KSET ಪರೀಕ್ಷೆಗೆ ಅರ್ಜಿ: ನಾಡಿದ್ದು ಕಡೆ ದಿನ

KSET: 'ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ'ಗೆ ಅಧಿಸೂಚನೆ ಹೊರಡಿಸಲಾಗಿದೆ. ಈ ಹಿಂದೆ, ಅರ್ಜಿ ಸಲ್ಲಿಸಲು ಸೆ.5 ಕಡೆ ದಿನವಾಗಿತ್ತು. ಆ ದಿನಾಂಕವನ್ನು ವಿಸ್ತರಿಸಲಾಗಿದ್ದು, ಈಗ ನಾಡಿದ್ದು ಅಂದರೆ ಸೆ.10ಕ್ಕೆ ಕೊನೆಯಾಗುತ್ತದೆ.

Sep 8, 2026 - 16:43
KSET ಪರೀಕ್ಷೆಗೆ ಅರ್ಜಿ: ನಾಡಿದ್ದು ಕಡೆ ದಿನ

ಬೆಂಗಳೂರು: ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ (KSET) ಅಧಿಸೂಚನೆ ಹೊರಡಿಸಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಈ ಪರೀಕ್ಷೆ ನಡೆಸಲಿದೆ. ಈ ಹಿಂದೆ, ಅರ್ಜಿ ಸಲ್ಲಿಸಲು ಸೆ.5 ಕಡೆ ದಿನವಾಗಿತ್ತು. ಆ ದಿನಾಂಕವನ್ನು ವಿಸ್ತರಿಸಲಾಗಿದ್ದು, ಈಗ ನಾಡಿದ್ದು ಅಂದರೆ ಸೆ.10ಕ್ಕೆ ಕೊನೆಯಾಗುತ್ತದೆ. 

ವಿದ್ಯಾರ್ಹತೆ: ಯುಜಿಸಿಯಿಂದ ಮಾನ್ಯತೆ ಪಡೆದ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿರಬೇಕು. ಸಾಮಾನ್ಯ ವರ್ಗದವರು ಶೇಕಡ 55% ಹಾಗೂ ಇತರೆ ಎಲ್ಲಾ ವರ್ಗದ ಅಭ್ಯರ್ಥಿಗಳು 50% ಅಂಕಗಳನ್ನು ಗಳಿಸಿರಬೇಕು. 

ವಯಸ್ಸು: ಈ ಪರೀಕ್ಷೆ ಬರೆಯಲು ಯಾವುದೇ ಗರಿಷ್ಠ ವಯೋಮಿತಿ ನಿಗದಿಪಡಿಸಿಲ್ಲ.

ಎಲ್ಲಿ ಪರೀಕ್ಷೆ: ಒಟ್ಟು 37 ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಗಳು ಬೆಂಗಳೂರು, ಬೆಳಗಾವಿ, ಬಳ್ಳಾರಿ, ವಿಜಯಪುರ, ದಾವಣಗೆರೆ, ಧಾರವಾಡ, ಕಲಬುರಗಿ, ಮೈಸೂರು, ಶಿವಮೊಗ್ಗ, ತುಮಕೂರು ಹಾಗೂ ಮಂಗಳೂರು ಕೇಂದ್ರಗಳಲ್ಲಿ ಪರೀಕ್ಷೆ ಬರೆಯಬಹುದು. 

ಅರ್ಜಿ ಶುಲ್ಕ: ಸಾಮಾನ್ಯ, 2ಎ/ 2ಬಿ / 3ಎ / 3ಬಿ ಹಾಗೂ ಇತರೆ ರಾಜ್ಯದವರಿಗೆ ರೂ.750 ಮತ್ತು ವರ್ಗ-1, ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ ರೂ.500 ಶುಲ್ಕವಿದೆ.

ಹೆಚ್ಚಿನ ಮಾಹಿತಿ: https://cetonline.karnataka.gov.in/kea/kset2026

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.