ದಿನ ಭವಿಷ್ಯ: ಯಾವ ರಾಶಿಗೆ ಶುಭ ಫಲ?
Daily Horoscope: ಇಂದು (ಗುರುವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.
ಮೇಷ:
ದಿನವಿಡೀ ಆರಾಮವಾಗಿರಿ.. ಗುರ್ವನುಗ್ರಹದ ಶುಭಫಲಗಳನ್ನು ಅನುಭವಿಸಿರಿ. ಉದ್ಯೋಗದಲ್ಲಿ ತೃಪ್ತಿಯ ಅನುಭವ. ಉದ್ಯಮದಲ್ಲಿ ನೌಕರರರಿಗೆ ನಿರಾಳ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಆರೋಗ್ಯ, ಉತ್ಸಾಹ.ಗಣೇಶ ಅಷ್ಟಕ, ಶಿವಪಂಚಾಕ್ಷರ ಸ್ತೋತ್ರ, ಶನಿಮಹಾತ್ಮೆ ಓದಿ.
ವೃಷಭ:
ಅಡ್ಡಗಾಲು ಹಾಕುವವರಿಗೆ ಸೋಲು.. ಅರ್ಧಕ್ಕೆ ನಿಂತಿರುವ ಕಾರ್ಯ ಮುಕ್ತಾಯ. ವಿತ್ತ ಸಂಸ್ಥೆಯಿಂದ ಸಕಾಲದಲ್ಲಿ ನೆರವು. ವ್ಯವಹಾರ ನಿಮಿತ್ತ ಪ್ರಯಾಣ. ಸಂಸಾರದಲ್ಲಿ ಎಲ್ಲರಿಗೂ ಸಮಾಧಾನದ ಅನುಭವ. ಗಣೇಶ ಕವಚ, ವೆಂಕಟೇಶ್ವರ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
ಮಿಥುನ:
ಉದ್ಯೋಗದಲ್ಲಿ ಸಾಮಾನ್ಯ ಸ್ಥಿತಿ.. ಸೇವಾ ಹಿರಿತನಕ್ಕೆ ಮಾನ್ಯತೆ. ಸ್ವಂತ ಉದ್ಯಮ ಆರ್ಥಿಕ ಮುಗ್ಗಟ್ಟು ಪರಿಹಾರಕ್ಕೆ ವಿತ್ತಸಂಸ್ಥೆ ನೆರವು. ಮಹಿಳೆಯರ ಸ್ವಾವಲಂಬನೆ ಸಾಧನೆ ಪ್ರಗತಿಯಲ್ಲಿ. ಭೂವ್ಯವಹಾರ ಸಂಬಂಧ ಪ್ರಯಾಣ. ಗಣೇಶ ಕವಚ, ನರಸಿಂಹ ಸ್ತೋತ್ರ, ಆದಿತ್ಯ ಹೃದಯ ಓದಿ.
ಕರ್ಕಾಟಕ:
ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳಬೇಡಿ.. ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ. ಕೃಷ್ಯುತ್ಪನ್ನ ಮಾರಾಟದಿಂದ ಲಾಭ. ಉದ್ಯೋಗ ಅರಸುತ್ತಿರುವವರ ಪ್ರಯತ್ನ ಸಫಲ. ಹಿರಿಯರು, ಗೃಹಿಣಿಯರು, ಮಕ್ಕಳ ಆರೋಗ್ಯ ಉತ್ತಮ.ಗಣೇಶ ಪಂಚರತ್ನ, ದತ್ತಾತ್ರೇಯ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
ಸಿಂಹ:
ಅಧಿಕಾರಿಗಳಿಗೆ ಬಯಸಿದಲ್ಲಿಗೆ ವರ್ಗಾವಣೆ.. ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ಪರದೇಶದಲ್ಲಿರುವ ಬಂಧುಗಳಿಂದ ಸಿಹಿಸುದ್ದಿ. ಖಾದ್ಯಪದಾರ್ಥಗಳ ಮಾರಾಟದಿಂದ ಲಾಭ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಲಕ್ಷ್ಮೀಸ್ತೋತ್ರ ಓದಿ.
ಕನ್ಯಾ:
ಕೇಂದ್ರಸ್ಥಳದಲ್ಲಿ ನಿಯೋಜನೆ ಸಂಭವ.. ವಿದ್ಯುತ್ ಮತ್ತು ಇಲೆಕ್ಟ್ರಾನಿಕ್ಸ್ ಉಪಕರಣ ವ್ಯಾಪಾರಿಗಳಿಗೆ ಉತ್ತಮ ಆದಾಯ. ವಿವಾಹಾಸಕ್ತರಿಗೆ ಒಳ್ಳೆಯ ಸಂಬಂಧ ಕೂಡಿ ಬರುವ ಸಾಧ್ಯತೆ. ಗೃಹೋತ್ಪನ್ನಗಳಿಗೆ ಬೇಡಿಕೆ ವೃದ್ಧಿ. ದೇವತಾ ಕಾರ್ಯಗಳಲ್ಲಿ ಪಾಲುಗೊಳ್ಳುವ ಆಸಕ್ತಿ. ಗಣೇಶ ಕವಚ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
ತುಲಾ:
ಆಗುವುದೆಲ್ಲವೂ ಒಳ್ಳೆಯದಕ್ಕೆ ಎಂಬುದು ಗೊತ್ತಿರಲಿ.. ಉದ್ಯೋಗ, ವ್ಯವಹಾರದಲ್ಲಿ ಒಳ್ಳೆಯ ಹೆಸರು. ನೌಕರ ವರ್ಗದ ಉತ್ತಮ ಸಹಕಾರ. ದೈವಾನುಗ್ರಹ ಪ್ರಾಪ್ತಿಗೆ ಸಾಧನೆ ಮುಂದುವರಿಕೆ. ಪ್ರಕೃತಿಯ ಒಲುಮೆಯಿಂದ ಸುಖ-ಶಾಂತಿ. ಗಣೇಶ ದ್ವಾದಶನಾಮ ಸ್ತೋತ್ರ, ವೇದಸಾರ ಶಿವಸ್ತೋತ್ರ, ಹನುಮಾನ್ ಚಾಲೀಸಾ ಓದಿ.
ವೃಶ್ಚಿಕ:
ಉದ್ಯೋಗದಲ್ಲಿ ಹಂತ-ಹಂತದ ಅಭಿವೃದ್ಧಿ. ಸ್ವಂತ ಉದ್ಯಮದ ತೃಪ್ತಿಕರ ಬೆಳವಣಿಗೆ. ಪರಿಸರ ನೈರ್ಮಲ್ಯ ರಕ್ಷಣೆಯಲ್ಲಿ ಭಾಗಿ. ದೇವಾಲಯಕ್ಕೆ ಭೇಟಿ. ಹಿರಿಯರು, ಮಹಿಳೆಯರು ಮತ್ತು ಮಕ್ಕಳಿಗೆ ಉಲ್ಲಾಸದ ವಾತಾವರಣ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಮಹಾಲಕ್ಷ್ಮಿ ಅಷ್ಟಕ ಓದಿ.
ಧನು:
ಉದ್ಯೋಗ ಸ್ಥಾನದಲ್ಲಿ ಪರಿಶ್ರಮಕ್ಕೆ ಗೌರವ.. ಹಳೆಯ ಮಿತ್ರರು ಮತ್ತೆ ಸಂಪರ್ಕಕ್ಕೆ. ಸ್ವಂತ ಉದ್ಯಮ ಕ್ರಮವಾಗಿ ಅಭಿವೃದ್ಧಿ. ದೇವತಾರ್ಚನೆಯಿಂದ ನೆಮ್ಮದಿ ಪ್ರಾಪ್ತಿ. ಕೃಷಿ ಕ್ಷೇತ್ರಕ್ಕೆ ಹೊಸ ನೀರಿನ ಆಸರೆ. ಗಣೇಶ ದ್ವಾದಶನಾಮ ಸ್ತೋತ್ರ, ಕಾರ್ತಿಕೇಯ ಸ್ತೋತ್ರ ಮಹಿಷಮರ್ದಿನಿ ಸ್ತೋತ್ರ ಓದಿ.
ಮಕರ:
ಉದ್ಯೋಗ ಕ್ಷೇತ್ರದ ಒತ್ತಡ ನಿವಾರಣೆ.. ಹೊಸ ಉದ್ಯೋಗ ಅರಸುವವರಿಗೆ ಅವಕಾಶಗಳು ಗೋಚರ. ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ. ಮಕ್ಕಳ ವಿದ್ಯಾಭ್ಯಾಸದತ್ತ ಗಮನ. ಸಂಸಾರದಲ್ಲಿ ಎಲ್ಲರ ಆರೋಗ್ಯ ಉತ್ತಮ. ಗಣೇಶ ಪಂಚರತ್ನ, ದತ್ತಪಂಜರ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
ಕುಂಭ:
ಉದ್ಯೋಗದಲ್ಲಿ ಶ್ಲಾಘನಾರ್ಹ ಸಾಧನೆ.. ಸೇವೆಯ ಅವಕಾಶಗಳಿಗಾಗಿ ಹುಡುಕಾಟ. ಮನೆಯಲ್ಲಿ ದೇವತಾ ಕಾರ್ಯ. ವಿವಾಹಾಸಕ್ತರಿಗೆ ಯೋಗ್ಯ ಸಂಬಂಧ ಒದಗುವ ನಿರೀಕ್ಷೆ. ಗೃಹಿಣಿಯರ ಸ್ವಾವಲಂಬನೆ ಯೋಜನೆ ಪ್ರಗತಿ. ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ಶನಿಮಹಾತ್ಮೆ ಓದಿ.
ಮೀನ:
ಗುರುಸಮಾನರ ಹಠಾತ್ ಭೇಟಿ.. ಉದ್ಯೋಗದಲ್ಲಿ ಯಶಸ್ಸು. ಸರ್ಕಾರಿ ಅಧಿಕಾರಿಗಳು ಮತ್ತಷ್ಟು ನೌಕರರಿಂದ ಉತ್ತಮ ಸ್ಪಂದನೆ. ವೃತ್ತಿಪರ ಉದ್ಯೋಗಸ್ಥರಿಗೆ ಕೆಲಸದ ಒತ್ತಡ.. ಮಾತೃವರ್ಗದ ಸದಾಶಯದಿಂದ ಕಾರ್ಯಗಳಲ್ಲಿ ಜಯ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.