ಪುತ್ತೂರು: ಡಿ.12 ಮತ್ತು 13 ರಂದು ಗಿರಿಜಾ ಕಲ್ಯಾಣೋತ್ಸವ.. ಆಮಂತ್ರಣ ಪತ್ರಿಕೆ ಬಿಡುಗಡೆ
Puttur: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ, ಡಿ.12 ಮತ್ತು 13 ರಂದು ಅದ್ದೂರಿ ಗಿರಿಜಾ ಕಲ್ಯಾಣೋತ್ಸವ ನಡೆಯಲಿದ್ದು, ಇಂದು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ, ಡಿ.12 ಮತ್ತು 13 ರಂದು ಅದ್ದೂರಿ 'ಗಿರಿಜಾ ಕಲ್ಯಾಣೋತ್ಸವ' ನಡೆಯಲಿದ್ದು, ಇಂದು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
ಇಲ್ಲಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇಗುಲದ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಅವರು 'ಆಮಂತ್ರಣ ಪತ್ರಿಕೆ'ಯನ್ನು ಹೊರತಂದರು.

ಈ ಕಾರ್ಯಕ್ರಮದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಗಿರಿಜಾ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ಡಾ.ಅಖಿಲೇಶ್ ಪಾಣಾಜೆ, ವಿಶ್ವ ಹಿಂದೂ ಪರಿಷತ್ ಕರ್ನಾಟಕ ಪ್ರಾಂತ ಉಪಾಧ್ಯಕ್ಷ ಯು.ಪೂವಪ್ಪ, ದೈವ ನರ್ತಕ ಚಂದ್ರ ನಳಿಕೆ, ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ, ಪುತ್ತಿಲ ಪರಿವಾರದ ಅಧ್ಯಕ್ಷ ಶ್ರೀರಾಮ್ ಭಟ್ ಪಾತಾಳ, ಗಿರಿಜಾ ಕಲ್ಯಾಣೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ತೆಂಕಿಲ, ಕೋಶಾಧಿಕಾರಿ ಉದಯ ಕುಮಾರ್, ಸೀತಾ ಪರಿವಾರದ ಅಧ್ಯಕ್ಷೆ ಪ್ರೇಮಾ ರಾಧಾಕೃಷ್ಣ ರೈ, ಗೌರವಾಧ್ಯಕ್ಷ ವಾಸು ಪೂಜಾರಿ, ಸುಜಿತ್ ಗಣಪತಿ ನಾಯಕ್, ಮೋನಪ್ಪ ಪುರುಷ ಹಾಗೂ ಕಾರ್ಯಾಧ್ಯಕ್ಷ ಅನಿಲ್ ಕಣ್ಣನೂರ್ಜಿ ಉಪಸ್ಥಿತರಿದ್ದರು.
ವಿಭಾ ಪ್ರಾರ್ಥಿಸಿದರು. ಅನಿಲ್ ಕಣ್ಣನೂರ್ಜಿ ಸ್ವಾಗತಿಸಿದರು. ರವಿ ರೈ ಮಠ ನಿರೂಪಿಸಿದರು.