Sparsha Hospital: 'ಹೃದಯ ರಥ'ಕ್ಕೆ ಚಾಲನೆ ನೀಡಿದ ಸ್ಪರ್ಶ ಆಸ್ಪತ್ರೆ
Sparsha Hospital: ಬೆಂಗಳೂರಿನ ರಾಜರಾಜೇಶ್ವರಿ ನಗರದ ಸ್ಪರ್ಶ ಆಸ್ಪತ್ರೆ ವತಿಯಿಂದ, 'ಸ್ಪರ್ಶ ಹೃದಯ ರಥ-ಹಾರ್ಟ್ ಸ್ಕ್ರೀನಿಂಗ್ ಆನ್ ವೀಲ್ಸ್' ಎಂಬ 60 ದಿನಗಳ ಸಮುದಾಯ ಆರೋಗ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಬೆಂಗಳೂರು: ವಿಶ್ವ ಹೃದಯ ದಿನದ ಅಂಗವಾಗಿ, ಇಂದು ರಾಜರಾಜೇಶ್ವರಿ ನಗರದ ಸ್ಪರ್ಶ ಆಸ್ಪತ್ರೆ ವತಿಯಿಂದ, 'ಸ್ಪರ್ಶ ಹೃದಯ ರಥ-ಹಾರ್ಟ್ ಸ್ಕ್ರೀನಿಂಗ್ ಆನ್ ವೀಲ್ಸ್' ಎಂಬ 60 ದಿನಗಳ ಸಮುದಾಯ ಆರೋಗ್ಯ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಬಿಡದಿ, ರಾಮನಗರ ಮತ್ತು ಚನ್ನಪಟ್ಟಣ ಭಾಗದ ಜನರಿಗೆ, ಅವರ ಮನೆಬಾಗಿಲಲ್ಲೇ ಉಚಿತವಾಗಿ ಹೃದಯ ತಪಾಸಣೆ & ವೈದ್ಯಕೀಯ ಸಲಹೆ ಒದಗಿಸುವುದು ಈ ವಿನೂತನ ಅಭಿಯಾನದ ಪ್ರಮುಖ ಉದ್ದೇಶವಾಗಿದೆ

ಆರೋಗ್ಯ ಸಚಿವ ಯು.ಟಿ. ಖಾದರ್ ಅವರು, ಈ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಸ್ಪರ್ಶ ಆಸ್ಪತ್ರೆ ಸಮೂಹದ ಸಂಸ್ಥಾಪಕ, ಅಧ್ಯಕ್ಷ ಹಾಗೂ ಮುಖ್ಯ ಆರ್ಥೋಪೆಡಿಕ್ ಸರ್ಜನ್ ಡಾ.ಶರಣ್ ಶಿವರಾಜ್ ಪಾಟೀಲ್, ಇನ್‌ಫೆಂಟ್ರಿ ರಸ್ತೆ ಶಾಖೆಯ ವೈದ್ಯಕೀಯ ನಿರ್ದೇಶಕ & ಪ್ರಮುಖ ಹೃದ್ರೋಗ ತಜ್ಞ ಪ್ರೊ.ಡಾ.ರಂಜನ್ ಶೆಟ್ಟಿ, ಆರ್.ಆರ್.ನಗರ ಶಾಖೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಒಒ) ಡಾ.ಸಂದೀಪ್ ಆರ್.ಎಂ. ಸೇರಿದಂತೆ ಆಸ್ಪತ್ರೆಯ ಹಿರಿಯ ವೈದ್ಯರು ಮತ್ತು ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ಮುಂದಿನ 60 ದಿನಗಳ ಅವಧಿಗೆ 6,000ಕ್ಕೂ ಹೆಚ್ಚು ಜನರನ್ನು ತಪಾಸಣೆಗೊಳಪಡಿಸುವ ಬೃಹತ್ ಗುರಿಯನ್ನು ಈ ಆಸ್ಪತ್ರೆಯೂ ಹಾಕಿಕೊಂಡಿದೆ. ಇದರಲ್ಲಿ 3,000 ವಯಸ್ಕರು ಮತ್ತು 10 ವರ್ಷದೊಳಗಿನ 3,000 ಮಕ್ಕಳನ್ನು ತಪಾಸಣೆ ಮಾಡುವ ಉದ್ದೇಶವನ್ನು ಹೊಂದಿದೆ.
ಶಿಬಿರದಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರಿಗೆ ಇಸಿಜಿ, ಎಕೋಕಾರ್ಡಿಯೋಗ್ರಾಂ ತಪಾಸಣೆ ಒಳಗೊಂಡಂತೆ, ಪರಿಣತ ಹೃದ್ರೋಗ ತಜ್ಞರ ಸಲಹೆಯನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ ಎಂದು ಆಸ್ಪ್ರತೆ ಆಡಳಿತವು ತಿಳಿಸಿದೆ.