Bank Strike: ಇಂದು ದೇಶವ್ಯಾಪಿ ಬ್ಯಾಂಕ್ ಉದ್ಯೋಗಿಗಳ ಮುಷ್ಕರ.. ಯಾವ ಸೇವೆ ಸಿಗುತ್ತೆ?
Bank Strike: ಇಂದು ವಿವಿಧ ಬೇಡಿಕೆಗಳನ್ನು ಮುಂದಿಟ್ಟು, ಇಂದು 'ಬ್ಯಾಂಕ್ ನೌಕರರ ಒಕ್ಕೂಟಗಳು' ದೇಶವ್ಯಾಪಿ ಮುಷ್ಕರ ನಡೆಸುತ್ತಿವೆ.
ನವದೆಹಲಿ: ವಾರದಲ್ಲಿ 5 ದಿನ ಕೆಲಸ, ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಕ ಯೋಜನೆ ಜಾರಿ ಮತ್ತು ಪಿಂಚಣಿ ಸುಧಾರಣೆ ಸೇರಿದಂತೆ ನಾನಾ ಬೇಡಿಕೆಗಳನ್ನು ಮುಂದಿಟ್ಟು, ಇಂದು 'ಬ್ಯಾಂಕ್ ನೌಕರರ ಒಕ್ಕೂಟಗಳು' ದೇಶವ್ಯಾಪಿ ಮುಷ್ಕರ (Bank Strike) ನಡೆಸುತ್ತಿವೆ.
ಇದರಿಂದ ಎಲ್ಲೆಡೆ ಬ್ಯಾಂಕಿಂಗ್ ಸೇವೆಗಳು, ಅದರಲ್ಲೂ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಸೇವೆ ಸ್ಥಗಿತಗೊಳ್ಳಲಿದೆ. ನಂತರ, ಸೆ.11 ಅಂದರೆ ನಾಳೆ ಎರಡನೇ ಶನಿವಾರ ಹಾಗೂ ಭಾನುವಾರ ಸಾಮಾನ್ಯ ರಜೆಯಿದೆ. ಸೆ.14 ರಂದು ಗಣೇಶ ಚತುರ್ಥಿ (Ganesha Chaturthi) ನಿಮಿತ್ತ, ಹಲವು ರಾಜ್ಯಗಳಲ್ಲಿ ರಜೆ ಘೋಷಿಸಲಾಗಿದ್ದು, ಸತತ 4 ದಿನ ಬ್ಯಾಂಕ್ ಸೇವೆ ಇಲ್ಲದೆ, ಗ್ರಾಹಕರಿಗೆ ತೊಂದರೆಯಾಗಲಿದೆ.
ಬ್ಯಾಂಕ್ ಸೇವೆಗಳು ಮುಚ್ಚಿದ್ದರೂ, ಆನ್‌ಲೈನ್ ಸೇವೆಗಳು ಎಂದಿನಂತೆ ಮುಂದುವರಿಯಲಿವೆ. ಗ್ರಾಹಕರು ದಿನನಿತ್ಯದ ವಹಿವಾಟುಗಳಿಗಾಗಿ ಯುಪಿಐ (UPI), ಮೊಬೈಲ್ ಬ್ಯಾಂಕಿಂಗ್ ಹಾಗೂ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗಳನ್ನು ಬಳಕೆ ಮಾಡಿಕೊಳ್ಳಬಹುದು. ಎಟಿಎಂಗಳು ಕೂಡ ತೆರೆದಿರಲಿವೆ.
ಆದಾಗ್ಯೂ, ಶಾಖೆಗೆ ಭೇಟಿ ನೀಡುವ ಅಗತ್ಯವಿರುವ ಸೇವೆಗಳಾದ ಕೆವೈಸಿ (KYC) ಸಂಬಂಧಿತ ಕೆಲಸಗಳು, ದಾಖಲೆಗಳ ಸಲ್ಲಿಕೆ ಹಾಗೂ ಇತರೆ ಬ್ಯಾಂಕಿಂಗ್ ಸೇವೆಗಳು ಅಲಭ್ಯವಾಗಬಹುದು.
ಇನ್ನು, ಸೆ.28, 29 ಹಾಗೂ 30 ರಂದು ಕೂಡ ದೇಶವ್ಯಾಪಿ ಮುಷ್ಕರಕ್ಕೆ ಬ್ಯಾಂಕ್ ನೌಕರರ ಒಕ್ಕೂಟಗಳು ಕರೆ ನೀಡಿವೆ. ಬೇಡಿಕೆ ಈಡೇರದಿದ್ದರೆ, ಅಕ್ಟೋಬರ್ 26 ರಿಂದ ನಿರಂತರ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿಯೂ ಎಚ್ಚರಿಕೆ ನೀಡಿವೆ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.