Karnataka Congress: ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಬದಲಾವಣೆ: ದಕ್ಷಿಣ ಕನ್ನಡಕ್ಕೆ ಪದ್ಮರಾಜ್ ಪೂಜಾರಿ.. ಎಲ್ಲಿಗೆ ಯಾರು?
Karnataka Congress District President Appointed: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ರಾಜ್ಯದ ವಿವಿಧ ಜಿಲ್ಲೆಗಳಿಗೆ ನೂತನ ಜಿಲ್ಲಾಧ್ಯಕ್ಷರನ್ನು ನೇಮಿಸಿದೆ.
ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ), ರಾಜ್ಯದ ವಿವಿಧ ಜಿಲ್ಲೆಗಳಿಗೆ ನೂತನ ಜಿಲ್ಲಾಧ್ಯಕ್ಷರನ್ನು ನೇಮಿಸಿದೆ. ದಕ್ಷಿಣ ಕನ್ನಡಕ್ಕೆ ಪದ್ಮರಾಜ್ ಆರ್ ಪೂಜಾರಿ, ಉಡುಪಿಗೆ ಕಿಶನ್ ಕುಮಾರ್ ಹೆಗ್ಡೆ ಹಾಗೂ ಉತ್ತರ ಕನ್ನಡಕ್ಕೆ ಗಜಾನನ ತಿಮ್ಮ ನಾಯ್ಕ ಅವರನ್ನು ನೇಮಕ ಮಾಡಲಾಗಿದೆ.
ಬಾಗಲಕೋಟೆಗೆ ದಯಾನಂದ ಎಸ್ ಪಾಟೀಲ್, ಬೆಂಗಳೂರು ಉತ್ತರಕ್ಕೆ ಅಬ್ದುಲ್ ವಜೀದ್, ಬೆಂಗಳೂರು ದಕ್ಷಿಣಕ್ಕೆ ಒ.ಮಂಜುನಾಥ್, ಬೆಂಗಳೂರು ಪೂರ್ವಕ್ಕೆ ಡಿ.ಕೆ.ಮೋಹನ್ ಬಾಬು, ಬೆಂಗಳೂರು ಪಶ್ಚಿಮಕ್ಕೆ ಹನುಮಂತರಾಯಪ್ಪ, ಬೆಂಗಳೂರು ಸೆಂಟ್ರಲ್‌ಗೆ ಜೆ.ಶರವಣನ್, ಬೆಂಗಳೂರು ಗ್ರಾಮಾಂತರಕ್ಕೆ ಸಿ.ಪ್ರಸನ್ನ ಕುಮಾರ್, ಚಿಕ್ಕೋಡಿಗೆ ಲಕ್ಷ್ಮಣರಾವ್ ಚಿಂಗಳೆ, ಬೆಳಗಾವಿ ನಗರಕ್ಕೆ ಸಲಾವುದ್ದೀನ್ ಸಲೀಂ ಬಿ ಖಿಲೇದ್ ಮತ್ತು ಬೆಳಗಾವಿ ಗ್ರಾಮಾಂತರಕ್ಕೆ ಬಸವರಾಜ ಶೆಗಾವಿ ಅವರು ನೇಮಕಗೊಂಡಿದ್ದಾರೆ.
ಬಳ್ಳಾರಿ ನಗರಕ್ಕೆ ಅಲ್ಲಂ ಪ್ರಶಾಂತ್, ಬಳ್ಳಾರಿ ಗ್ರಾಮಾಂತರಕ್ಕೆ ಕೆ.ಮಲ್ಲಿಕಾರ್ಜುನ, ಬೀದರ್‌ಗೆ ಅಬ್ದುಲ್ ಮನ್ನಾನ್ ಸೇಠ್, ಚಾಮರಾಜನಗರಕ್ಕೆ ಜೆ.ಯೋಗೇಶ್, ಚಿಕ್ಕಮಗಳೂರಿಗೆ ಹೆಚ್.ಪಿ.ಮಂಜೇಗೌಡ, ದಾವಣಗೆರೆಗೆ ಇಬ್ರಾಹಿಂ ಖಲೀಲುಲ್ಲಾ, ಧಾರವಾಡ ಗ್ರಾಮಾಂತರಕ್ಕೆ ಚಂದ್ರಶೇಖರ ಜುಟ್ಟಲ್, ಗದಗಕ್ಕೆ ವಾಸಣ್ಣ ಕುರ್ಡಗಿ, ಕಲಬುರಗಿಗೆ ಡಾ.ಕಿರಣ್ ಎ ದೇಶಮುಖ್ ಹಾಗೂ ಹಾಸನಕ್ಕೆ ಶಶಿಧರ್ ಜಿ.ಬಿ ಅವರನ್ನು ನೇಮಿಸಲಾಗಿದೆ.
ಹಾವೇರಿಗೆ ಸಂಜೀವ್ ಕುಮಾರ್ ನೀರಲಗಿ, ಹುಬ್ಬಳ್ಳಿ-ಧಾರವಾಡ ನಗರಕ್ಕೆ ಸಪದಾನಂದ ವಿ ದಂಗನಾವರ, ಕೊಡಗಿಗೆ ಧರ್ಮಜ ಉತ್ತಪ್ಪ, ಕೋಲಾರಕ್ಕೆ ಎನ್.ನಾರಾಯಣಸ್ವಾಮಿ, ಕೊಪ್ಪಳಕ್ಕೆ ಮಲ್ಲಿಕಾರ್ಜುನ ನಾಗಪ್ಪ, ಮಂಡ್ಯಕ್ಕೆ ಕುಮಾರ್ ಕೊಪ್ಪ, ಮೈಸೂರು ನಗರಕ್ಕೆ ಆರ್.ಮೂರ್ತಿ, ಮೈಸೂರು ಗ್ರಾಮಾಂತರಕ್ಕೆ ಬೀರೀ ಹುಂಡಿ ಬಸವಣ್ಣ, ರಾಯಚೂರಿಗೆ ಕೆ. ಶಾಂತಪ್ಪ, ರಾಮನಗರಕ್ಕೆ ಸಿ.ಎನ್.ವೆಂಕಟೇಶ್, ಶಿವಮೊಗ್ಗಕ್ಕೆ ಹೆಚ್.ಸಿ.ಯೋಗೇಶ್ ಮತ್ತು ಯಾದಗಿರಿಗೆ ಬಸರೆಡ್ಡಿ ಎಂ. ಪಾಟೀಲ ಅವರನ್ನು ನೇಮಕ ಮಾಡಲಾಗಿದೆ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.