ವಿವೇಕಾನಂದ ಕಾಲೇಜಿನಲ್ಲಿ 'ಫ್ರಮ್ ಪೇಜಸ್ ಟು ಪಿಕ್ಸೆಲ್ಸ್' ಕಾರ್ಯಕ್ರಮ

Vivekananda: College: ಇಲ್ಲಿನ ವಿವೇಕಾನಂದ ಮಹಾವಿದ್ಯಾಲದ ಇಂಗ್ಲಿಷ್ ವಿಭಾಗ, ಲಿಟರರಿ ಕ್ಲಬ್ ಮತ್ತು ಐಕ್ಯೂಎಸಿ ಘಟಕದ ಸಂಯುಕ್ತಾಶ್ರಯದಲ್ಲಿ 'ಫ್ರಮ್ ಪೇಜಸ್ ಟು ಪಿಕ್ಸೆಲ್ಸ್' ಕಾರ್ಯಕ್ರಮ ನಡೆಯಿತು.

Aug 21, 2026 - 13:23
Aug 21, 2026 - 13:39
ವಿವೇಕಾನಂದ ಕಾಲೇಜಿನಲ್ಲಿ 'ಫ್ರಮ್ ಪೇಜಸ್ ಟು ಪಿಕ್ಸೆಲ್ಸ್' ಕಾರ್ಯಕ್ರಮ

ಪುತ್ತೂರು: ಇಲ್ಲಿನ ವಿವೇಕಾನಂದ ಮಹಾವಿದ್ಯಾಲದ ಇಂಗ್ಲಿಷ್ ವಿಭಾಗ, ಲಿಟರರಿ ಕ್ಲಬ್ ಮತ್ತು ಐಕ್ಯೂಎಸಿ ಘಟಕದ ಸಂಯುಕ್ತಾಶ್ರಯದಲ್ಲಿ 'ಫ್ರಮ್ ಪೇಜಸ್ ಟು ಪಿಕ್ಸೆಲ್ಸ್' ಕಾರ್ಯಕ್ರಮ ನಡೆಯಿತು. ಈ ವೇಳೆ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿ ಶ್ರೀಹರಿ ಶರ್ಮ ರಚಿಸಿದ ನೂತನ ಬ್ಲಾಗ್ ಲೋಕಾರ್ಪಣೆಗೊಳಿಸಲಾಯಿತು.
 
ಕಾಲೇಜಿನ ಪ್ರಾಂಶುಪಾಲ ಪ್ರೊ.ಶ್ರೀಕೃಷ್ಣ ಗಣರಾಜ್ ಭಟ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು. 'ಸಾಹಿತ್ಯವು ಇಷ್ಟು ದಿನ ಕೇವಲ ಪುಸ್ತಕಗಳಿಗಷ್ಟೇ ಸೀಮಿತವಾಗಿತ್ತು. ಆದರೆ, ಇಂಗ್ಲಿಷ್ ವಿಭಾಗದಿಂದ ರೂಪಿಸಿರುವ ಈ ನೂತನ ಡಿಜಿಟಲ್ ವೇದಿಕೆಯು  ವಿದ್ಯಾರ್ಥಿಗಳ ಸೃಜನಶೀಲತೆ ಹಾಗೂ ಬರವಣಿಗೆಯ ಕೌಶಲ್ಯವನ್ನು ಹೊರಹಾಕಲು ಸಿಕ್ಕಿರುವ ಸುವರ್ಣಾವಕಾಶ. ವಿದ್ಯಾರ್ಥಿಗಳು ಯಾವುದೇ ಹಿಂಜರಿಕೆಯಿಲ್ಲದೆ ತಮ್ಮ ಕಥೆ, ಕವನಗಳನ್ನು ಬರೆಯುವ ಮೂಲಕ ಈ ಬ್ಲಾಗ್‌ನ ಬೆಳವಣಿಗೆಗೆ ಕೈಜೋಡಿಸಬೇಕು' ಎಂದು ಹೇಳಿದರು.
 
ಆಂಗ್ಲ ವಿಭಾಗ ಮುಖ್ಯಸ್ಥ ಬಾಲಕೃಷ್ಣ ಹೆಚ್, ಲಿಟರರಿ ಕ್ಲಬ್‌ನ ಅಧ್ಯಕ್ಷೆ ಸುಮಶ್ರೀ.ಪಿ, ಸದಸ್ಯೆ ಶ್ರೀರಕ್ಷಾ, ವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
 
ವಿದ್ಯಾರ್ಥಿನಿ ಎಸ್.ಗೀತಿಕಾ ಸ್ವಾಗತಿಸಿದರು. ವಿದ್ಯಾಶ್ರೀ ವಂದಿಸಿದರು. ವಾಣಿಶ್ರೀ ಡಿ.ಆರ್ ನಿರೂಪಿಸಿದರು.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.