ತಾಲೂಕು ಮಟ್ಟದ ಥ್ರೋಬಾಲ್ ಪಂದ್ಯಾವಳಿ: ವಿವೇಕಾನಂದ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ದ್ವಿತೀಯ ಸ್ಥಾನ

Taluk-level Throwball Tournament: ತಾಲೂಕು ಮಟ್ಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ ವಿವೇಕಾನಂದ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ದ್ವಿತೀಯ ಸ್ಥಾನ ಲಭಿಸಿದೆ.

Oct 5, 2026 - 19:10
ತಾಲೂಕು ಮಟ್ಟದ ಥ್ರೋಬಾಲ್ ಪಂದ್ಯಾವಳಿ: ವಿವೇಕಾನಂದ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ದ್ವಿತೀಯ ಸ್ಥಾನ

ಪುತ್ತೂರು: ಕೆಯ್ಯೂರಿನ ಕೆಪಿಎಸ್ ಪಿಯು ಕಾಲೇಜಿನಲ್ಲಿ 'ಶಾಲಾ ಶಿಕ್ಷಣ ಇಲಾಖೆ' ಪದವಿಪೂರ್ವ ವಿಭಾಗದ ವತಿಯಿಂದ ಈಚೆಗೆ ನಡೆದ ತಾಲೂಕು ಮಟ್ಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ, ವಿವೇಕಾನಂದ ಪಿಯು ಕಾಲೇಜಿನ ಬಾಲಕ ಮತ್ತು ಬಾಲಕಿಯರ ತಂಡ ದ್ವಿತೀಯ ಸ್ಥಾನವನ್ನು ಪಡೆದಿದೆ. 

ಬಾಲಕಿಯರ ತಂಡದ ಪರವಾಗಿ ಪ್ರಥಮ ಪಿಯುಸಿ ವಿದ್ಯಾರ್ಥಿನಿಯರಾದ ರುತಿಕಾ ಕೆ.ಎಸ್, ಪ್ರಾರ್ಥನಾ ವೈ.ಪಿ, ತನ್ವಿತಾ ಎಸ್, ಅಶ್ಮಿತಾ ಬಿ.ವಿ, ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಾದ ಚಾರುಸ್ಮಿತಾ ಆರ್, ಪ್ರಣೀಕ್ಷಾ ಟಿ ಶೆಟ್ಟಿ, ಸಾರಿಕಾ ರೈ ಎಸ್, ಯಜ್ಞಶ್ರೀ, ವರ್ಷಿತಾ ಯು.ಎಸ್, ಯೋಗಿತಾ ಹೆಚ್.ಎಸ್, ಜನನಿ ಹೆಚ್.ಪಿ, ಶ್ವೇತಾಶ್ರೀ ಹೆಚ್.ಎಲ್ ಹಾಗೂ ತನುಶ್ರೀ ರೈ ಭಾಗವಹಿಸಿದ್ದರು.

 ಬಾಲಕರ ತಂಡದ ಪರವಾಗಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ಚೇತನ್ ಕುಮಾರ್, ತನ್ವಿತ್ ಎಸ್, ಯುವರಾಜ್, ನಿರಿಕ್ಷಿತ್, ತ್ರಿಶಿಕ್ ಕೆ ಗೌಡ, ಶಾಶ್ವತ್ ಎಸ್.ಹೆಚ್, ಸೂರಜ್ ಪಿ, ಅಭಿರಾಮ್ ಬಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ವರ್ಷಿತ್ ಬಿ.ಎಂ, ಮನೋಜ್, ಅಂಕಿತ್ ಪಾಲ್ಗೊಂಡಿದ್ದರು. 

ಇವರುಗಳಿಗೆ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ರವಿಶಂಕರ್, ಡಾ.ಜ್ಯೋತಿ ಹಾಗೂ ಯತೀಶ್ ಅವರುಗಳು ತರಬೇತಿಯನ್ನು  ನೀಡಿದ್ದಾರೆ. ಈ ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಮತ್ತು ಉಪನ್ಯಾಸಕೇತರ ವೃಂದದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.