ಪುತ್ತೂರು: ಇನ್ವಿಕ್ತಾ ಕಾಮರ್ಸ್ ಅಸೋಸಿಯೇಷನ್ ಉದ್ಘಾಟನೆ

Puttur: ಅಕ್ಷಯ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ 'ಇನ್ವಿಕ್ತಾ ಕಾಮರ್ಸ್ ಅಸೋಸಿಯೇಷನ್' ಉದ್ಘಾಟನಾ ಸಮಾರಂಭ & ವೈಯಕ್ತಿಕ ಹಣಕಾಸು ಯೋಜನೆ ಕುರಿತು ಈಚೆಗೆ ವಿಶೇಷ ಉಪನ್ಯಾಸವನ್ನು ಆಯೋಜಿಸಲಾಗಿತ್ತು.

Aug 18, 2026 - 12:18
ಪುತ್ತೂರು: ಇನ್ವಿಕ್ತಾ ಕಾಮರ್ಸ್ ಅಸೋಸಿಯೇಷನ್ ಉದ್ಘಾಟನೆ

ಪುತ್ತೂರು: ಅಕ್ಷಯ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ 'ಇನ್ವಿಕ್ತಾ ಕಾಮರ್ಸ್ ಅಸೋಸಿಯೇಷನ್' ಉದ್ಘಾಟನಾ ಸಮಾರಂಭ & ವೈಯಕ್ತಿಕ ಹಣಕಾಸು ಯೋಜನೆ ಕುರಿತು ಈಚೆಗೆ ವಿಶೇಷ ಉಪನ್ಯಾಸವನ್ನು ಆಯೋಜಿಸಲಾಗಿತ್ತು.
 
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಡಾ.ಪೌಲ್ ಡಿಸೋಜಾ, 'ಅಸೋಸಿಯೇಷನ್'ನ್ನು ಉದ್ಘಾಟಿಸಿದರು. ಆ ಬಳಿಕ ವೈಯಕ್ತಿಕ ಹಣಕಾಸು ಯೋಜನೆಯ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಹಣವನ್ನು ಸಮರ್ಪಕವಾಗಿ ನಿರ್ವಹಿಸುವುದು, ಉಳಿತಾಯದ ಮಹತ್ವ, ಹೂಡಿಕೆ ಮತ್ತು ಭವಿಷ್ಯದ ಆರ್ಥಿಕ ಗುರಿಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಹಣಕಾಸು ಯೋಜನೆ ರೂಪಿಸಿಕೊಳ್ಳುವ ಅಗತ್ಯವನ್ನು ವಿವರಿಸಿದರು.

 

ವಿದ್ಯಾರ್ಥಿಗಳಿಗೆ ವೈಯಕ್ತಿಕ ಹಣಕಾಸಿನ ನಿರ್ವಹಣೆ, ಆದಾಯ, ಖರ್ಚಿನ ಸಮತೋಲನ ಹಾಗೂ ಭವಿಷ್ಯದ ಆರ್ಥಿಕ ಭದ್ರತೆಯ ಬಗ್ಗೆ ಪ್ರಾಯೋಗಿಕ ವಿವರಗಳನ್ನು ನೀಡಲಾಯಿತು. ವಿದ್ಯಾರ್ಥಿಗಳು ಉಪನ್ಯಾಸದಲ್ಲಿ ಆಸಕ್ತಿಯಿಂದ ಭಾಗವಹಿಸಿದ್ದರು.  

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಕ್ಷಣ್ ಟಿ.ಆರ್ ವಹಿಸಿದ್ದರು. ಆಡಳಿತ ಅಧಿಕಾರಿ ಅರ್ಪಿತ್ ಟಿ.ಎ ವಿದ್ಯಾರ್ಥಿಗಳಿಗೆ ಹೂಡಿಕೆಯ ಮಹತ್ವದ ಬಗ್ಗೆ ತಿಳಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪಾವನಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಐಕ್ಯೂಎಸಿ ಸಂಯೋಜಕ ರಶ್ಮಿ.ಕೆ ಮತ್ತು ಇನ್ವಿಕ್ತಾ ಸಂಯೋಜಕಿ ಯಕ್ಷಿತಾ ಮತ್ತು ಅಸೋಸಿಯೇಷನ್ ವಿದ್ಯಾರ್ಥಿ ಕಾರ್ಯದರ್ಶಿ ಅವಿಶ್ ಶೆಟ್ಟಿ ಇದ್ದರು. 

ಅವಿಶ್ ಶೆಟ್ಟಿ ಸ್ವಾಗತಿಸಿದರು. ಆಯಿಶಾತುಲ್ ವಫಾ ವಂದಿಸಿದರು ಮತ್ತು ಉದಿತ್ ನಿರೂಪಿಸಿದರು.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.