ISRO: ವಿವಿಧ ಹುದ್ದೆ.. ನಾಳೆಯೇ ಕಡೆ ದಿನ

ISRO: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO), ಜೂನಿಯರ್ ಪರ್ಸನಲ್ ಅಸಿಸ್ಟೆಂಟ್, ಅಪ್ಪರ್ ಡಿವಿಷನ್ ಕ್ಲರ್ಕ್ ಹಾಗೂ ಸ್ಟೆನೋಗ್ರಾಫರ್ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಸಲು ನಾಳೆ (ಆ.16) ಕಡೆ ದಿನವಾಗಿದೆ.

Aug 15, 2026 - 17:33
ISRO: ವಿವಿಧ ಹುದ್ದೆ.. ನಾಳೆಯೇ ಕಡೆ ದಿನ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಜೂನಿಯರ್ ಪರ್ಸನಲ್ ಅಸಿಸ್ಟೆಂಟ್, ಅಪ್ಪರ್ ಡಿವಿಷನ್ ಕ್ಲರ್ಕ್ ಹಾಗೂ ಸ್ಟೆನೋಗ್ರಾಫರ್ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಒಟ್ಟು 244 ಹುದ್ದೆಗಳು ಖಾಲಿಯಿವೆ. ಅರ್ಜಿ ಸಲ್ಲಿಸಲು ನಾಳೆ (ಆ.16) ಕಡೆ ದಿನವಾಗಿದೆ. 

ವಿದ್ಯಾರ್ಹತೆ: ಈ ಹುದ್ದೆಗಳಿಗೆ ಅರ್ಜಿ ಹಾಕಲು ಮಾನ್ಯತೆ ಪಡೆದ ವಿವಿಯಿಂದ 60% ಅಥವಾ 6.32 ಸಿಜಿಪಿಎ ಅಂಕಗಳೊಂದಿಗೆ 'ಪದವಿ' ಪಾಸ್ ಆಗಿರಬೇಕು. 

ವಯೋಮಿತಿ: ಕನಿಷ್ಠ 18 ವರ್ಷ ಮತ್ತು ಗರಿಷ್ಠ 28 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಒಬಿಸಿಯವರಿಗೆ 31 ವರ್ಷ ಹಾಗೂ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 33 ವರ್ಷಗಳವರೆಗೆ ಸಡಿಲಿಕೆ ನೀಡಲಾಗಿದೆ. 

ಅರ್ಜಿ ಶುಲ್ಕ: ರೂ.500 ಅರ್ಜಿ ಶುಲ್ಕ ನಿಗದಿಪಡಿಸಲಾಗಿದ್ದು, ಲಿಖಿತ ಪರೀಕ್ಷೆ ಬಳಿಕ ನಿಯಮಾನುಸಾರ ಮರುಪಾವತಿಸಲಾಗುತ್ತದೆ. ದೇಶಾದ್ಯಂತ ಅಗರ್ತಲಾ, ಅಹಮದಾಬಾದ್ ಹಾಗೂ ಬೆಂಗಳೂರು ಸೇರಿ 38 ಸ್ಥಳಗಳಲ್ಲಿ ಲಿಖಿತ ಪರೀಕ್ಷೆ ನಡೆಯಲಿದೆ. 

ಹೆಚ್ಚಿನ ಮಾಹಿತಿಗೆ https://www.isro.gov.in/Careers.htmlಗೆ ಸಂಪರ್ಕಿಸಿರಿ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.