ಭಂಡಾರತ್ತಡ್ಕ - ಸಾರಕೊಟೇಲು: 5ನೇ ವರ್ಷದ ಅದ್ದೂರಿ ಮೊಸರು ಕುಡಿಕೆ ಉತ್ಸವ

Bhandaratthadka - Sarakotelu: : ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಗಣೇಶ ಚತುರ್ಥಿಯ ಅಂಗವಾಗಿ, ಇಲ್ಲಿನ 'ನಾಗಶಕ್ತಿ ಫ್ರೆಂಡ್ಸ್' ಬಳಗವು ತನ್ನ 5ನೇ ವರ್ಷದ ಅದ್ದೂರಿ ಮೊಸರು ಕುಡಿಕೆ ಉತ್ಸವವನ್ನು ಆಯೋಜಿಸಿದೆ.

Sep 9, 2026 - 11:04
Sep 9, 2026 - 12:06
ಭಂಡಾರತ್ತಡ್ಕ - ಸಾರಕೊಟೇಲು: 5ನೇ ವರ್ಷದ ಅದ್ದೂರಿ ಮೊಸರು ಕುಡಿಕೆ ಉತ್ಸವ

ಭಂಡಾರತ್ತಡ್ಕ - ಸಾರಕೊಟೇಲು: ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಗಣೇಶ ಚತುರ್ಥಿಯ ಅಂಗವಾಗಿ, ಇಲ್ಲಿನ 'ನಾಗಶಕ್ತಿ ಫ್ರೆಂಡ್ಸ್' ಬಳಗವು ಶ್ರೀ ನಾಗಬ್ರಹ್ಮ ರಕ್ತೇಶ್ವರಿ ಗುಳಿಗ ಹಾಗೂ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸನ್ನಿಧಿಯಲ್ಲಿ ತನ್ನ 5ನೇ ವರ್ಷದ ಅದ್ದೂರಿ ಮೊಸರು ಕುಡಿಕೆ ಉತ್ಸವ ಹಾಗೂ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿದೆ. ಸೆ.13 ಭಾನುವಾರದಂದು ಬೆಳಗ್ಗೆ 9 ಗಂಟೆಗೆ ಈ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ. 

ವಿವಿಧ ವಯೋಮಾನದವರಿಗೆ ಗ್ರಾಮೀಣ ಕ್ರೀಡಾಕೂಟ:

* ಅಂಗನವಾಡಿ ಮಕ್ಕಳು: ಕಾಳು ಹೆಕ್ಕುವುದು, ಬಕೆಟ್‌ಗೆ ಬಾಲ್ ಹಾಕುವುದು ಹಾಗೂ ಬಾಟಲಿಗೆ ನೀರು ತುಂಬಿಸುವುದು.

* ಪ್ರಾಥಮಿಕ ಶಾಲಾ ಮಕ್ಕಳು: 100 ಮೀ. ಓಟ, ಗಣೇಶನ ಚಿತ್ರ ಬಿಡಿಸುವುದು, ನಿಧಿ ಶೋಧನೆ, ಸಂಗೀತ ಕುರ್ಚಿ.

* ಮಹಿಳೆಯರು: ಹಗ್ಗಜಗ್ಗಾಟ, ಸಂಗೀತ ಕುರ್ಚಿ, ಲಿಂಬೆ ಚಮಚ ಓಟ ಮತ್ತು ಬಾಟಲಿಗೆ ನೀರು ತುಂಬಿಸುವುದು. 

* ಪುರುಷರು: ಅಡ್ಡ ಕಂಬವೇರುವುದು, ಗೋಣಿ ಚೀಲ ಓಟ, ನಿಧಾನ ಬೈಕ್ ರೇಸ್.

ವಿಶೇಷ ಆಕರ್ಷಣೆಯಾಗಿ ಪುರುಷರ ಕೆಸರುಗದ್ದೆ ಹಗ್ಗಜಗ್ಗಾಟವನ್ನುಆಯೋಜಿಸಲಾಗಿದ್ದು, ಅದು ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ. ಪ್ರಥಮ ಬಹುಮಾನವಾಗಿ ರೂ.3,333 ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನವಾಗಿ ರೂ.2,222 ಹಾಗೂ ಟ್ರೋಫಿ ನೀಡಲಾಗುತ್ತದೆ. 

ಪ್ರತಿ ತಂಡಕ್ಕೆ ರೂ.500 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಮೊದಲು ನೋಂದಾಯಿಸಿಕೊಂಡ 20 ತಂಡಗಳಿಗೆ ಮಾತ್ರ ಅವಕಾಶವಿದ್ದು, ಆಸಕ್ತರು ಸೆ.10 ರೊಳಗೆ ಕಡ್ಡಾಯವಾಗಿ ಹೆಸರು ನೋಂದಾಯಿಸಿಕೊಳ್ಳಬೇಕು.

ಅನ್ನಸಂತರ್ಪಣೆ & ಬಹುಮಾನ ವಿತರಣೆ:

ಇಲ್ಲಿಗೆ ಬರುವ ಸಮಸ್ತ ಭಕ್ತಾದಿಗಳಿಗೆ ಮತ್ತು ಕ್ರೀಡಾಪಟುಗಳಿಗೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ 5 ಗಂಟೆಗೆ ವಿಜೇತರಿಗೆ ಬಹುಮಾನವನ್ನು ವಿತರಿಸಲಾಗುತ್ತದೆ. 

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರು ಕೋರಿದ್ದಾರೆ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.