ವಿವೇಕಾನಂದ ಪದವಿ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ 3ನೇ ಚೆಸ್ ಪಂದ್ಯಾವಳಿ

Vivekananda Degree College: ವಿವೇಕಾನಂದ ಪದವಿ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ 3ನೇ ಚೆಸ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.

Aug 20, 2026 - 14:05
Aug 20, 2026 - 14:07
ವಿವೇಕಾನಂದ ಪದವಿ ಕಾಲೇಜಿನಲ್ಲಿ  ಜಿಲ್ಲಾ ಮಟ್ಟದ 3ನೇ ಚೆಸ್ ಪಂದ್ಯಾವಳಿ

ಪುತ್ತೂರು: ಕ್ರೀಡೆ ಜೀವನ ಮೌಲ್ಯವನ್ನು ಹೆಚ್ಚಿಸುತ್ತದೆ. ವಿದ್ಯಾರ್ಥಿಗಳ ಬುದ್ಧಿಶಕ್ತಿ ಬೆಳವಣಿಗೆಗೆ ಚೆಸ್ ಒಂದು ಉತ್ತಮ ಕ್ರೀಡೆಯಾಗಿದೆ. ಇದು ಬದುಕಿನಲ್ಲಿ ಮನೋಸ್ಥೈರ್ಯವನ್ನು ಬೆಳೆಸುತ್ತದೆ. ಚೆಸ್ ಒಂದು ಐಕ್ಯತೆಯ ಕ್ರೀಡಾಕೂಟ ಎಂದು ವಿವೇಕಾನಂದ ಇಂಗ್ಲಿಷ್ ಮೀಡಿಯಂ ಶಾಲೆಯ ಪ್ರಾಂಶುಪಾಲ ಸತೀಶ್ ರೈ ಹೇಳಿದರು.

ವಿವೇಕಾನಂದ ಪದವಿ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ, ಐಕ್ಯೂಎಸಿ, ವಿದ್ಯಾರ್ಥಿ ಸಂಘ ಮತ್ತು ಬಾಬ್ಬಿ ಫಿಶ್ಚರ್ಸ್ ಚೆಸ್ ಅಸೋಸಿಯೇಷನ್ ಸುಳ್ಯ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ 3ನೇ ಚೆಸ್ ಪಂದ್ಯಾವಳಿಯನ್ನು ಉದ್ಘಾಟಿಸಿ, ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲ ಶ್ರೀಕೃಷ್ಣ ಗಣರಾಜ್ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಚೆಸ್ ಎಂಬುದು ಕ್ರೀಡೆಗಳ ರಾಜನಿದ್ದಂತೆ. ಇದು ನಮ್ಮ ಜೀವನಕ್ಕೆ ಬೇಕಾದ ಶಿಸ್ತನ್ನು ಕಲಿಸುತ್ತದೆ. ಪ್ರತಿಯೊಂದು ಹೆಜ್ಜೆಯನ್ನು ಚಾಕಚಕ್ಯತೆಯಿಂದ ಇಡುವ ಹಾಗೆ, ಚೆಸ್ ನಮ್ಮನ್ನು ರೂಪಿಸುತ್ತದೆ. ಕ್ರೀಡೆಯಲ್ಲಿ ಗೆಲುವು ಎಂಬುದು ಮುಖ್ಯವಲ್ಲ. ಬದಲಾಗಿ ನಮ್ಮ ಪಾಲ್ಗೊಳ್ಳುವಿಕೆ ಪ್ರಾಮುಖ್ಯತೆ ವಹಿಸುತ್ತದೆ ಎಂದು ತಿಳಿಸಿದರು.

ರಾಷ್ಟೀಯ ಚೆಸ್ ತೀರ್ಪುಗಾರ ಪ್ರಸನ್ನ ರಾವ್ ಕಾರ್ಯಕ್ರಮಕ್ಕೆ ಶುಭಕೋರಿದರು. ವೇದಿಕೆಯಲ್ಲಿ ವಿವೇಕಾನಂದ ಕಾಲೇಜಿನ ಐಕ್ಯುಎಸಿ ಸಂಯೋಜಕಿ ಡಾ.ರವಿಕಲಾ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ರವಿಶಂಕರ್ ವಿ.ಎಸ್ ಉಪಸ್ಥಿತರಿದ್ದರು.

ವಿವೇಕಾನಂದ ಜೂನಿಯರ್ ಚೆಸ್ ಪಂದ್ಯಾಟದ ಫಲಿತಾಂಶ

1 ರಿಂದ 3ನೇ ತರಗತಿ ವಿಭಾಗ: 

ಪ್ರಥಮ - ಓಂಕಾರ ಕಾಮತ್ ಕೆ, ಶಾರದಾ ವಿದ್ಯಾಲಯ ಮಂಗಳೂರು
ದ್ವಿತೀಯ - ಅತ್ರೆಯ ರಾಮ್, ವಿದ್ಯಾದಾಯಿನಿ ಇಂಗ್ಲಿಷ್ ಮೀಡಿಯಂ ಸ್ಕೂಲ್, ಸುರತ್ಕಲ್
ತೃತಿಯ - ಅದ್ವೈತ್ ಯು ಪಾಟ್ಕರ್, ವಿದ್ಯಾಧಯಿನಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಸುರತ್ಕಲ್

4 ರಿಂದ 6ನೇ ತರಗತಿ ವಿಭಾಗ:

ಪ್ರಥಮ - ಭವಿತ್ ಪ್ರದೀಪ್ ಶೆಟ್ಟಿ , ಪೋದಾರ್ ಇಂಟರ್‌ನ್ಯಾಷನಲ್ ಸ್ಕೂಲ್, ಮಂಗಳೂರು
ದ್ವಿತೀಯ - ವಿಪುಲ್ ಗೌಡ, ವಿವೇಕಾನಂದ ಸೆಂಟ್ರಲ್ ಸ್ಕೂಲ್, ಪುತ್ತೂರು
ತೃತೀಯ - ಆಶಯ್ ಜಿ.ಸಿ, ವಿವೇಕಾನಂದ ಸೆಂಟ್ರಲ್ ಸ್ಕೂಲ್, ಪುತ್ತೂರು

7 ರಿಂದ 9ನೇ ತರಗತಿ ವಿಭಾಗ:

ಪ್ರಥಮ - ವಿಹಾನ್ ಶೆಟ್ಟಿ, ಪೋದಾರ್ ಇಂಟರ್‌ನ್ಯಾಷನಲ್ ಸ್ಕೂಲ್, ಮಂಗಳೂರು
ದ್ವಿತೀಯ - ಅನ್ವಿತ್ ಶೆಟ್ಟಿ. ಪೋದರ್ ಇಂಟರ್‌ನ್ಯಾಷನಲ್ ಸ್ಕೂಲ್, ಮಂಗಳೂರು
ತೃತೀಯ - ಎಸ್ಆರ್ ಕೌಶಿಕ್, ಸುಧಾನ ರೆಸಿಡೆನ್ಸಿಯಲ್ ಸ್ಕೂಲ್, ಪುತ್ತೂರು.

10 ರಿಂದ 12ನೇ ತರಗತಿ ವಿಭಾಗ:

ಪ್ರಥಮ - ಅಭಿನವ ಪಿ, ಕುಮಾರಸ್ವಾಮಿ ವಿದ್ಯಾಲಯ, ಸುಬ್ರಹ್ಮಣ್ಯ
ದ್ವಿತೀಯ - ರವೀಶ್ ಕೋಟೆ, ಸೇಂಟ್ ಅಲೋಶಿಯಸ್ ಕಾಲೇಜ್, ಮಂಗಳೂರು
ತೃತೀಯ - ಬ್ರಿಜೇಶ್, ವಿವೇಕಾನಂದ ಪಿಯು ಕಾಲೇಜು, ಪುತ್ತೂರು

ಪ್ರತಿ ವಿಭಾಗದಲ್ಲಿ ಒಂದರಿಂದ 10 ಸ್ಥಾನಗಳನ್ನು ಪಡೆದವರಿಗೆ ಟ್ರೋಫಿಗಳನ್ನು ವಿತರಿಸಲಾಯಿತು. ಮೊದಲ 3 ಸ್ಥಾನ ಪಡೆದವರಿಗೆ ನಗದು ಬಹುಮಾನವನ್ನು ನೀಡಲಾಯಿತು. ಈ ಪಂದ್ಯಾವಳಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಶಾಲೆಗಳ ಸುಮಾರು 147 ವಿದ್ಯಾರ್ಥಿಗಳು ಭಾಗವಹಿಸಿದ್ದರು.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.