ದಿನ ಭವಿಷ್ಯ: ಇಂದು ಯಾವ ರಾಶಿಗೆ ಶುಭ?

Daily Horoscope: ಇಂದು (ಭಾನುವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.

Aug 16, 2026 - 09:15
ದಿನ ಭವಿಷ್ಯ: ಇಂದು ಯಾವ ರಾಶಿಗೆ ಶುಭ?

ಮೇಷ:

ಉದ್ಯೋಗಕ್ಕಿಂದು ಪೂರ್ಣ ವಿರಾಮ.. ಯಶಸ್ಸಿಗೆ ತಡೆಯೊಡ್ಡಲು ಕೆಲವರ ಯತ್ನ ವಿಫಲ. ಹೊಸ ಯತ್ನಗಳಲ್ಲಿ ವಿಜಯದ ಸೂಚನೆ. ಮಹಿಳಾ ಉದ್ಯಮಿಗಳಿಗೆ ಯಶಸ್ಸು. ಸಚ್ಚಾರಿತ್ರ್ಯ ಮೆರೆದ ನಾಯಕರಿಗೆ ವಿಜಯ. ಗಣೇಶ ಕವಚ, ಆದಿತ್ಯ ಹೃದಯ, ಶನಿಮಹಾತ್ಮೆ ಓದಿ.

ವೃಷಭ:

ಈ ಭಾನುವಾರ ಅಸಾಮಾನ್ಯ ಫಲಪ್ರದ.. ಖಾದಿ ಉಡುಪು ಹಾಗೂ ವಸ್ತ್ರ ವ್ಯಾಪಾರಿಗಳಿಗೆ ಹೇರಳ ಲಾಭ. ಶ್ರಮಿಕ ವರ್ಗಕ್ಕೆ ಅನುಕೂಲವಾದ ವಾತಾವರಣ. ಕೇಟರಿಂಗ್ ವ್ಯವಹಾರಸ್ಥರಿಗೆ ಉತ್ತಮ ಲಾಭ. ವಿದ್ಯಾರ್ಥಿಗಳ ಅಧ್ಯಯನಾಸಕ್ತಿ ವೃದ್ಧಿ. ಗಣಪತಿ ಅಥರ್ವಶೀರ್ಷ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಗುರುಸ್ತೋತ್ರ ಓದಿ.

ಮಿಥುನ:

ದಂಪತಿಗಳ ನಡುವೆ ಮಾನಸಿಕ ಹೊಂದಾಣಿಕೆ.. ದೂರ ಪ್ರಯಾಣ ಮಾಡುವುದು ಬೇಡ. ಹಿತ ಶತ್ರುಗಳ ವಿಷಯದಲ್ಲಿ ಎಚ್ಚರ ಇರಲಿ.  ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ. ಲೇಖಕರಿಗೆ ಏಜಾಗ್ರತೆಯ ಕೊರತೆ. ಗಣೇಶ ಅಷ್ಟಕ, ದೇವೀಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.

ಕರ್ಕಾಟಕ:

ನಿಧಾನವಾದರೂ ಭದ್ರವಾದ ನಡೆಗಳು.. ಉದ್ಯೋಗಸ್ಥರ ಆರ್ಥಿಕ ತೊಂದರೆ ಪರಿಹಾರ. ಉದ್ಯಮಗಳಿಗೆ ಅನಾಯಾಸವಾಗಿ ನೆರವು. ಮಹಿಳಾ ಉದ್ಯಮಿಗಳಿಗೆ ಸಾಂಸ್ಥಿಕ ನೆರವು ಲಭ್ಯ. ಹಿರಿಯರಿಗೆ ಮನೋಬಲದಿಂದ ಆರೋಗ್ಯ ಪ್ರಾಪ್ತಿ. ಗಣೇಶ ದ್ವಾದಶನಾಮ ಸ್ತೋತ್ರ, ರಾಮರಕ್ಷಾ ಸ್ತೋತ್ರ, ಮಹಿಷಮರ್ದಿನಿ ಸ್ತೋತ್ರ ಓದಿ.

ಸಿಂಹ:

ನೋಡಿದೊಡನೆ ಎಲ್ಲರನ್ನೂ ನಂಬಬೇಡಿ.. ಹಲವು  ವ್ಯವಹಾರಗಳತ್ತ ಗಮನ ಕೊಡಲು ಒತ್ತಡ. ಉದ್ಯೋಗಸ್ಥರಿಗೆ ಘಟಕದ ನೇತೃತ್ವ ಲಭ್ಯ. ಸಿವಿಲ್ ಎಂಜಿನಿಯರರಿಗೆ ಅನುಕೂಲದ ದಿನ. ಕುಟುಂಬ ಕಲಹ ಮಾತುಕತೆಯಿಂದ ಮುಕ್ತಾಯ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.

ಕನ್ಯಾ:

ಹೊಸ ಕಾರ್ಯಕ್ಷೇತ್ರದಲ್ಲಿ ಎಲ್ಲರ ಸಹಕಾರ.. ಉನ್ನತ ವ್ಯಕ್ತಿಗಳಿಂದ ಪ್ರಶಂಸೆ. ಉದ್ಯೋಗ ಅರಸುವವರಿಗೆ ಯೋಗ್ಯ ಹುದ್ದೆಯ  ಭರವಸೆ. ದೂರದೂರಿಗೆ ಪ್ರಯಾಣ ಮುಂದಕ್ಕೆ. ಅಧ್ಯಾಪಕರ ಆತಂಕ ನಿವಾರಣೆ. ಗಣಪತಿ ಅಥರ್ವಶೀರ್ಷ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

ತುಲಾ:

ಕೆಲವು ಕ್ಷೇತ್ರಗಳವಿಗೆ ರಜಾದಿನವೂ ಕೆಲಸ.. ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಶುಭಸೂಚನೆ. ಲೇವಾದೇವಿ ವ್ಯವಹಾರ ಬೇಡ. ಸಂಸಾರದಲ್ಲಿ ಹುಳಿ ಹಿಂಡುವವರಿಗೆ ಯೋಗ್ಯ ಪಾಠ. ಹಿರಿಯರ ಆಸ್ತಿ ಜೋಪಾನಕ್ಕೆ ಕ್ರಮ. ಗಣೇಶ ದ್ವಾದಶನಾಮ ಸ್ತೋತ್ರ, ದಾರಿದ್ರ್ಯದಹನ ಶಿವಸ್ತೋತ್ರ , ವೆಂಕಟೇಶ್ವರ ಸ್ತೋತ್ರ ಓದಿ.

ವೃಶ್ಚಿಕ:

ವಿವಿಧ ಬಗೆಯ ವೃತ್ತಿಗಳವರಿಗೆ ಹಿತಾನುಭವ.. ಉದ್ಯೋಗಸ್ಥರಿಗೆ ವಿರಾಮದ ಆನಂದ. ಸರಕಾರಿ ಅಧಿಕಾರಿಗಳಿಗೆ ಪುಢಾರಿಗಳ ಕಾಟ. ಉನ್ನತ ರಾಜಕಾರಣಿಗಳಿಗೆ ಅಧಿಕಾರ ದಾಹ. ವಸ್ತ್ರ, ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಗಣೇಶ ಕವಚ, ಸುಬ್ರಹ್ಮಣ್ಯ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.

ಧನು:

ಕ್ರಿಯಾಶೀಲರಿಗೆ ರಜಾದಿನವೂ ವಿಶ್ರಾಂತಿ ಇಲ್ಲ.. ಉದ್ಯೋಗಸ್ಥಾನ ನವೀಕರಣ ಕಾಮಗಾರಿ. ಪರಿಸರದ ಸ್ವರೂಪ ಬದಲಾವಣೆಗೆ ಆದ್ಯತೆ. ಬಂಧುಗಳ ಮನೆಯಲ್ಲಿ ದೇವತಾ ಕಾರ್ಯ. ಹಿರಿಯರ ಆರೋಗ್ಯದ ಕುರಿತು ಕಾಳಜಿ. ಗಣೇಶ ಸ್ತೋತ್ರ,  ದತ್ತಪಂಜರ ಸ್ತೋತ್ರ, ರಾಜರಾಜೇಶ್ವರೀ ಅಷ್ಡಕ ಓದಿ.

ಮಕರ:

ಪ್ರಕೃತಿಯೊಂದಿಗೆ ಸಾಮರಸ್ಯ ಸಾಧಿಸುವ ಪ್ರಯತ್ನ.. ಉದ್ಯೋಗಸ್ಥರಿಗೆ ವಿಶ್ರಾಂತಿಯ ಆನಂದ. ಬಂಧುವರ್ಗದಲ್ಲಿ ವೈಷಮ್ಯ ನಿವಾರಣೆ. ಹಿರಿಯರ, ಮಕ್ಕಳ ಆರೋಗ್ಯ ಸುಧಾರಣೆ. ಮಕ್ಕಳನ್ನು ಸಾಕುಪ್ರಾಣಿಗಳಿಂದ ದೂರವಿಡಿ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಹನುಮಾನ್ ಚಾಲೀಸಾ ಓದಿ.

ಕುಂಭ: 

ಉದ್ಯೋಗಸ್ಥರಿಗೆ ನಿಶ್ಚಿಂತೆಯ ಅನುಭವ.. ಸರ್ಕಾರಿ ನೌಕರರಿಗೆ ರಜೆಯ ದಿನವೂ ಕಿರಿಕಿರಿ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಸಂಗೀತ, ನೃತ್ಯ ಕಲೆಗಳನ್ನು ಅಭ್ಯಾಸ ಮಾಡುವವರಿಗೆ ಸಂತೃಪ್ತಿಯ ಅನುಭವ. ಕೃಷಿಕರಿಗೆ ನೂತನ ಬೆಳೆಗಳಲ್ಲಿ ಆಸಕ್ತಿ. ಗಣೇಶ ಕವಚ,ಶಿವ ಕವಚ, ಶನಿಮಹಾತ್ಮೆ ಓದಿ.

ಮೀನ:

ರಜೆಯ ದಿನ ವಿರಾಮವಿಲ್ಲದಷ್ಟು ಚಟುವಟಿಕೆಗಳು.. ಹಲವು ಸೇವಾ ಕಾರ್ಯಗಳು. ಸ್ವಂತ ಉದ್ಯಮ ಹೊಸ ರೂಪದಲ್ಲಿ ಆರಂಭ. ದೇವತಾ ಸಾನ್ನಿಧ್ಯಕ್ಕೆ ಭೇಟಿ. ಮಕ್ಕಳ ಅಧ್ಯಯನಾಸಕ್ತಿ ವೃದ್ಧಿಗೆ ಕಡೆಗೆ ಪ್ರಯತ್ನ ಅವಶ್ಯ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.