ವಿವೇಕಾನಂದ ಕಾಲೇಜು: ವಿಜ್ಞಾನ ಸಂಘದ ಚಟುವಟಿಕೆಗಳ ಉದ್ಘಾಟನೆ

Vivekananda College: ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ನಡೆದ 2026-27ನೇ ಸಾಲಿನ ವಿಜ್ಞಾನ ಸಂಘದ ಚಟುವಟಿಕೆಗಳನ್ನು ಉಜಿರೆ ಎಸ್‌ಡಿಎಂ ಕಾಲೇಜಿನ ನಿವೃತ್ತ ಉಪನ್ಯಾಸಕ ಡಾ.ಟಿ.ಪ್ರಕಾಶ್ ಪ್ರಭು ಉದ್ಘಾಟಿಸಿದರು.

Aug 26, 2026 - 18:33
ವಿವೇಕಾನಂದ ಕಾಲೇಜು: ವಿಜ್ಞಾನ ಸಂಘದ ಚಟುವಟಿಕೆಗಳ ಉದ್ಘಾಟನೆ

ಪುತ್ತೂರು: ಗಣಿತ ಕಠಿಣ ವಿಷಯವೆಂದು ಹಲವರು ಭಾವಿಸುತ್ತಾರೆ. ವಿದ್ಯಾರ್ಥಿಗಳಲ್ಲಿ ತರ್ಕಬದ್ಧ ಚಿಂತನೆ ಇಲ್ಲದಿರುವುದರಿಂದ, ಇಂತಹ ಭಯ ಹೊಂದಿರುತ್ತಾರೆ. ವಿದ್ಯಾರ್ಥಿಗಳು ಸದಾ ಏಕೆ, ಹೇಗೆ, ಯಾವಾಗ ಎಂಬ ಪ್ರಶ್ನೆಗಳನ್ನು ಕೇಳಬೇಕು. ಅಂತಹ ತಾರ್ಕಿಕ ಶಕ್ತಿಯನ್ನು ಬೆಳೆಸಿಕೊಂಡರೆ ಖಂಡಿತವಾಗಿಯೂ ಗಣಿತವು ಸರಳವಾಗುತ್ತದೆ ಎಂದು ಉಜಿರೆ ಎಸ್‌ಡಿಎಂ ಕಾಲೇಜಿನ ನಿವೃತ್ತ ಉಪನ್ಯಾಸಕ ಡಾ.ಟಿ.ಪ್ರಕಾಶ್ ಪ್ರಭು ಹೇಳಿದರು.

ಇಲ್ಲಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ  ವಿಜ್ಞಾನ ಸಂಘ ಮತ್ತು ಐಕ್ಯೂಎಸಿ ಘಟಕದ ಸಂಯುಕ್ತಾಶ್ರಯದಲ್ಲಿ ನಡೆದ 2026-27ನೇ ಸಾಲಿನ ವಿಜ್ಞಾನ ಸಂಘದ ಚಟುವಟಿಕೆಗಳನ್ನು ಉದ್ಘಾಟಿಸಿ, ಅವರು ಮಾತನಾಡಿದರು.

ಕಾಲೇಜು ಆಡಳಿತ ಮಂಡಳಿ ಸಂಚಾಲಕ ಮುರಳಿ ಕೃಷ್ಣ ಕೆ.ಎನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳೇ ಕಾರ್ಯಕ್ರಮಗಳು ಆಯೋಜಿಸಿದಾಗ, ಅವರ ಸರ್ವತೋಮುಖ ಬೆಳವಣಿಗೆಯಾಗುತ್ತದೆ. ಶೈಕ್ಷಣಿಕ ಪಠ್ಯಗಳಲ್ಲಿ ಏನು ಮಾಹಿತಿ ಸಿಗುತ್ತದೆಯೋ, ಅದನ್ನು ಮೀರಿ ಚಟುವಟಿಕೆಗಳಲ್ಲಿ ತಿಳಿದುಕೊಳ್ಳಬೇಕು. ಅಸೋಸಿಯೇಷನ್‌ನ ಚಟುವಟಿಕೆಗಳ ಮೂಲಕ ಪಠ್ಯೇತರ ವಿಷಯಗಳನ್ನು ಅರಿಯಬಹುದು ಎಂದರು.

ವಿಜ್ಞಾನ ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವವನ್ನು ಹೊಂದಬೇಕು. ಆಗ ಮಾತ್ರ ಹೊಸದೊಂದರ ಆವಿಷ್ಕಾರವಾಗುತ್ತದೆ. ಆದರೆ ಪ್ರಶ್ನೆಗಳನ್ನು ಕೇಳುವಾಗ ಮುಗ್ಧತೆ ಇರಬೇಕು. ಭಾರತೀಯ ಚಿಂತನೆಗಳು ಹಾಗೂ ವಿಚಾರಧಾರೆಗಳು ಸುಳ್ಳಾಗಲು ಸಾಧ್ಯವಿಲ್ಲ. ವಿಜ್ಞಾನ-ಸುಜ್ಞಾನ ಎರಡು ಮಿಶ್ರಿತವಾದರೆ ಮಾತ್ರ ಬದುಕಿಗೆ ಸಾಕಾರವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಜ್ಞಾನ ಸಂಘದ ಲೋಗೋವನ್ನು ಅನಾವರಣಗೊಳಿಸಲಾಯಿತು. ವಿಜ್ಞಾನ ಸಂಘದ ಕಾರ್ಯದರ್ಶಿ ಅನರ್ಘ್ಯ.ಜಿ ವಾರ್ಷಿಕ ಕಾರ್ಯಚಟುವಟಿಕೆಗಳ ಪಟ್ಟಿಯನ್ನು ವಾಚಿಸಿದರು.

ವಿದ್ಯಾರ್ಥಿಗಳಿಗೆ 'ಮಾಥ್ ಫನ್ ಅಂಡ್ ಮ್ಯೂಸಿಕ್' ವಿಷಯದ ಕುರಿತು ವಿಶೇಷ ಕಾರ್ಯಾಗಾರ ನಡೆಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಶ್ರೀಕೃಷ್ಣ ಗಣರಾಜ್ ಭಟ್, ರಾಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಶಿವಪ್ರಸಾದ್ ಕೆ.ಎಸ್, ವಿಜ್ಞಾನ ಸಂಘದ ಸಂಯೋಜಕಿ ಸೌಮ್ಯ.ಬಿ, ವಿಜ್ಞಾನ ಸಂಘದ ಅಧ್ಯಕ್ಷ ಶ್ರೀಜನ್, ಕಾರ್ಯದರ್ಶಿ ಜೀವಿತ ಎಂ.ಆರ್ ಇದ್ದರು. ವಿದ್ಯಾರ್ಥಿನಿ ಹಂಶಿತಾ.ಕೆ ಸ್ವಾಗತಿಸಿದರು ಚೇತನಾ ಸಿ.ಆರ್ ವಂದಿಸಿದರು. ಅಂಕಿತಾ.ಎ ನಿರೂಪಿಸಿದರು.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.