ಹೊಸ ಭವಿಷ್ಯ: ಇಂದು ಯಾರಿಗೆ ಶುಭ?
Daily Horoscope: ಇಂದು (ಶನಿವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.
ಮೇಷ:
ದೇಹ, ಮನಸ್ಸು ಎರಡಕ್ಕೂ ಶ್ರಮಕಾರಕವಾದ ಚಟುವಟಿಕೆಗಳು.. ಬಂಧುಗಳಿಂದ ಅಪರೂಪದ ಭೇಟಿ. ಗೆಳೆಯನ ಮನೆಯ ಧಾರ್ಮಿಕ ಸಮಾರಂಭದಲ್ಲಿ ಭಾಗಿ. ಪಿತ್ರಾರ್ಜಿತ ಆಸ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳ ವೀಕ್ಷಣೆ. ಕೆಲವರಿಗೆ ಅತಿಥಿ ಸತ್ಕಾರ ಯೋಗ. ಗಣೇಶ ಕವಚ, ಶಿವಸಹಸ್ರನಾಮ, ಶನಿಮಹಾತ್ಮೆ ಓದಿ.
ವೃಷಭ:
ನಿಯೋಜಿತ ಕಾರ್ಯಗಳಿಗೆ ಪೂರ್ವಸಿದ್ಧತೆ.. ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ನೆಮ್ಮದಿ. ಕುಟುಂಬಸಹಿತ ಊರಿನ ದೇವಾಲಯಕ್ಕೆ ಭೇಟಿ. ಗೃಹೋತ್ಪನ್ನ ಖಾದ್ಯ ಪದಾರ್ಥಗಳಿಗೆ ಅಧಿಕ ಬೇಡಿಕೆ. ದಂಪತಿಗಳ ನಡುವೆ ಅನುರಾಗ ವೃದ್ಧಿ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
ಮಿಥುನ:
ಉದ್ಯೋಗಸ್ಥರಿಗೆ ಕೆಲಸ, ಕಾರ್ಯಗಳು ಸುಲಭ.. ಉದ್ಯಮಿಗಳಿಗೆ ಸಮಾಧಾನದ ಸಮಾಚಾರ. ವಸ್ತ್ರ, ಸಿದ್ಧ ಉಡುಪು, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ. ಶ್ರಮಜೀವಿಗಳ ಪಾಲಿಗೆ ಶುಭದಿನ. ಸಂಗೀತ ಶ್ರವಣ, ಭಜನೆ, ಸತ್ಸಂಗಗಳಲ್ಲಿ ಕಾಲಯಾಪನೆ. ಗಣೇಶ ಅಷ್ಟಕ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
ಕರ್ಕಾಟಕ:
ವ್ಯವಹಾರದ ಅಭಿವೃದ್ಧಿಯ ಕುರಿತು ಸವಿವರ ವಿಮರ್ಶೆ.. ಸಹೋದ್ಯೋಗಿಗಳಿಂದ ಸೌಹಾರ್ದ ಭೇಟಿ. ಗೃಹೋತ್ಪನ್ನಗಳಿಗೆ ವ್ಯಾಪಕ ಬೇಡಿಕೆ. ಮನೆಯಲ್ಲಿ ದೇವತಾ ಕಾರ್ಯದ ಸಂಭ್ರಮ. ಗುರುಸಮಾನ ವ್ಯಕ್ತಿಯ ಹಠಾತ್ ಆಗಮನ. ಗಣೇಶ ಪಂಚರತ್ನ, ದತ್ತಪಂಜರ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.
ಸಿಂಹ:
ನಾನಾ ಕ್ಷೇತ್ರಗಳ ಪ್ರಮುಖರೊಂದಿಗೆ ಸಮಾಲೋಚನೆ.. ದೂರದ ಊರಿನಿಂದ ಬಂಧುಗಳ ಆಗಮನ. ಪೂರ್ಣಗೊಳ್ಳದ ಕಾಮಗಾರಿಗಳ ಸಮಸ್ಯೆ. ಉದ್ಯೋಗಾಸಕ್ತರಿಗೆ ನೌಕರಿ ಹುಡುಕಲು ಸಹಾಯ. ಅವಿವಾಹಿತರಿಂದ ಸೂಕ್ತ ಬಾಳಸಂಗಾತಿಗಾಗಿ ಶೋಧ. ಗಣೇಶ ದ್ವಾದಶನಾಮ ಸ್ತೋತ್ರ, ವಿಷ್ಣು ಸಹಸ್ರನಾಮ, ಇಂದ್ರಾಕ್ಷಿ ಸ್ತೋತ್ರ ಓದಿ.
ಕನ್ಯಾ:
ಕೆಲವರಿಗೆ ಅರ್ಧ ದಿನ ಕೆಲವರಿಗೆ ಇಡೀ ದಿನ ವಿಶ್ರಾಂತಿ.. ಸ್ಥಳೀಯ ಅಭಿವೃದ್ಧಿ ಯೋಜನೆಗಳ ಕುರಿತು ಸಮಾಲೋಚನೆ. ವ್ಯವಹಾರದ ಸಂಬಂಧ ಸಣ್ಣ ಪ್ರವಾಸ ಸಂಭವ. ಕೆಲವರಿಗೆ ಅನ್ನದಾನ ಮಾಡುವ ಅವಕಾಶ. ಸಂಗೀತ ಶ್ರವಣ, ಸತ್ಸಂಗಗಳಿಗೆ ಸಮಯ ಹೊಂದಾಣಿಕೆ. ಗಣೇಶ ಕವಚ, ಶಿವಪಂಚಾಕ್ಷರ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
ತುಲಾ:
ಉದ್ಯೋಗ, ವ್ಯವಹಾರಗಳಲ್ಲಿ ಆನಂದಾನುಭವ.. ಹಿರಿಯರ ಭವಿಷ್ಯದ ಕುರಿತು ನಿಶ್ಚಿಂತರಾಗಿರಿ. ಬಾಲ್ಯದ ಒಡನಾಡಿಯ ಅನಿರೀಕ್ಷಿತ ಭೇಟಿ. ಹತ್ತಿರದ ದೇವಮಂದಿರಕ್ಕೆ ಭೇಟಿ. ಸಂಸಾರದಲ್ಲಿ, ಅನುರಾಗ, ಆರೋಗ್ಯ ವೃದ್ಧಿ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಭುಜಂಗ ಸ್ತೋತ್ರ, ಕನಕಧಾರಾ ಸ್ತೋತ್ರ ಓದಿ.
ವೃಶ್ಚಿಕ:
ಅನಿರೀಕ್ಷಿತ ಮೂಲಗಳಿಂದ ಧನಪ್ರಾಪ್ತಿ.. ಕೃಷಿಕ್ಷೇತ್ರದಲ್ಲಿ ಹೊಸ ಬದುಕಿನ ಭರವಸೆ. ಸಮಾಜಸೇವಾ ಕಾರ್ಯಗಳಲ್ಲಿ ಭಾಗಿ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಉತ್ತಮ ಲಾಭ. ಮನೆಯಲ್ಲಿ ಪ್ರೀತಿಯ ವಾತಾವರಣ. ಗಣೇಶ ಅಷ್ಟಕ, ರಾಮ ಭುಜಂಗಪ್ರಯಾತ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
ಧನು:
ಕಹಿ ಅನುಭವಗಳಿಗೆ ವಿದಾಯ.. ಸಹೋದ್ಯೋಗಿ ಮಿತ್ರರೊಂದಿಗೆ ಸಮಾಲೋಚನೆ. ಪರಿಸರ ಸ್ವಚ್ಛತೆಯ ಕಾರ್ಯಗಳಲ್ಲಿ ಪಾಲುಗೊಳ್ಳುವಿಕೆ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ಕೃಷಿ ಸಂಬಂಧಿ ಉದ್ಯಮ ಪ್ರಗತಿ. ಗಣೇಶ ಕವಚ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ ಗೌರೀದಶಕ ಓದಿ.
ಮಕರ:
ದೇವತಾರ್ಚನೆಯಲ್ಲಿ ಪಾಲುಗೊಳ್ಳುವ ಸಂದರ್ಭ. ಗುರುಸಮಾನ ವ್ಯಕ್ತಿಯಿಂದ ಮನೆಗೆ ಭೇಟಿ. ಧಾರ್ಮಿಕ ಗ್ರಂಥ ವಾಚನ, ಆಪ್ತ ಸಲಹೆಗೆ ಸಮಯ. ಬಂಧುಗಳ ಮನೆಯಲ್ಲಿ ಧಾರ್ಮಿಕ ಕಾರ್ಯ. ಎಲ್ಲರಿಗೂ ಉತ್ತಮ ಆರೋಗ್ಯ. ಗಣಪತಿ ಅಥರ್ವಶೀರ್ಷ, ದತ್ತಪಂಜರ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
ಕುಂಭ:
ವೈವಿಧ್ಯಮಯ ಕಾರ್ಯಗಳಲ್ಲಿ ಭಾಗಿ.. ಹೊಸ ಕಾರ್ಯಗಳನ್ನು ನಿರ್ವಹಿಸಲು ಆಹ್ವಾನ. ಬಂಧುಗಳ ಮನೆಯಲ್ಲಿ ಶುಭ ಸಮಾರಂಭ. ಗ್ರಾಹಕರ ಬೇಡಿಕೆಗಳಿಗೆ ಶೀಘ್ರ ಸ್ಪಂದನ. ಮನೆಯಲ್ಲಿ ಎಲ್ಲರಿಗೂ ಆರೋಗ್ಯ ಉತ್ತಮ. ಗಣೇಶ ಸ್ತೋತ್ರ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.
ಮೀನ:
ಕಾರ್ಯಗಳನ್ನು ಪೂರ್ಣಗೊಳಿಸಲು ವಿಶೇಷ ಯತ್ನ.. ವೃತ್ತಿರಂಗದ ಮಿತ್ರರೊಡನೆ ಸಮಾಲೋಚನೆ. ಸರ್ಕಾರಿ ಇಲಾಖೆಗಳಿಂದ ಉತ್ತಮ ಸ್ಪಂದನ.ಆಸ್ಪತ್ರೆ, ಅನಾಥಾಲಯಗಳಿಗೆ ಭೇಟಿಯಿತ್ತು ಹಣ್ಣು, ಸಿಹಿತಿಂಡಿ ವಿತರಣೆ. ದಾಂಪತ್ಯ ಜೀವನ ಸುಖಮಯ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.