ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್: ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ

Golden Book of World Record: 'ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್'ಗೆ ಇಂದ್ರಪಸ್ಥ ವಿದ್ಯಾಲಯದ ವಿದ್ಯಾರ್ಥಿಗಳ ಹೆಸರುಗಳು ಸೇರ್ಪಡೆಗೊಂಡಿವೆ.

Oct 4, 2026 - 11:39
Oct 4, 2026 - 11:39
ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್: ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ

ಉಪ್ಪಿನಂಗಡಿ: 'ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್'ಗೆ ಇಂದ್ರಪಸ್ಥ ವಿದ್ಯಾಲಯದ 6ನೇ ವಿದ್ಯಾರ್ಥಿನಿ ಆನ್ಶಿ ಸಂತೋಷ್ ಕುಮಾರ್ ಹಾಗೂ 3 ತರಗತಿ ವಿದ್ಯಾರ್ಥಿ ಹಿಮಾಂಶು ಕೃಷ್ಣ ಅಮ್ಮಣ್ಣಾಯ ಹೆಸರುಗಳು ಸೇರ್ಪಡೆಗೊಂಡಿವೆ. 

ಆನ್ಶಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ನಿರಂತರವಾಗಿ 30 ಗಂಟೆ ಹಾಡಿನ ಭಾವಕ್ಕೆ ತಕ್ಕಂತೆ ವೈವಿಧ್ಯಮಯ ಕಲಾಕೃತಿಗಳನ್ನು ಸೃಜನಾತ್ಮಕವಾಗಿ ಮರಳಿನಲ್ಲಿ ಅರಳಿಸಿದ್ದಾರೆ. ಹಾಗೆಯೇ ಹಿಮಾಂಶು 18 ಗಂಟೆ ಸ್ಯಾಂಡ್ ಆರ್ಟ್ ಮಾಡಿ, ಈ ದಾಖಲೆ ನಿರ್ಮಿಸಿದ್ದಾರೆ. 

ವಿದ್ಯಾರ್ಥಿನಿ ಆನ್ಶಿ ಉಪ್ಪಿನಂಗಡಿ ಸಮೀಪದ ಸೂರಪ್ಪ ಕಾಂಪೌಂಡ್‌ನ ಅಭಿನಿತಾ ಎಂ.ಜಿ ಅವರ ಪುತ್ರಿಯಾಗಿದ್ದಾರೆ. ವಿದ್ಯಾರ್ಥಿ ಹಿಮಾಂಶು ಇಳಂತಿಲ ಬಳಿಯ ಎನ್ಮಾಡಿಯ ಗುರುಮೂರ್ತಿ ಎಂ ಅಮ್ಮಣ್ಣಾಯ ಮತ್ತು ಅನುಷಾ ಎಸ್ ದಂಪತಿ ಪುತ್ರನಾಗಿದ್ದಾನೆ.

ಇವರಿಬ್ಬರು ಪುತ್ತೂರಿನ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯ ತರಬೇತುದಾರ ಪ್ರವೀಣ್ ವರ್ಣಕುಟೀರ ಅವರ ವಿದ್ಯಾರ್ಥಿಗಳಾಗಿದ್ದಾರೆ. 

ಈ ವಿದ್ಯಾರ್ಥಿಗಳ ಸಾಧನೆಗೆ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸಂಚಾಲಕರು,  ಶಾಲಾ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕ ವೃಂದದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.