Redmi: ರೆಡ್‌ಮಿ ನೋಟ್ 17 ಪ್ರೊ & ರೆಡ್‌ಮಿ ನೋಟ್ 17 ಪ್ರೊ ಮ್ಯಾಕ್ಸ್ ಸ್ಮಾರ್ಟ್‌ಫೋನ್ ಬಿಡುಗಡೆ.. ಬೆಲೆ ಎಷ್ಟು?

Redmi: ದೇಶೀಯ ಮಾರುಕಟ್ಟೆಯಲ್ಲಿಂದು ರೆಡ್‌ಮಿ ನೋಟ್ 17 ಪ್ರೊ ಹಾಗೂ ರೆಡ್‌ಮಿ ನೋಟ್ 17 ಪ್ರೊ ಮ್ಯಾಕ್ಸ್ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಗೊಂಡಿವೆ.

Sep 15, 2026 - 17:51
Sep 15, 2026 - 17:52
Redmi: ರೆಡ್‌ಮಿ ನೋಟ್ 17 ಪ್ರೊ & ರೆಡ್‌ಮಿ ನೋಟ್ 17 ಪ್ರೊ ಮ್ಯಾಕ್ಸ್ ಸ್ಮಾರ್ಟ್‌ಫೋನ್ ಬಿಡುಗಡೆ.. ಬೆಲೆ ಎಷ್ಟು?

ಬಹುನಿರೀಕ್ಷಿತ ರೆಡ್‌ಮಿ ನೋಟ್ 17 ಪ್ರೊ (Redmi Note 17 Pro) ಹಾಗೂ ರೆಡ್‌ಮಿ ನೋಟ್ 17 ಪ್ರೊ ಮ್ಯಾಕ್ಸ್ (Redmi Note 17 Pro Max) ಸ್ಮಾರ್ಟ್‌ಫೋನ್‌ಗಳು ಇಂದು ಅದ್ದೂರಿಯಾಗಿ ಬಿಡುಗಡೆಗೊಂಡಿವೆ. ಕ್ರಮವಾಗಿ ಸೆಪ್ಟೆಂಬರ್ 17 ಹಾಗೂ ಸೆಪ್ಟೆಂಬರ್ 23 ರಂದು ಮಾರಾಟವು ಶುರುವಾಗಲಿದ್ದು, 'ಅಮೆಜಾನ್'ನಲ್ಲಿ ಗ್ರಾಹಕರ ಖರೀದಿಗೆ ದೊರೆಯಲಿವೆ. 

ನೂತನ 'ರೆಡ್‌ಮಿ ನೋಟ್ 17 ಪ್ರೊ' 8GB RAM + 128GB, 8GB RAM + 256GB ಇಂಟರ್ನಲ್ ಸ್ಟೋರೇಜ್‌ನ್ನು ಪಡೆದಿದ್ದು, ರೂ.36,999 ಮತ್ತು ರೂ.39,999 ಬೆಲೆಯನ್ನು ಹೊಂದಿದೆ. 

ಹೊಸ 'ರೆಡ್‌ಮಿ ನೋಟ್ 17 ಪ್ರೊ ಮ್ಯಾಕ್ಸ್' 8GB RAM + 256GB, 12GB RAM + 256GB ಇಂಟರ್ನಲ್ ಸ್ಟೋರೇಜ್‌ನ್ನುಒಳಗೊಂಡಿದ್ದು, ರೂ.49,999 ಹಾಗೂ ರೂ.55,999 ದರವನು ಪಡೆದಿದೆ. 

'ರೆಡ್‌ಮಿ ನೋಟ್ 17 ಪ್ರೊ' ವಿಶೇಷತೆಗಳೇನು:

ಇದು 6.83-ಇಂಚಿನ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಆಕ್ಟಾ-ಕೋರ್ ಸ್ನಾಪ್‌ಡ್ರ್ಯಾಗನ್ 6ಎಸ್ ಜೆನ್ 4 SoC ಪ್ರೊಸೆಸರ್‌ನ್ನು ಹೊಂದಿದೆ. ಹಿಂಭಾಗ 50-ಮೆಗಾಪಿಕ್ಸೆಲ್ ಹಾಗೂ ಮುಂಭಾಗ 16-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಪಡೆದಿದೆ. 9,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು, 67W ವೈರ್ಡ್ ಫಾಸ್ಟ್ ಚಾರ್ಜಿಂಗ್ ಆಯ್ಕೆಯನ್ನು ಬೆಂಬಲಿಸಬಲ್ಲದು. ಕ್ಲೌಡ್ ಬ್ಲೂ, ಪರ್ಪಲ್ ವೈಬ್ಸ್ ಮತ್ತು ಸ್ಟೆಲ್ತ್ ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ. 

'ರೆಡ್‌ಮಿ ನೋಟ್ 17 ಪ್ರೊ ಮ್ಯಾಕ್ಸ್' ಹೇಗಿದೆ:

ಈ ಫೋನ್ ಸಹ 6.83-ಇಂಚಿನ ಡಿಸ್‌ಪ್ಲೇಯನ್ನು ತನ್ನದಾಗಿಸಿಕೊಂಡಿದೆ. ಕ್ವಾಲ್ಕಾಮ್‌ನ 4ಎನ್ಎಂ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 6 ಜೆನ್ 5 ಚಿಪ್‌ಸೆಟ್‌ ಪ್ರೊಸೆಸರ್‌ನ್ನು ಪಡೆದಿದೆ. ಹಿಂಭಾಗ 50-ಮೆಗಾಪಿಕ್ಸೆಲ್ ಮತ್ತು 32-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. 9,000mAh ಬ್ಯಾಟರಿಯನ್ನು ಹೊಂದಿದ್ದು, 67W ವೈರ್ಡ್ ಫಾಸ್ಟ್ ಚಾರ್ಜಿಂಗ್ ಆಯ್ಕೆಯನ್ನು ಸಪೋರ್ಟ್ ಮಾಡುತ್ತದೆ. ಮ್ಯಾಕ್ಸ್ ಮಚ್ಚಾ ಗ್ರೀನ್, ಸೀಕ್ರೆಟ್ ಸನ್‌ರೈಸ್ ಹಾಗೂ ಸ್ಟೆಲ್ತ್ ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar TG ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.