ಭಂಡಾರತ್ತಡ್ಕ ಸಾರಕೊಟೇಲಿನಲ್ಲಿ ಶ್ರದ್ಧಾ-ಭಕ್ತಿಯಿಂದ ನಾಗಪಂಚಮಿ ಆಚರಣೆ
Naga Panchami: ಭಂಡಾರತ್ತಡ್ಕ ಸಾರಕೂಟೇಲು ನಾಗಬ್ರಹ್ಮ, ರಕ್ತೇಶ್ವರಿ, ಗುಳಿಗ ಮತ್ತು ಸತ್ಯನಾರಾಯಣ ಪೂಜಾ ಸನ್ನಿಧಿಯಲ್ಲಿ, ನಾಗಪಂಚಮಿಯ ಶುಭ ಪರ್ವದಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅತ್ಯಂತ ವಿಜೃಂಭಣೆ ಮತ್ತು ಶ್ರದ್ಧಾ-ಭಕ್ತಿಯಿಂದ ನಡೆದವು.
ಪುತ್ತೂರು: ಇಲ್ಲಿನ ಭಂಡಾರತ್ತಡ್ಕ ಸಾರಕೂಟೇಲು ನಾಗಬ್ರಹ್ಮ, ರಕ್ತೇಶ್ವರಿ, ಗುಳಿಗ ಮತ್ತು ಸತ್ಯನಾರಾಯಣ ಪೂಜಾ ಸನ್ನಿಧಿಯಲ್ಲಿ, ನಾಗಪಂಚಮಿಯ ಶುಭ ಪರ್ವದಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅತ್ಯಂತ ವಿಜೃಂಭಣೆ ಮಾತು ಶ್ರದ್ಧಾ-ಭಕ್ತಿಯಿಂದ ನಡೆದವು.
ಬೆಳಗ್ಗೆಯಿಂದಲೇ ದೇಗುಲದಲ್ಲಿ ನಾನಾ ಧಾರ್ಮಿಕ ವಿಧಿವಿಧಾನಗಳು ಜರುಗಿದವು. ನಾಗದೇವರ ಮೂರ್ತಿಗೆ ಹಾಲು, ಸಿಯಾಳದಿಂದ ವಿಶೇಷ ಅಭಿಷೇಕ ಮತ್ತು ಸಾಂಪ್ರದಾಯಿಕ ತಂಬಿಲ ಸೇವೆಯನ್ನು ನೆರವೇರಿಸಲಾಯಿತು. ಭಕ್ತಾದಿಗಳು ತಂಬಿಲ ಸೇವೆ ಹಾಗೂ ಅಭಿಷೇಕದಲ್ಲಿ ಪಾಲ್ಗೊಂಡು ನಾಗದೇವರ ಕೃಪೆಗೆ ಪಾತ್ರರಾದರು. ಪೂಜಾ ವಿಧಿವಿಧಾನಗಳ ಕೊನೆಯಲ್ಲಿ ಮಹಾಪೂಜೆ ನಡೆಯಿತು.

ಭಕ್ತಾದಿಗಳ ಸಮಾಗಮ:
ಈ ಧಾರ್ಮಿಕ ಸಮಾರಂಭದಲ್ಲಿ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಭಾಗವಹಿಸಿದ್ದರು. ಊರಿನ ಹಾಗೂ ಪರವೂರಿನ ನೂರಾರು ಭಕ್ತಾದಿಗಳು ಆಗಮಿಸಿ, ನಾಗದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಧನ್ಯತೆ ಮೆರೆದರು. ಸನ್ನಿಧಿಯಲ್ಲಿ ಭಕ್ತಾದಿಗಳಿಗೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.