ಸರಿಯಾದ ಸಂಶೋಧನೆಯೇ ಸುದ್ದಿಗಳಿಗೆ ಮೂಲಾಧಾರ: ಪ್ರೊ.ಡಾ.ಶ್ರೀನಿವಾಸ್ ಹೊಡೆಯಾಳ

Vivekananda College: ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸ್ನಾತಕೋತ್ತರ ಪತ್ರಿಕೋದ್ಯಮ & ಸಮೂಹ ಸಂವಹನ ವಿಭಾಗ, ವಿವೇಕಾನಂದ ಸಂಶೋಧನಾ ಕೇಂದ್ರ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಈಚೆಗೆ 'ರಿಸರ್ಚ್ ಮೆಥಡಾಲಜಿ - ಅಂಡರ್ ಸ್ಟ್ಯಾಂಡಿಂಗ್ ಬೇಸಿಕ್ಸ್' ಕಾರ್ಯಾಗಾರ ನಡೆಯಿತು.

Sep 27, 2026 - 17:51
ಸರಿಯಾದ ಸಂಶೋಧನೆಯೇ ಸುದ್ದಿಗಳಿಗೆ ಮೂಲಾಧಾರ: ಪ್ರೊ.ಡಾ.ಶ್ರೀನಿವಾಸ್ ಹೊಡೆಯಾಳ

ಪುತ್ತೂರು: ಸಂಶೋಧನೆ ಎಂಬುದು ನಿರಂತರವಾಗಿ ಹರಿಯುವ ಅನ್ವೇಷಣೆಯ ಪಯಣ. ಇಲ್ಲಿ ವೈಯಕ್ತಿಕ ಭಾವನೆಗಳಿಗಿಂತ ಸತ್ಯತೆಗೆ ಪ್ರಾಮುಖ್ಯತೆ ಎಂದು ಮೂಡಬಿದರೆ ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಹ ಪ್ರಾದ್ಯಾಪಕ ಪ್ರೊ.ಡಾ.ಶ್ರೀನಿವಾಸ್ ಹೊಡೆಯಾಳ ಹೇಳಿದರು.

ಇಲ್ಲಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸ್ನಾತಕೋತ್ತರ ಪತ್ರಿಕೋದ್ಯಮ & ಸಮೂಹ ಸಂವಹನ ವಿಭಾಗ, ವಿವೇಕಾನಂದ ಸಂಶೋಧನಾ ಕೇಂದ್ರ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಈಚೆಗೆ ನಡೆದ 'ರಿಸರ್ಚ್ ಮೆಥಡಾಲಜಿ - ಅಂಡರ್ ಸ್ಟ್ಯಾಂಡಿಂಗ್ ಬೇಸಿಕ್ಸ್’ ವಿಷಯದ ಕುರಿತು ನಡೆದ ಕಾರ್ಯಗಾರದಲ್ಲಿ ಅವರು ಮಾತನಾಡಿದರು.

ಪತ್ರಿಕೋದ್ಯಮದಲ್ಲಿ ಸಂಶೋಧನಾ ವಿಧಾನವು ಕೇವಲ ಒಂದು ಪ್ರಕ್ರಿಯೆಯಲ್ಲ. ಅದು ಸತ್ಯದ ಅನಾವರಣಕ್ಕೆ, ಮಾಹಿತಿಯ ನಿಖರತೆಯನ್ನು ಪರೀಕ್ಷಿಸಲು ಸಹಾಯ ಮಾಡುತ್ತದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಪ್ರಾಥಮಿಕ ಹಾಗೂ ದ್ವಿತೀಯ ಮೂಲಗಳಿಂದ ಆಳವಾದ ಮಾಹಿತಿ ಸಂಗ್ರಹಿಸುವ ಕೌಶಲ್ಯವನ್ನು ಕರಗತ ಮಾಡಿಕೊಳ್ಳಬೇಕು. ಏಕೆಂದರೆ, ಸ್ಪಷ್ಟವಾದ ವಿಷಯವನ್ನು ಆಯ್ದುಕೊಂಡು ಸಂಶೋಧನೆ ನಡೆಸಿದರೆ ಮಾತ್ರ ಉತ್ತಮ ಸುದ್ದಿ ನೀಡಲು ಸಾಧ್ಯ ಎಂದರು. 

ಸ್ನಾತಕೋತ್ತರ ವಿಭಾಗದ ಡೀನ್ ಡಾ.ವಿಜಯ ಸರಸ್ವತಿ ಬಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಂದು ವಿಷಯವನ್ನು ನೋಡುವ ದೃಷ್ಟಿಕೋನವೇ ನಿಜವಾದ ಸಂಶೋಧನೆ. ಅದರಲ್ಲೂ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಸಂಶೋಧನಾ ಪ್ರವೃತ್ತಿ ಅತ್ಯಂತ ಅಗತ್ಯ. ಎಲ್ಲಿ ಅಭ್ಯಾಸದ ಅಗತ್ಯ ಇದೆಯೋ, ಅಂತಹ ವಿಷಯಗಳನ್ನು ಗುರುತಿಸಿ, ಸಂಶೋಧನೆಗೆ ಒಳಪಡಿಸಬೇಕು. ನಾವು ನಡೆಸುವ ಪ್ರತಿಯೊಂದು ಸಂಶೋಧನೆಯೂ ಸಮಾಜಕ್ಕೆ ಉಪಯುಕ್ತವಾದ ಕೊಡುಗೆಯಾಗಬೇಕು ಎಂದರು.

ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿ ದೀಕ್ಷಾ ಜೆ ರೈ ಸ್ವಾಗತಿಸಿದರು. ಪ್ರಸಾದಿನಿ ಕೆ ತಿಂಗಳಾಡಿ ವಂದಿಸಿದರು. ಧನ್ಯಶ್ರೀ ನಿರೂಪಿಸಿದರು.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.