Karnataka Tourism Awards-2026: ಕರ್ನಾಟಕ ಟೂರಿಸಂ ಅವಾರ್ಡ್ಸ್-2026ಕ್ಕೆ ಅರ್ಜಿ ಆಹ್ವಾನ

Karnataka Tourism Awards-2026: ಕರ್ನಾಟಕ ಟೂರಿಸಂ ಅವಾರ್ಡ್ಸ್-2026ಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

Sep 9, 2026 - 19:24
Karnataka Tourism Awards-2026: ಕರ್ನಾಟಕ ಟೂರಿಸಂ ಅವಾರ್ಡ್ಸ್-2026ಕ್ಕೆ ಅರ್ಜಿ ಆಹ್ವಾನ

ಬೆಂಗಳೂರು: ರಾಜ್ಯದ ಪ್ರವಾಸೋದ್ಯಮ ಇತಿಹಾಸದಲ್ಲಿ, ಇದೇ ಮೊದಲ ಬಾರಿಗೆ ಅತ್ಯುತ್ತಮ ಸಾಧನೆ ಮಾಡಿದ ಸಂಸ್ಥೆ, ಉದ್ಯಮಿ ಹಾಗೂ ವ್ಯಕ್ತಿಗಳನ್ನು ಗುರುತಿಸಿ ಗೌರವಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಪ್ರವಾಸೋದ್ಯಮ ಇಲಾಖೆಯು 'ಕರ್ನಾಟಕ ಟೂರಿಸಂ ಅವಾರ್ಡ್-2026' ಏರ್ಪಡಿಸಿದ್ದು, 5 ಪ್ರಮುಖ ವಿಭಾಗಗಳಲ್ಲಿ ಒಟ್ಟು 35 ಪ್ರಶಸ್ತಿಗಳನ್ನು ನೀಡಲು ತೀರ್ಮಾನಿಸಿದೆ. 

ಈ ಬಗ್ಗೆ ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್ (K.J.George) ಮಾಹಿತಿ ನೀಡಿದ್ದಾರೆ. 'ಕರ್ನಾಟಕದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸೇವೆ, ಗುಣಮಟ್ಟ, ನಾವೀನ್ಯತೆ, ಸುಸ್ಥಿರತೆ ಹಾಗೂ ಸುರಕ್ಷತೆಯನ್ನು ಉತ್ತೇಜಿಸುವುದು ಈ ಪ್ರಶಸ್ತಿಯ ಪ್ರಮುಖ ಉದ್ದೇಶವಾಗಿದೆ ಹೇಳಿದ್ದಾರೆ. 

5 ವಿಭಾಗ, 35 ಪ್ರಶಸ್ತಿಗಳು:

* ವಸತಿ & ಆತಿಥ್ಯ ವಿಭಾಗ: ಅತ್ಯುತ್ತಮ ಹೋಟೆಲ್, ರೆಸಾರ್ಟ್, ಬೂಟಿಕ್ ಸ್ಟೇ, ಹೆರಿಟೇಜ್ ಹೋಟೆಲ್, ರೆಸ್ಟೋರೆಂಟ್ ಸೇರಿದಂತೆ ಆತಿಥ್ಯ ಸೇವೆಗಳು.

* ಪ್ರವಾಸ ಸೇವಾ ವಿಭಾಗ: ಟೂರ್ ಆಪರೇಟರ್, ಟ್ರಾವೆಲ್ ಏಜೆಂಟ್, ಟೂರಿಸ್ಟ್ ಗೈಡ್, ಚಾಲಕ, ಪ್ರವಾಸೋದ್ಯಮ ಸಾರಥಿಗಳು ಹಾಗೂ ಸಾಹಸ ಪ್ರವಾಸೋದ್ಯಮ ಸಂಸ್ಥೆಗಳು:

* ಇವೆಂಟ್ ಮತ್ತು ಡೆಸ್ಟಿನೇಷನ್ ವಿಭಾಗ: ಹೆರಿಟೇಜ್ ತಾಣಗಳು, ವನ್ಯಜೀವಿ ತಾಣಗಳು & ಪ್ರವಾಸಿ ತಾಣಗಳ ಉತ್ತಮ ನಿರ್ವಹಣೆ.

* ಎಮರ್ಜಿಂಗ್ ಹಾಗೂ ನಿಚ್ ವಿಭಾಗ: ಸುಸ್ಥಿರ ಪ್ರವಾಸೋದ್ಯಮ, ಗ್ರಾಮೀಣ ಪ್ರವಾಸೋದ್ಯಮ, ತೋಟಗಾರಿಕೆ, ಸಾಹಸ, ವೈದ್ಯಕೀಯ ಮತ್ತು ಇಕೋ ಟೂರಿಸಂನಲ್ಲಿ ಹೊಸ ಪ್ರಯತ್ನಗಳು.

* ವಿಶೇಷ ಮಾನ್ಯತೆ ವಿಭಾಗ: ಜೀವಮಾನ ಸಾಧನೆ ಮತ್ತು ಪ್ರವಾಸೋದ್ಯಮಕ್ಕೆ ನೀಡಿದ ವಿಶೇಷ ಕೊಡುಗೆಗೆ ಗೌರವ.

ನಾಮನಿರ್ದೇಶನಕ್ಕೆ ಸೆ.17ರ ರಾತ್ರಿ 11.59 ರವರೆಗೆ ಅವಕಾಶವಿದೆ. ಆಸಕ್ತರು https://karnatakatourismawards.com ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಪ್ರಶಸ್ತಿ ಪ್ರಧಾನ ಸಮಾರಂಭ ಸೆ.27 ವಿಶ್ವ ಪ್ರವಾಸೋದ್ಯಮ ದಿನದಂದು ಬೆಂಗಳೂರಿನಲ್ಲಿ ಜರುಗಲಿದೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.