ಮಂಗಳೂರು ದಸರಾ: ನವದುರ್ಗೆಯರ ಮೂರ್ತಿ ನಿರ್ಮಾಣಕ್ಕೆ ಚಾಲನೆ

Mangaluru Dasara: ಮಂಗಳೂರು ದಸರಾ ಮಹೋತ್ಸವಕ್ಕೆ ಪೂರ್ವ ತಯಾರಿಗಳು ಶುರುವಾಗಿದ್ದು, ನವದುರ್ಗೆಯರ ಮೂರ್ತಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.

Aug 27, 2026 - 09:03
ಮಂಗಳೂರು ದಸರಾ: ನವದುರ್ಗೆಯರ ಮೂರ್ತಿ ನಿರ್ಮಾಣಕ್ಕೆ ಚಾಲನೆ

ಮಂಗಳೂರು: ವಿಶ್ವಪ್ರಸಿದ್ಧ ಮಂಗಳೂರು ದಸರಾ ಮಹೋತ್ಸವಕ್ಕೆ ಪೂರ್ವ ತಯಾರಿಗಳು ಶುರುವಾಗಿವೆ. ಕುದ್ರೋಳಿಯ ಪ್ರಸಿದ್ಧ ಗೋಕರ್ಣನಾಥ ಕ್ಷೇತ್ರದಲ್ಲಿ ನವದುರ್ಗೆಯರು ಮತ್ತು ಶಾರದೆ ಮೂರ್ತಿಗಳ ನಿರ್ಮಾಣ & ಶೃಂಗಾರ ಕಾರ್ಯಕ್ಕೆ ಶುಭ ಮುಹೂರ್ತದಲ್ಲಿ ಅಧಿಕೃತ ಚಾಲನೆ ನೀಡಲಾಗಿದೆ.

ಅ.11 ರಿಂದ 21 ರವರೆಗೆ ವೈಭವೋಪೇತವಾಗಿ ನಡೆಯಲಿರುವ ಮಂಗಳೂರು ದಸರಾವನ್ನು, ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಅಗತ್ಯ ತಯಾರಿಗಳನ್ನು ಮಾಡಲಾಗುತ್ತಿದೆ. ದರ್ಬಾರ್ ಮಂಟಪದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ನವದುರ್ಗೆಯರ ಮೂರ್ತಿಗಳ ರಚನೆ ಕಾರ್ಯವು ಶಾಸ್ತ್ರೋಕ್ತ ಪೂಜಾವಿಧಿಗಳೊಂದಿಗೆ ಆರಂಭಗೊಂಡಿದೆ.

ಕ್ಷೇತ್ರದ ಪ್ರಮುಖರ ಸಮ್ಮುಖದಲ್ಲಿ ಈ ಕಾರ್ಯಕ್ರಮ ಜರುಗಿದೆ. ಇದರೊಂದಿಗೆ ದಸರಾ ಮಹೋತ್ಸವದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಳೆಯನ್ನು ಹೆಚ್ಚಿಸುವ ಕಾರ್ಯಗಳಿಗೆ ಚಾಲನೆ ದೊರೆತಂತಾಗಿದೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.