Today Gold Price: ಇಂದು ಆಭರಣದ ಬೆಲೆ ಸ್ಥಿರ
Today Gold Price: ಚಿನಿವಾರ ಪೇಟೆಯಲ್ಲಿ ಇಂದು (ಬುಧವಾರ) ಚಿನ್ನ ಹಾಗೂ ಬೆಳ್ಳಿ ಬೆಲೆಯೂ ಯಾವುದೇ ರೀತಿಯಲ್ಲಿ ಬದಲಾಗದೆ ಸ್ಥಿರವಾಗಿದೆ.
ಬೆಂಗಳೂರು: ಚಿನಿವಾರ ಪೇಟೆಯಲ್ಲಿ ಇಂದು (ಬುಧವಾರ) ಚಿನ್ನ ಹಾಗೂ ಬೆಳ್ಳಿ ಬೆಲೆಯೂ ಯಾವುದೇ ರೀತಿಯಲ್ಲಿ ಬದಲಾಗದೆ ಸ್ಥಿರವಾಗಿದೆ.
ರಾಜ್ಯದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರಕ್ಕೆ ರೂ.1,63,750 ಇದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ರೂ.1,50,100ಕ್ಕೆ ತಲುಪಿದೆ. 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.1,22,810 ಆಗಿದೆ. ಅದೇ ರೀತಿಯಲ್ಲಿ 1 ಕೆಜಿ ಬೆಳ್ಳಿಯೂ ರೂ.2,60,000 ಬೆಲೆಯಲ್ಲಿ ಮಾರಾಟವಾಗುತ್ತಿದೆ.
ಷೇರುಪೇಟೆ: ವಹಿವಾಟು ಏರಿಳಿತ
ಭಾರತದ ಷೇರುಪೇಟೆ ವಹಿವಾಟು ಇಂದು ಏರಿಳಿತಗಳನ್ನು ಕಾಣುತ್ತಿದೆ. ಸೆನ್ಸೆಕ್ಸ್ 128.92 ಅಂಕಗಳು ಅಥವಾ ಶೇಕಡ 0.17% ಏರಿಕೆಯಾಗಿ 77,785.01 ಅಂಕಗಳಿಗೆ ತಲುಪಿದೆ. ನಿಫ್ಟಿ 17.50 ಅಂಕಗಳು ಅಥವಾ ಶೇಕಡ 0.07% ಕುಸಿತವಾಗಿ 24,317.05 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ.
ಐಸಿಐಸಿಐ ಬ್ಯಾಂಕ್, ಅದಾನಿ ಪೋರ್ಟ್ಸ್, ಬಜಾಜ್ ಫಿನ್‌ಸರ್ವ್ ಹಾಗೂ ಅಲ್ಟ್ರಾಟೆಕ್ ಸಿಮೆಂಟ್ ಷೇರುಗಳು ಲಾಭದಲ್ಲಿವೆ. ಟಾಟಾ ಸ್ಟೀಲ್, ಇನ್ಫೋಸಿಸ್, ಭಾರ್ತಿ ಏರ್‌ಟೆಲ್, ಸನ್ ಫಾರ್ಮಾ ಮತ್ತು ರಿಲಯನ್ಸ್ ಷೇರುಗಳು ನಷ್ಟದಲ್ಲಿವೆ.