Bank Of Baroda: 1,100 ವಿವಿಧ ಹುದ್ದೆಗೆ ಅರ್ಜಿ

Bank Of Baroda (BOB): ಬ್ಯಾಂಕ್ ಆಫ್ ಬರೋಡಾ 1,100 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.

Sep 14, 2026 - 16:51
Sep 14, 2026 - 16:52
Bank Of Baroda: 1,100 ವಿವಿಧ ಹುದ್ದೆಗೆ ಅರ್ಜಿ

Bank Of Baroda (BOB): ಬ್ಯಾಂಕ್ ಆಫ್ ಬರೋಡಾ, ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ವೆಲ್ತ್ ಎಕ್ಸಿಕ್ಯೂಟಿವ್ (Wealth Executive) ಹಾಗೂ ಕ್ರೆಡಿಟ್ ಅನಾಲಿಸ್ಟ್ (Credit Analyst) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. 

ಒಟ್ಟು ಹುದ್ದೆ: 1,100 ಹುದ್ದೆಗಳನ್ನು ತುಂಬಲಾಗುತ್ತದೆ. 

ವಿದ್ಯಾರ್ಹತೆ: ವೆಲ್ತ್ ಎಕ್ಸಿಕ್ಯೂಟಿವ್ ಹುದ್ದೆಗೆ ಅರ್ಜಿ ಸಲ್ಲಿಸಲು ಯಾವುದೇ ವಿಷಯದಲ್ಲಿ ಪದವಿ ಪೂರೈಸಿರಬೇಕು. ಸಾರ್ವಜನಿಕ, ಖಾಸಗಿ ಅಥವಾ ವಿದೇಶಿ ಬ್ಯಾಂಕ್‌ಗಳಲ್ಲಿ 'ವೆಲ್ತ್ ಪ್ರಾಡಕ್ಟ್ಸ್' ವಿಭಾಗದಲ್ಲಿ ಕನಿಷ್ಠ 2 ವರ್ಷ ಕೆಲಸ ಮಾಡಿರಬೇಕು. 

ಕ್ರೆಡಿಟ್ ಅನಾಲಿಸ್ಟ್ ಹುದ್ದೆಗೆ ಅರ್ಜಿ ಸಲ್ಲಿಸುವವರೂ ಕೂಡ ಯಾವುದೇ ವಿಷಯದಲ್ಲಿ ಪದವಿ ಉತ್ತೀರ್ಣರಾಗಿರಬೇಕು. ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್‌ನಲ್ಲಿ ಕನಿಷ್ಠ 1 ವರ್ಷ ಕಾರ್ಯಾನುಭವವಿರಬೇಕು.

ವಯೋಮಿತಿ: ವೆಲ್ತ್ ಎಕ್ಸಿಕ್ಯೂಟಿವ್ ಕನಿಷ್ಠ 22 ಹಾಗೂ ಗರಿಷ್ಠ 32, ಕ್ರೆಡಿಟ್ ಅನಾಲಿಸ್ಟ್ 21 ಮತ್ತು ಗರಿಷ್ಠ 33 ವರ್ಷ ವಯೋಮಿತಿ ನಿಗದಿಪಡಿಲಾಗಿದೆ. ನಿಯಮಾನುಸಾರ ಸಡಿಲಿಕೆಯನ್ನು ನೀಡಲಾಗಿದೆ. 

ಅರ್ಜಿ ಶುಲ್ಕ: ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ರೂ.850 ಹಾಗೂ ಎಸ್‌ಸಿ, ಎಸ್‌ಟಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ರೂ.175 ನಿಗದಿಪಡಿಸಲಾಗಿದೆ. 

ವೇತನ: ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.93,960 ವರೆಗೆ ವೇತನ ಲಭ್ಯವಾಗುತ್ತದೆ. 

ಅರ್ಜಿ ಸಲ್ಲಿಸಲು ಕಡೆ ದಿನ: ಸೆ.24 ಕೊನೆಯಾಗುತ್ತದೆ. ಹೆಚ್ಚಿನ ಮಾಹಿತಿಗೆ https://bankofbaroda.bank.in/career/current-opportunitiesಗೆ ಸಂಪರ್ಕಿಸಬಹುದು.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar TG ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.