SK Sweets: ದೇಸಿ ತಿನಿಸುಗಳ ವೈಭವಕ್ಕೆ ಹೊಸ ಸ್ಪರ್ಶ: ಎಸ್‌ಕೆ ಸ್ವೀಟ್ಸ್‌ನ ಸಿಹಿ ಪಯಣ

SK Sweets: ಕಳೆದ 3 ದಶಕಗಳಿಗೂ ಹೆಚ್ಚು ಕಾಲ ಕೋಕನಟ್ ಅಥವಾ ಕಲ್ಪವೃಕ್ಷದ ಉತ್ಪನ್ನಗಳನ್ನು ಆಧರಿಸಿದ ಸಿಹಿತಿನಿಸುಗಳ ಮೂಲಕ, ಬೆಂಗಳೂರಿನ ಎಸ್‌ಕೆ ಸ್ವೀಟ್ಸ್ ತನ್ನದೇಯಾದ ಛಾಪು ಮೂಡಿಸುತ್ತಿದೆ.

Aug 26, 2026 - 12:57
SK Sweets: ದೇಸಿ ತಿನಿಸುಗಳ ವೈಭವಕ್ಕೆ ಹೊಸ ಸ್ಪರ್ಶ: ಎಸ್‌ಕೆ ಸ್ವೀಟ್ಸ್‌ನ ಸಿಹಿ ಪಯಣ

ಬೆಂಗಳೂರು: ಅಪ್ಪಟ ದೇಸಿ ಸಿಹಿ-ತಿನಿಸುಗಳ ವೈಭವಕ್ಕೆ ಮತ್ತೆ ಬೇಡಿಕೆ ಹೆಚ್ಚಾಗುತ್ತಿದೆ. ಕೃತಕ ಬಣ್ಣ, ಪ್ರಿಸರ್ವೇಟಿವ್‌ಗಳ ಬಳಕೆಯ ಸಿಹಿತಿನಿಸುಗಳಿಂದ ಗ್ರಾಹಕರು ನಿಧಾನವಾಗಿ ದೂರ ಸರಿಯುತ್ತಿದ್ದಾರೆ. ಸಾಂಪ್ರದಾಯಿಕ ರುಚಿ, ಗುಣಮಟ್ಟ ಹಾಗೂ ಆರೋಗ್ಯದತ್ತ ಹೆಚ್ಚು ಗಮನ ಹರಿಸುತ್ತಿದ್ದು, ದೇಸಿ ತಿನಿಸುಗಳತ್ತ ಆಕರ್ಷಿತರಾಗುತ್ತಿದ್ದಾರೆ.

ಕಳೆದ 3 ದಶಕಗಳಿಗೂ ಹೆಚ್ಚು ಕಾಲ ಕೋಕನಟ್ ಅಥವಾ ಕಲ್ಪವೃಕ್ಷದ ಉತ್ಪನ್ನಗಳನ್ನು ಆಧರಿಸಿದ ಸಿಹಿತಿನಿಸುಗಳ ಮೂಲಕ, ಬೆಂಗಳೂರಿನ ಎಸ್‌ಕೆ ಸ್ವೀಟ್ಸ್ (SK Sweets) ತನ್ನದೇಯಾದ ಛಾಪು ಮೂಡಿಸುತ್ತಿದೆ. 

ಇಂದು ದೇಸಿ ಸಿಹಿತಿನಿಸುಗಳ ಜಾಗತಿಕ ಬ್ರ್ಯಾಂಡ್ ಆಗಿ ಬೆಳೆಯುತ್ತಿದೆ. ಕೊಬ್ಬರಿ ಬರ್ಫಿಯಿಂದ ಆರಂಭವಾದ ಸಂಸ್ಥೆಯ ಸಿಹಿ ಪಯಣ, ಸದ್ಯ ದುಬೈ, ಸಿಂಗಾಪುರ ಸೇರಿದಂತೆ ವಿದೇಶಗಳಿಗೂ ವಿಸ್ತರಿಸಿರುವುದು ಹೆಮ್ಮೆಯ ಸಂಗತಿಯಾಗಿದೆ.

ಕೊಬ್ಬರಿ ಬರ್ಫಿ, ಬೆಲ್ಲ ಮತ್ತು ಸಕ್ಕರೆಯಿಂದ ತಯಾರಿಸುವ ಸಾಂಪ್ರದಾಯಿಕ ಸಿಹಿತಿನಿಸುಗಳ ಜೊತೆಗೆ, ಕರದಂಟು, ಡ್ರೈಫ್ರೂಟ್ ಬರ್ಫಿ, ನಟ್ ಬರ್ಫಿ, ನಟ್ ಚಿಕ್ಕಿ, ಪೀನಟ್ ಚಿಕ್ಕಿ ಸೇರಿದಂತೆ 25ಕ್ಕೂ ಹೆಚ್ಚು ಬಗೆಯ ದೇಸಿ ತಿನಿಸುಗಳನ್ನು ಎಸ್‌ಕೆ ಸ್ವೀಟ್ಸ್ ಪರಿಚಯಿಸಿದೆ.

ಮೂರು ತಲೆಮಾರುಗಳ ಸಿಹಿ ಉದ್ಯಮದ ಪರಂಪರೆಯನ್ನು ಮುಂದುವರಿಸುತ್ತಿರುವ ಸೆಂದಿಲ್ ಕನಕ ಸಭಾಪತಿ, ಎಸ್‌.ಕೆ. ಮುರುಗೇಶ್ ಹಾಗೂ ಎಂ. ಪ್ರವೀಣ್ ಅವರ ಪ್ರಯತ್ನಗಳು, ದೇಸಿ ಮಿಠಾಯಿಗಳಿಗೆ ಹೊಸ ಮಾರುಕಟ್ಟೆ ಹಾಗೂ ಹೊಸ ರುಚಿಯ ಆಯಾಮವನ್ನು ನೀಡಿವೆ.

ಈ ಬಾರಿ ದಸರಾ ಹಬ್ಬಕ್ಕೆ ವಿಶೇಷ ಆದ್ಯತೆ ನೀಡಿರುವ ಎಸ್‌ಕೆ ಸ್ವೀಟ್ಸ್, ಹಬ್ಬದ ಸಂಭ್ರಮದಲ್ಲಿ ಗ್ರಾಹಕರ ಕೈಗೆ ಮತ್ತಷ್ಟು ದೇಸಿ ಸಿಹಿತಿನಿಸುಗಳನ್ನು ತಲುಪಿಸುವ ಉದ್ದೇಶ ಹೊಂದಿದೆ ಎಂದು ಸಂಸ್ಥೆಯ ಎಂ.ಪ್ರವೀಣ್ ತಿಳಿಸಿದ್ದಾರೆ.

ಇಂದಿನ ಯುವಜನತೆ ರುಚಿಯ ಜೊತೆಗೆ ಆರೋಗ್ಯಕ್ಕೂ ಹೆಚ್ಚಿನ ಮಹತ್ವ ನೀಡುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಸಂಸ್ಥೆ ಹೊಸ ಪ್ರಯೋಗಗಳಿಗೂ ಮುಂದಾಗಿದೆ. ನಟ್‌ಬೇಸ್ ಚಿಕ್ಕಿಗಳು, ಪಂಪ್ಕಿನ್ ಸೀಡ್ಸ್ ಸೇರಿದಂತೆ ವಿವಿಧ ಆರೋಗ್ಯಕರ ಬೀಜಗಳನ್ನು ಬಳಸಿ ತಯಾರಿಸುವ ಸೀಡ್‌ ವೆರೈಟಿಗಳನ್ನು ಗ್ರಾಹಕರಿಗೆ ಪರಿಚಯಿಸಲಾಗುತ್ತಿದೆ.

ಸಾಂಪ್ರದಾಯಿಕ ದೇಸಿ ರುಚಿ, ಗುಣಮಟ್ಟ ಮತ್ತು ಆಧುನಿಕ ಗ್ರಾಹಕರ ಆರೋಗ್ಯ ಕಾಳಜಿಯನ್ನು ಒಟ್ಟುಗೂಡಿಸಿಕೊಂಡಿರುವ ಎಸ್‌ಕೆ ಸ್ವೀಟ್ಸ್, ಬೆಂಗಳೂರಿನಿಂದ ಜಾಗತಿಕ ಮಟ್ಟಕ್ಕೆ ದೇಸಿ ಸಿಹಿಯ ಸುವಾಸನೆಯನ್ನು ಕೊಂಡೊಯ್ಯುತ್ತಿರುವುದು ವಿಶೇಷ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.