ಪುತ್ತೂರು: ಡಿ.12 ಮತ್ತು 13 ರಂದು ಗಿರಿಜಾ ಕಲ್ಯಾಣೋತ್ಸವ: ಸಮಿತಿ ರಚನೆ
Girija Kalyana Utsava: ಡಿ.12 ಮತ್ತು 13 ರಂದು ಗಿರಿಜಾ ಕಲ್ಯಾಣೋತ್ಸವ ನಡೆಯಲಿದೆ. ಈ ಹಿನ್ನೆಲೆ ಸಮಿತಿಯನ್ನು ರಚನೆ ಮಾಡಲಾಗಿದೆ.
ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ, ಡಿ.12 ಮತ್ತು 13 ರಂದು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ದೇವರ ಮಾರುಗದ್ದೆಯಲ್ಲಿ 'ಗಿರಿಜಾ ಕಲ್ಯಾಣೋತ್ಸವ' ನಡೆಯಲಿದೆ. ಈ ಹಿನ್ನೆಲೆ, ಪೂರ್ವಭಾವಿ ಸಭೆ ನಡೆಯಿತು.
ಇಲ್ಲಿ ಉತ್ಸವದ ಸಿದ್ಧತೆ ಹಾಗೂ ವಿವಿಧ ಜವಾಬ್ದಾರಿಗಳ ಕುರಿತು ಚರ್ಚಿಸಿ, 'ಗಿರಿಜಾ ಕಲ್ಯಾಣೋತ್ಸವ'ದ ಸಮಿತಿಯನ್ನು ರಚಿಸಲಾಯಿತು.

ಸಮಿತಿಯ ಅಧ್ಯಕ್ಷರಾಗಿ ಡಾ.ಅಖಿಲೇಶ್ ಪಾಣಾಜೆ, ಸಂಚಾಲಕರಾಗಿ ಅರುಣ್ ಕುಮಾರ್ ಪುತ್ತಿಲ, ಪ್ರಧಾನ ಕಾರ್ಯದರ್ಶಿಯಾಗಿ ಅನಿಲ್ ತೆಂಕಿಲ, ಕಾರ್ಯಾಧ್ಯಕ್ಷರಾಗಿ ಅನಿಲ್ ಕುಮಾರ್ ಕಣ್ಣಾರ್ನೂಜಿ ಮತ್ತು ಕೋಶಾಧಿಕಾರಿಯಾಗಿ ಉದಯ ಕುಮಾರ್ ರೈ ಅವರನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಬಾಲಕೃಷ್ಣ ರೈ ಮೊಗರೋಡಿ, ಡಾ.ರಘು ಬೆಳ್ಳಿಪ್ಪಾಡಿ, ವಾಸು ಪೂಜಾರಿ ಗುಂಡ್ಯಡ್ಕ, ಸುಜೀರ್ ಗಣಪತಿ ನಾಯಕ್ ಹಾಗೂ ಮೋನಪ್ಪ ಪುರುಷ ಅವರನ್ನು ನೇಮಿಸಲಾಯಿತು.

ಗಿರಿಜಾ ಕಲ್ಯಾಣೋತ್ಸವವನ್ನು ವಿಜೃಂಭಣೆಯಿಂದ ನಡೆಸಲು ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಿದ್ದಾರೆ ಎಂದು ಸಭೆಯಲ್ಲಿ ತಿಳಿಸಲಾಯಿತು.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.