Gandhari: ಗಾಂಧಾರಿ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ

Gandhari: ತಾಪ್ಸಿ ಪನ್ನು ನಟನೆಯ ಆಕ್ಷನ್ - ಥ್ರಿಲ್ಲರ್ ಸಿನಿಮಾ 'ಗಾಂಧಾರಿ' ಬುಧವಾರ ಒಟಿಟಿಯಲ್ಲಿ ಬಿಡುಗಡೆಗೊಂಡಿದೆ.

Sep 4, 2026 - 22:08
Gandhari: ಗಾಂಧಾರಿ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ

ತಾಪ್ಸಿ ಪನ್ನು (Taapsee Pannu) ನಟನೆಯ ಆಕ್ಷನ್ - ಥ್ರಿಲ್ಲರ್ ಸಿನಿಮಾ 'ಗಾಂಧಾರಿ' ಬುಧವಾರ ಒಟಿಟಿಯಲ್ಲಿ ಬಿಡುಗಡೆಗೊಂಡಿದೆ. ನೆಟ್‌ಫ್ಲಿಕ್ಸ್ (Netflix) ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತದೆ. ಹಿಂದಿ ಭಾಷೆಯಲ್ಲಿ ವೀಕ್ಷಣೆಗೆ ಲಭ್ಯವಿದೆ. 

ಈ ಚಿತ್ರವು, ರೈಲು ನಿಲ್ದಾಣದಲ್ಲಿ ಅಪಹರಣಕ್ಕೊಳಗಾಗುವ ತನ್ನ ಪುಟ್ಟ ಮಗಳನ್ನು ಹುಡುಕುವ ತಾಯಿಯೊಬ್ಬಳ ಕಥೆಯನ್ನು ಆಧರಿಸಿದೆ.

ದೇವಶಿಶ್ ಮುಖರ್ಜಿ ಆಕ್ಷನ್ ಕಟ್ ಹೇಳಿದ್ದಾರೆ. ಕಥಾ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ನಿರ್ಮಿಸಲಾಗಿದೆ. ಕನಿಕಾ ಧಿಲ್ಲೋನ್ ಚಿತ್ರಕಥೆ & ಸಂಭಾಷಣೆ ಬರೆದಿದ್ದಾರೆ. ಅಮಿತ್ ರಾಯ್ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಇಶ್ವಕ್ ಸಿಂಗ್, ಮಿತಾ ವಶಿಷ್ಠ, ಛಾಯಾ ಕದಮ್ ಹಾಗೂ ಸ್ವಾಸ್ತಿಕಾ ಮುಖರ್ಜಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.