ದಿನ ಭವಿಷ್ಯ: ಇಂದು ಯಾರಿಗೆ ಶುಭ?
Daily Horoscope: ಇಂದು (ಗುರುವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.
ಮೇಷ:
ದೃಢಮನಸ್ಸು ಪ್ರಾಪ್ತಿಯಲ್ಲಿ ಯಶಸ್ವಿ.. ಉದ್ಯೋಗದಲ್ಲಿ ಸ್ಥಿರವಾದ ಪ್ರಗತಿ ಸಹಚರರ ನಡುವೆ ಸೌಹಾರ್ದ ವೃದ್ಧಿ. ಉದ್ಯಮಗಳ ಆರ್ಥಿಕ ಸ್ಥಿತಿ ಸುಧಾರಣೆ. ಉತ್ಪನ್ನಗಳ ಜನಪ್ರಿಯತೆ ಹೆಚ್ಚಳ. ಸಂಸಾರದಲ್ಲಿ ಎಲ್ಲರಿಗೂ ಆರೋಗ್ಯಭಾಗ್ಯ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.
ವೃಷಭ:
ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ ಮುಂದುವರಿಕೆ.. ಸ್ವಂತ ಉದ್ಯಮದಲ್ಲಿ ಲಾಭ ವೃದ್ಧಿ. ವ್ಯವಹಾರ ಕ್ಷೇತ್ರ ವಿಸ್ತರಣೆಗೆ ಸಿದ್ಧತೆ. ಲೇವಾದೇವಿ ವ್ಯವಹಾರದಲ್ಲಿ ಲಾಭ ದೂರ. ದಾಂಪತ್ಯ ಜೀವನದಲ್ಲಿ ಸೌಖ್ಯ. ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ಆದಿತ್ಯ ಹೃದಯ ಓದಿ.
ಮಿಥುನ:
ಉದ್ಯೋಗದಲ್ಲಿ ಮೇಲಿನವರ ಉತ್ತೇಜನ.. ಬರವಣಿಗೆಯಲ್ಲಿ ಮುನ್ನಡೆ. ಸ್ವಂತ ಉದ್ಯಮದ ಪ್ರಗತಿಯಲ್ಲಿ. ಧ್ಯಾನ, ಯೋಗ ಸಾಧನೆಯಲ್ಲಿ ಮುನ್ನಡೆ. ರಕ್ಷಣಾ ರಂಗದಲ್ಲಿ ಸೇವೆ ಸಲ್ಲಿಸುವವರಿಗೆ ವಿಶಿಷ್ಟ ಗೌರವ. ಗಣೇಶ ದ್ವಾದಶನಾಮ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.
ಕರ್ಕಾಟಕ:
ಉದ್ಯೋಗದಲ್ಲಿ ಹಿರಿತನಕ್ಕೆ ಗೌರವ.. ಕುಟುಂಬದಲ್ಲಿ ಸಾಮರಸ್ಯ ಸ್ಥಾಪನೆ. ಉದ್ಯಮದಲ್ಲಿ ತೃಪ್ತಿಕರ ಲಾಭ. ಕೃಷ್ಯುತ್ಪಾದನೆ ಮಾರಾಟದಿಂದ ಮಧ್ಯಮ ಲಾಭ. ಪರಿಸರ ರಕ್ಷಣೆಯ ಚಟುವಟಿಕೆಗಳಲ್ಲಿ ಆಸಕ್ತಿ. ಸಾಮಾಜಿಕರಿಂದ ಗೌರವ. ಹಳೆಯ ಗೆಳೆಯರೊಂದಿಗೆ ಮತ್ತೆ ಸಂಪರ್ಕ. ಆರೋಗ್ಯ ಉತ್ತಮ. ಗಣೇಶ ಸ್ತೋತ್ರ, ರಾಮ ಭುಜಂಗಪ್ರಯಾತ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
ಸಿಂಹ:
ಮುನ್ನುಗ್ಗುವ ಪ್ರಯತ್ನಕ್ಕೆ ಕೊಂಚ ವಿಘ್ನ.. ಉದ್ಯೋಗದಲ್ಲಿ ಉನ್ನತ ಸ್ಥಾನ ಹೊಂದುವ ಪ್ರಯತ್ನ. ಸ್ವಂತ ಉದ್ಯಮದ ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ಹತ್ತಿರದ ದೇವಾಲಯಕ್ಕೆ ಭೇಟಿ. ಉತ್ತರ ದಿಕ್ಕಿನಿಂದ ಶುಭ ಸಮಾಚಾರ. ಗಣೇಶ ಕವಚ, ನರಸಿಂಹ ಸ್ತೋತ್ರ, ನವಗ್ರಹ ಮಂಗಲಾಷ್ಡಕ ಓದಿ.
ಕನ್ಯಾ:
ನಿರೀಕ್ಷೆಗೆ ಮೀರಿದ ಯಶಸ್ಸು.. ಉದ್ಯೋಗದಲ್ಲಿ ಗೌರವ. ಅಕಸ್ಮಾತ್ ಧನಪ್ರಾಪ್ತಿಯ ಸಾಧ್ಯತೆ. ಸರ್ಕಾರಿ ಉದ್ಯೋಗಿಗಳಿಗೆ ದಿಢೀರ್ ವರ್ಗಾವಣೆ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆಗೆ ಪ್ರಥಮ ಪ್ರಾಶಸ್ತ್ಯ. ದೂರದೃಷ್ಟಿಯ ಯೋಜನೆಯಲ್ಲಿ ಹೂಡಿಕೆಯಿಂದ ಲಾಭ. ಗಣಪತಿ ಅಥರ್ವಶೀರ್ಷ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.
ತುಲಾ:
ದೇವತಾರಾಧನೆಯಿಂದ ಯಶಸ್ಸು ಪ್ರಾಪ್ತಿ.. ಉದ್ಯೋಗ ಸ್ಥಾನದಲ್ಲಿ ನಿಶ್ಚಿಂತೆಯಿಂದ ಕಾರ್ಯನಿರ್ವಹಣೆ. ಆಪ್ತರಿಂದ ಸಕಾಲಿಕ ಸಲಹೆ ಹಾಗೂ ಸಹಕಾರ. ವ್ಯವಹಾರದ ಕ್ಷೇತ್ರ ವಿಸ್ತರಣೆಗೆ ವಿಘ್ನ. ಶಕ್ತಿ ದೇವತೆಯ ಕ್ಷೇತ್ರದರ್ಶನದ ಯೋಗ. ಗಣೇಶ ಪಂಚರತ್ನ, ಸುಬ್ರಹ್ಮಣ್ಯ ಭುಜಂಗಸ್ತೋತ್ರ, ನವಗ್ರಹ ಸ್ತೋತ್ರ ಓದಿ.
ವೃಶ್ಚಿಕ:
ಗುರು, ದೇವತಾನುಗ್ರಹದಿಂದ ಯಶಸ್ಸು.. ಉದ್ಯೋಗದಲ್ಲಿ ಪದೋನ್ನತಿ ಅಥವಾ ವೇತನ ಏರಿಕೆ ನಿರೀಕ್ಷೆ. ಸರ್ಕಾರಿ ನೌಕರರಿಗೆ ಶುಭ ಸಮಾಚಾರ. ಸ್ವಂತ ಉದ್ಯಮ ವಿಸ್ತರಣೆಗೆ ಕಾರ್ಯ.ಯೋಜನೆ. ಉದ್ಯೋಗ ಅರಸುತ್ತಿರುವವರಿಗೆ ಅವಕಾಶಗಳು ಗೋಚರ. ಗಣೇಶ ಕವಚ, ಶಿವಕವಚ, ಹನುಮಾನ್ ಚಾಲೀಸಾ ಓದಿ.
ಧನು:
ಆರೋಗ್ಯ ಕ್ಷಿಪ್ರಗತಿಯಲ್ಲಿ ಸುಧಾರಣೆ.. ಹಳೆಯ ಒಡನಾಡಿಗಳ ಭೇಟಿಯಿಂದ ನವೋತ್ಸಾಹ. ಉದ್ಯೋಗದಲ್ಲಿ ಗೌರವದ ಸ್ಥಾನ. ಆದಾಯ ಹೆಚ್ಚಳದ ಯೋಜನೆಗಳು ಮುನ್ನಡೆ. ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ದೇವೀಸ್ತೋತ್ರ ಓದಿ.
ಮಕರ:
ಆತ್ಮಬಲ ವೃದ್ಧಿಗೆ ವಿಶೇಷ ಪ್ರಯತ್ನ.. ಕಿರಿಯ ಸಹೋದ್ಯೋಗಿಗಳಿಗೆ ಟಮಾರ್ಗದರ್ಶನ ಸ್ತ್ರೀಯರಿಗೆ ಪತಿಗೃಹದವರಿಂದ ಸಹಾಯ. ಉದ್ಯೋಗ ಪರಿವರ್ತನೆ ಪ್ರಯತ್ನಕ್ಕೆ ಹಂತಹಂತವಾಗಿ ಯಶಸ್ಸು. ಆಪ್ತರಿಂದ ಸಕಾಲಕ್ಕೆ ಸಹಾಯ. ಗಣೇಶ ಕವಚ, ಶಿವಪಂಚಾಕ್ಷರ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
ಕುಂಭ:
ಕುಟುಂಬದ ನಿರ್ವಹಣೆಯೊಂದಿಗೆ ಸಮಾಜದ ಕ್ಷೇಮ ಚಿಂತನೆ.. ಉದ್ಯೋಗ ಕ್ಷೇತ್ರದಲ್ಲಿ ಗೌರವದ ಸ್ಥಾನ ಮುಂದುವರಿಕೆ. ಸ್ವಂತ ಉದ್ಯಮದ ಹಿತ ಅಬಾಧಿತ. ಮುದ್ರಣ ಸಾಮಗ್ರಿ, ಸ್ಟೇಶನರಿ ವ್ಯಾಪಾರಿಗಳಿಗೆ ಉತ್ತಮ ಆದಾಯ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಉತ್ತಮ ಲಾಭ. ಸೇವಾ ಚಟುವಟಿಕೆಗಳಲ್ಲಿ ಪಾಲುಗೊಳ್ಳಲು ಮನೆಮಂದಿಯ ಸಂಪೂರ್ಣ ಸಹಕಾರ. ಗಣೇಶ ಅಷ್ಡಕ, ಸುಬ್ರಹ್ಮಣ್ಯ ಕವಚ, ಶನಿಮಹಾತ್ಮೆ ಓದಿ.
ಮೀನ:
ಶನಿ ಮಹಾತ್ಮನ ಕರುಣೆಯಿಂದ ಜೀವನ ಸುಗಮ.. ಉದ್ಯೋಗ ಸ್ಥಾನದಲ್ಲಿ ಅನುಕೂಲದ ಸ್ಥಿತಿ. ಸೇವಾರೂಪದ ಕಾರ್ಯಗಳನ್ನು ನಿರ್ವಹಿಸುವವರಿಗೆ ಅನುಕೂಲದ ವಾತಾವರಣ. ಸರ್ಕಾರಿ ಅಧಿಕಾರಿಗಳ ಹಾಗೂ ನೌಕರರ ಉತ್ತಮ ಸ್ಪಂದನೆಯಿಂದ ಕಾರ್ಯಗಳು ನಿರ್ವಿಘ್ನವಾಗಿ ನಡೆಯುತ್ತವೆ. ಸಂಸಾರದಲ್ಲಿ ಸಂಗಾತಿಯ ಪೂರ್ಣ ಸಹಕಾರ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.