತ್ನ, ಮಹಿಷಮರ್ದಿನಿ ಸ್ತೋತ್ರ, ಸುಬ್ರಹ್ಮಣ್ಯ ಭುಜಂಗ ಸ್ತೋತ್ರ ಓದಿ.

ವೃಶ್ಚಿಕ:

ಉದ್ಯೋಗಸ್ಥರ ಅನುಭವಕ್ಕೆ ಗೌರವ.. ಉದ್ಯಮದ ವ್ಯಾಪ್ತಿ ಇನ್ನಷ್ಟು ವಿಸ್ತರಣೆ. ನ್ಯಾಯಾಲಯದ ವ್ಯಾಜ್ಯ ರಾಜಿಯಲ್ಲಿ ಪರಿಹಾರ. ಉತ್ಪನ್ನಗಳ ಗುಣಮಟ್ಟಕ್ಕೆ ಜನರಿಂದ ಶ್ಲಾಘನೆ. ಗೃಹಿಣಿಯರ ಉದ್ಯಮ  ಉನ್ನತ ಸ್ಥಿತಿಯಲ್ಲಿ. ಗಣೇಶ ಕವಚ, ನರಸಿಂಹ ಸ್ತೋತ್ರ, ಅಷ್ಟಲಕ್ಷ್ಮೀ ಸ್ತೋತ್ರ ಓದಿ.

ಧನು:

ಆವಶ್ಯಕತೆಗೆ ತಕ್ಕಂತೆ ಒದಗಿ ಬರುವ ಸಹಾಯ.. ಉದ್ಯೋಗ ಸ್ಥಾನದಲ್ಲಿ ಗೌರವ. ಸಣ್ಣ ಉದ್ಯಮಗಳ ಅಭಿವೃದ್ಧಿ.ಹೈನುಗಾರಿಕೆ, ಜೇನು ವ್ಯವಸಾಯದಲ್ಲಿ ಆಸಕ್ತಿ. ಕೃಷ್ಯುತ್ಪನ್ನಗಳಿಂದ ಸಾಮಾನ್ಯ ಲಾಭ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಆದಿತ್ಯ ಹೃದಯ ಓದಿ.

ಮಕರ:

ಹೊಸ ಹೊಣೆಗಾರಿಕೆಗಳ ನಿರೀಕ್ಷೆ.. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಅನಿರೀಕ್ಷಿತ ಲಾಭ. ನಿವೇಶನ ಖರೀದಿ-ಮಾರಾಟ ವ್ಯವಹಾರಸ್ಥರಿಗೆ ಲಾಭ. ಕೃಷ್ಯುತ್ಪನ್ನಗಳಿಗೆ ಒಳ್ಳೆಯ ಬೇಡಿಕೆ. ಹಣ್ಣು, ತರಕಾರಿ ಬೆಳೆಗಾರರಿಗೆ ಆದಾಯ ವೃದ್ಧಿ. ಗಣೇಶ ದ್ವಾದಶನಾಮ ಸ್ತೋತ್ರ, ಶಿವಪಂಚಾಕ್ಷರ ಸ್ತೋತ್ರ, ಮಹಿಷಮರ್ದಿನಿ ಸ್ತೋತ್ರ ಓದಿ.

ಕುಂಭ:

ಹೂಡಿಕೆಗಳಲ್ಲಿ ಸಾಮಾನ್ಯ ಲಾಭ.. ಉದ್ಯಮದಲ್ಲಿ ನಿರೀಕ್ಷೆ ಮೀರಿದ ಪ್ರಗತಿ. ದೂರದಲ್ಲಿರುವ ಬಂಧುಗಳ ಭೇಟಿ. ಸೇವಾಕಾರ್ಯಗಳಲ್ಲಿ ಕೈಜೋಡಿಸಲು ಮನೆಮಂದಿಯ ಸಹಕಾರ. ಮುದ್ರಣ ಸಾಮಗ್ರಿ ವಿತರಕರ ವ್ಯಾಪಾರ ವೃದ್ಧಿ. ಗಣೇಶ ಕವಚ, ಶಿವನಾಮಾವಲ್ಯಷ್ಟಕ, ಶನಿಮಹಾತ್ಮೆ ಓದಿ.

ಮೀನ:

ಗುರುವಿನ ಪೂರ್ಣಾನುಗ್ರಹ ಪ್ರಾಪ್ತಿ.. ಉದ್ಯೋಗ ಸ್ಥಾನದಲ್ಲಿ ಕೀರ್ತಿ. ಸರ್ಕಾರಿ ಕಚೇರಿಗಳಲ್ಲಿ ಅನುಕೂಲಕರ ಸ್ಪಂದನ. ಅಪರಿಚಿತ  ವ್ಯಕ್ತಿಗಳಿಂದ  ಅನಿರೀಕ್ಷಿತ ಸಹಾಯ. ರಾಜಕಾರಣಿಗಳಿಂದ ವಿಶ್ವಾಸ ದ್ರೋಹ. ಗಣಪತಿ ಅಥರ್ವಶೀರ್ಷ,  ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.