Today Gold Price: ಇಂದು ಚಿನ್ನದ ಬೆಲೆ ಏರಿಕೆ

Today Gold Price: ಚಿನಿವಾರ ಪೇಟೆಯಲ್ಲಿ ಇಂದು (ಸೋಮವಾರ) ಚಿನ್ನದ ದರ ಏರಿಕೆಯಾಗಿದೆ. ಆದಾಗ್ಯೂ ಬೆಳ್ಳಿ ಬೆಲೆಯೂ ಯಾವುದೇ ರೀತಿಯಲ್ಲಿ ಬದಲಾಗದೆ ಸ್ಥಿರವಾಗಿದೆ.

Aug 24, 2026 - 10:52
Today Gold Price: ಇಂದು ಚಿನ್ನದ ಬೆಲೆ ಏರಿಕೆ

ಬೆಂಗಳೂರು: ಶ್ರಾವಣ ಮಾಸದಲ್ಲಿ ಶುಭ ಕಾರ್ಯಗಳು ಗರಿಷ್ಠ ಸಂಖ್ಯೆಯಲ್ಲಿ ನಡೆಯಲ್ಲಿದ್ದು, ಆಭರಣದ ಬೆಲೆಯು ಏರಿಕೆಯಾಗಿದೆ. 

ಚಿನಿವಾರ ಪೇಟೆಯಲ್ಲಿ ಇಂದು (ಸೋಮವಾರ) ಚಿನ್ನದ ದರ ಹೆಚ್ಚಾಗಿದೆ. ಆದಾಗ್ಯೂ ಬೆಳ್ಳಿ ಬೆಲೆಯೂ ಯಾವುದೇ ರೀತಿಯಲ್ಲಿ ಬದಲಾಗದೆ ಸ್ಥಿರವಾಗಿದೆ.

ರಾಜ್ಯದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.880 ಏರಿಕೆಯಾಗಿ ರೂ.1,63,970 ಆಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ರೂ.800 ಹೆಚ್ಚಳವಾಗಿ ರೂ.1,50,300ಕ್ಕೆ ಬಂದಿದೆ. 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.610 ಏರಿಕೆಯಾಗಿ ರೂ.1,22,930 ಆಗಿದೆ.

ಅದೇ ರೀತಿಯಲ್ಲಿ  1 ಕೆಜಿ ಬೆಳ್ಳಿಯೂ ರೂ.2,60,000 ಬೆಲೆಯಲ್ಲಿ ಮಾರಾಟವಾಗುತ್ತಿದೆ. 

ಷೇರುಪೇಟೆ: ಸಕಾರತ್ಮಕ ವಹಿವಾಟು:

ಭಾರತದ ಷೇರುಪೇಟೆ ಆರಂಭಿಕ ವಹಿವಾಟು ಸಕಾರತ್ಮಕವಾಗಿದೆ. ಸೆನ್ಸೆಕ್ಸ್ 206.06 ಅಂಕಗಳು ಅಥವಾ ಶೇಕಡ 0.27% ಏರಿಕೆಯಾಗಿ 77,746.89 ಅಂಕಗಳಿಗೆ ತಲುಪಿದೆ. ನಿಫ್ಟಿ 43.40 ಅಂಕಗಳು ಅಥವಾ ಶೇಕಡ 0.18% ಹೆಚ್ಚಳವಾಗಿ 24,295.40 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ.

ಇನ್ಫೋಸಿಸ್, ಹೆಚ್‌ಸಿಎಲ್ ಟೆಕ್ನಾಲಜೀಸ್, ಹೆಚ್‌ಡಿಎಫ್‌ಸಿ ಬ್ಯಾಂಕ್, ಟೆಕ್ ಮಹೀಂದ್ರಾ, ಟಿಸಿಎಸ್, ಇಂಡಿಗೋ, ಕೋಟಕ್ ಮಹೀಂದ್ರಾ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್, ಅಲ್ಟ್ರಾಟೆಕ್ ಸಿಮೆಂಟ್ ಹಾಗೂ ಎನ್‌ಟಿಪಿಸಿ ಷೇರುಗಳು ಲಾಭದಲ್ಲಿವೆ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.