ದಿನ ಭವಿಷ್ಯ: ಇಂದು ಯಾರಿಗೆ ಶುಭ?
Daily Horoscope: ಇಂದು (ಭಾನುವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.
ಮೇಷ:
ಉದ್ಯೋಗಕ್ಕಿಂದು ಪೂರ್ಣ ವಿರಾಮ.. ಅಡ್ಡದಾರಿ ಹಿಡಿದು ತಡೆಯೊಡ್ಡುವವರಿಗೆ ಸೋಲು. ಹೊಸ ಹೂಡಿಕೆಗಳಲ್ಲಿ ಲಾಭದ ಸೂಚನೆ. ಮಹಿಳಾ ಉದ್ಯಮಿಗಳಿಗೆ ಯಶಸ್ಸು. ಸಚ್ಚಾರಿತ್ರ್ಯ ಮೆರೆದ ನಾಯಕರಿಗೆ ವಿಜಯ. ಗಣೇಶ ಕವಚ, ಆದಿತ್ಯ ಹೃದಯ , ಶನಿಮಹಾತ್ಮೆ ಓದಿ.
ವೃಷಭ:
ಈ ಭಾನುವಾರ ವಿಶೇಷ ಫಲದಾಯಕ.. ಖಾದಿ ಉಡುಪು ಹಾಗೂ ವಸ್ತ್ರ ವ್ಯಾಪಾರಿಗಳಿಗೆ ಹೇರಳ ಲಾಭ. ಶ್ರಮಿಕ ವರ್ಗಕ್ಕೆ ಅನುಕೂಲವಾದ ವಾತಾವರಣ. ಕೇಟರಿಂಗ್ ವ್ಯವಹಾರಸ್ಥರಿಗೆ ಉತ್ತಮ ಲಾಭ. ವಿದ್ಯಾರ್ಥಿಗಳ ಅಧ್ಯಯನಾಸಕ್ತಿ ವೃದ್ಧಿ. ಗಣಪತಿ ಅಥರ್ವಶೀರ್ಷ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಗುರುಸ್ತೋತ್ರ ಓದಿ.
ಮಿಥುನ:
ದಂಪತಿಗಳ ನಡುವೆ ಮಾನಸಿಕ ಹೊಂದಾಣಿಕೆ.. ದೂರ ಪ್ರಯಾಣ ಮಾಡುವುದು ಬೇಡ. ಹಿತ ಶತ್ರುಗಳ ವಿಷಯದಲ್ಲಿ ಎಚ್ಚರ ಇರಲಿ. ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ. ಲೇಖಕರಿಗೆ ಆದಾಯ ಹೆಚ್ಚಳ. ಗಣೇಶ ಅಷ್ಟಕ, ದೇವೀಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
ಕರ್ಕಾಟಕ:
ಗಟ್ಟಿಯಾದ ದಿಟ್ಟ. ಹೆಜ್ಜೆಗಳು.. ಉದ್ಯೋಗಸ್ಥರ ಆರ್ಥಿಕ ತೊಂದರೆ ಪರಿಹಾರ. ಉದ್ಯಮಗಳಿಗೆ ಅನಾಯಾಸವಾಗಿ ನೆರವು. ಮಹಿಳಾ ಉದ್ಯಮಿಗಳಿಗೆ ಸಾಂಸ್ಥಿಕ ನೆರವು ಲಭ್ಯ. ಹಿರಿಯರಿಗೆ ಮನೋಬಲದಿಂದ ಆರೋಗ್ಯ ಪ್ರಾಪ್ತಿ.ಗಣೇಶ ದ್ವಾದಶನಾಮ ಸ್ತೋತ್ರ, ರಾಮರಕ್ಷಾ ಸ್ತೋತ್ರ, ಮಹಿಷಮರ್ದಿನಿ ಸ್ತೋತ್ರ ಓದಿ.
ಸಿಂಹ:
ವಂಚಕರ ಜಾಲ ಬಯಲಾಗುವ ಸಮಯ.. ಹಲವು ವ್ಯವಹಾರಗಳತ್ತ ಗಮನ ಕೊಡಲು ಒತ್ತಡ. ಉದ್ಯೋಗಸ್ಥರಿಗೆ ಘಟಕದ ನೇತೃತ್ವ ಲಭ್ಯ. ಸಿವಿಲ್ ಎಂಜಿನಿಯರರಿಗೆ ಅನುಕೂಲದ ದಿನ. ಕುಟುಂಬ ಕಲಹ ಮಾತುಕತೆಯಿಂದ ಮುಕ್ತಾಯ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ..
ಕನ್ಯಾ:
ರಜಾದಿನದ ಸದುಪಯೋಗ.. ಪ್ರತಿಭೆ ಹಾಗೂ ಕಾರ್ಯನಿಷ್ಠೆಗೆ ಉನ್ನತರ ಮೆಚ್ಚುಗೆ. ಉದ್ಯೋಗ ಅರಸುವವರಿಗೆ ಯೋಗ್ಯ ಹುದ್ದೆಯ ಭರವಸೆ. ದೂರದೂರಿಗೆ ಪ್ರಯಾಣ ಮುಂದಕ್ಕೆ. ಅಧ್ಯಾಪಕರ ಆತಂಕ ನಿವಾರಣೆ. ಗಣಪತಿ ಅಥರ್ವಶೀರ್ಷ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
ತುಲಾ:
ಕುಟುಂಬದ ಏಕತೆಗೆ ಸಮಾಲೋಚನೆ.. ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಶುಭಸೂಚನೆ. ಖರೀದಿ-ಮಾರಾಟದಲ್ಲಿ ಲಾಭ ಸಂಸಾರದಲ್ಲಿ ಒಡಕು ಸೃಷ್ಟಿಸುವವರಿಗೆ ಸೋಲು. ಹಿರಿಯರ ಆಸ್ತಿ ಜೋಪಾನಕ್ಕೆ ಕ್ರಮ. ಗಣೇಶ ದ್ವಾದಶನಾಮ ಸ್ತೋತ್ರ, ದಾರಿದ್ರ್ಯದಹನ ಶಿವಸ್ತೋತ್ರ, ವೆಂಕಟೇಶ್ವರ ಸ್ತೋತ್ರ ಓದಿ.
ವೃಶ್ಚಿಕ:
ವಿವಿಧ ಬಗೆಯ ವೃತ್ತಿಗಳವರಿಗೆ ಹಿತಾನುಭವ.. ಉದ್ಯೋಗಸ್ಥರಿಗೆ ವಿರಾಮದ ಆನಂದ. ಸರ್ಕಾರಿ ಅಧಿಕಾರಿಗಳಿಗೆ ಪುಡಾರಿಗಳ ಕಾಟ. ಉನ್ನತ ರಾಜಕಾರಣಿಗಳಿಗೆ ಅಧಿಕಾರ ದಾಹ. ವಸ್ತ್ರ, ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಗಣೇಶ ಕವಚ, ಸುಬ್ರಹ್ಮಣ್ಯ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.
ಧನು:
ಪ್ರತಿಭೆ ಕೌಶಲ ಎರಡೂ ಉಳ್ಳವರಿಗೆ ಹಿನ್ನಡೆ ಇಲ್ಲ.. ಸಹೋದ್ಯೋಗಿಗಳ ಸಂತೋಷಕೂಟ. ಪರಿಸರದ ಸ್ವರೂಪ ಬದಲಾವಣೆಗೆ ಆದ್ಯತೆ. ಬಂಧುಗಳ ಮನೆಯಲ್ಲಿ ದೇವತಾ ಕಾರ್ಯ. ಹಿರಿಯರ ಆರೋಗ್ಯದ ಕುರಿತು ಕಾಳಜಿ. ಗಣೇಶ ಸ್ತೋತ್ರ, ದತ್ತಪಂಜರ ಸ್ತೋತ್ರ, ರಾಜರಾಜೇಶ್ವರೀ ಅಷ್ಡಕ ಓದಿ.
ಮಕರ:
ಪ್ರಕೃತಿಯೊಂದಿಗೆ ಸಾಮರಸ್ಯ ಸಾಧಿಸುವ ಪ್ರಯತ್ನ.. ಉದ್ಯೋಗಸ್ಥರಿಗೆ ಸಂಸಾರದ ಕಡೆಗೆ ಗಮನ ಕೊಡಲು ಸಮಯ. ಬಂಧುವರ್ಗದಲ್ಲಿ ವೈಷಮ್ಯ ನಿವಾರಣೆ. ಹಿರಿಯರ, ಮಕ್ಕಳ ಆರೋಗ್ಯ ಸುಧಾರಣೆ. ಮಕ್ಕಳನ್ನು ಸಾಕುಪ್ರಾಣಿಗಳಿಂದ ದೂರವಿಡಿ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಹನುಮಾನ್ ಚಾಲೀಸಾ ಓದಿ.
ಕುಂಭ.
ಉದ್ಯೋಗಸ್ಥರಿಗೆ ನಿಶ್ಚಿಂತೆಯ ಅನುಭವ.. ಸರ್ಕಾರಿ ನೌಕರರಿಗೆ ರಜೆಯ ದಿನವು ಕಿರಿಕಿರಿ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಸಂಗೀತ, ನೃತ್ಯ ಕಲೆಗಳನ್ನು ಅಭ್ಯಾಸ ಮಾಡುವವರಿಗೆ ಸಂತೃಪ್ತಿಯ ಅನುಭವ. ಕೃಷಿಕರಿಗೆ ನೂತನ ಬೆಳೆಗಳಲ್ಲಿ ಆಸಕ್ತಿ. ಗಣೇಶ ಕವಚ,ಶಿವ ಕವಚ, ಶನಿಮಹಾತ್ಮೆ ಓದಿ.
ಮೀನ:
ರಜೆಯ ದಿನ ಎಡೆಬಿಡದ ಚಟುವಟಿಕೆಗಳು.. ಸೇವಾ ರೂಪದ ಕಾರ್ಯಗಳು ಮುನ್ನಡೆ. ಸ್ವಂತ ಉದ್ಯಮ ಹೊಸ ರೂಪದಲ್ಲಿ ಆರಂಭ. ದೇವತಾ ಸಾನ್ನಿಧ್ಯಕ್ಕೆ ಭೇಟಿ. ಮಕ್ಕಳ ಅಧ್ಯಯನಾಸಕ್ತಿ ವೃದ್ಧಿಗೆ ಕಡೆಗೆ ಪ್ರಯತ್ನ ಅವಶ್ಯ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.