ದಿನ ಭವಿಷ್ಯ: ಇಂದು ಯಾವ ರಾಶಿಗೆ ಶುಭ ಫಲ?
Daily Horoscope: ಇಂದು (ಶನಿವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.
ಮೇಷ:
ಶನಿಮಹಾತ್ಮನ ಅನುಗ್ರಹದಿಂದ ಸತ್ಫಲ ಪ್ರಾಪ್ತಿ.. ಉದ್ಯೋಗದಲ್ಲಿ ಕ್ರಮಾಗತ ಮುನ್ನಡೆ. ಸಹಚರರ ನಡುವೆ ಸೌಹಾರ್ದ ವೃದ್ಧಿ. ಉದ್ಯಮಗಳ ಆರ್ಥಿಕ ಸ್ಥಿತಿ ಸುಧಾರಣೆ. ಉದರದ ಆರೋಗ್ಯ ಸುಧಾರಣೆ. ಸಂಸಾರದಲ್ಲಿ ನೆಲೆಗೊಂಡ ನೆಮ್ಮದಿ. ಗಣಪತಿ ಅಥರ್ವಶೀರ್ಷ, ಶಿವಕವಚ, ಶನಿಮಹಾತ್ಮೆ ಓದಿ.
ವೃಷಭ:
ಉದ್ಯೋಗ ಸ್ಥಾನದಲ್ಲಿ ಇಮ್ಮಡಿಸಿದ ಉತ್ಸಾಹ.. ಸ್ವಂತ ಉದ್ಯಮದಲ್ಲಿ ಲಾಭ ವೃದ್ಧಿ. ವ್ಯವಹಾರ ಕ್ಷೇತ್ರ ವಿಸ್ತರಣೆಗೆ ನೆರವು ಲಭ್ಯ. ಹವಾಮಾನದ ಪ್ರಭಾವಕ್ಕೆ ಒಗ್ಗಿಕೊಳ್ಳುವ ಪ್ರಯತ್ನ. ದಾಂಪತ್ಯ ಜೀವನದಲ್ಲಿ ಸೌಖ್ಯ. ಗಣೇಶ ಕವಚ, ಸುಬ್ರಹ್ಮಣ್ಯ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
ಮಿಥುನ:
ವೃತ್ತಿಜೀವನದಲ್ಲಿ ವಿಶೇಷ ಸ್ಥಾನಮಾನ.. ಹೊಸ ವಿದ್ಯೆ ಕರತಲಾಮಲಕ. ಸ್ವಂತ ಉದ್ಯಮದ ಹಿನ್ನಡೆ ನಿವಾರಣೆ. ಧ್ಯಾನ, ಯೋಗ ಸಾಧನೆಯಲ್ಲಿ ಮುನ್ನಡೆ. ರಕ್ಷಣಾ ರಂಗದಲ್ಲಿ ಸೇವೆ ಸಲ್ಲಿಸುವವರಿಗೆ ವಿಶಿಷ್ಟ ಗೌರವ. ಗಣೇಶ ಅಷ್ಟಕ, ರಾಮರಕ್ಷಾ ಸ್ತೋತ್ರ, ಆದಿತ್ಯ ಹೃದಯ ಓದಿ.
ಕರ್ಕಾಟಕ:
ಹಿರಿತನ ಮತ್ತು ಸಾಧನೆಗೆ ವಿಶೇಷ. ಗೌರವ.ಉದ್ಯಮದಲ್ಲಿ ತೃಪ್ತಿಕರ ಲಾಭ. ಕೃಷ್ಯುತ್ಪಾದನೆ ಮಾರಾಟದಿಂದ ಮಧ್ಯಮ ಲಾಭ. ಪರಿಸರ ರಕ್ಷಣೆಯ ಚಟುವಟಿಕೆಗಳಲ್ಲಿ ಆಸಕ್ತಿ. ಸಮಾನ ಮನಸ್ಕರ ಒಡನಾಟದಿಂದ ಸಮಾಧಾನ. ಗಣೇಶ ಪಂಚರತ್ನ, ಹನುಮತ್ಕವಚ, ಲಕ್ಷ್ಮೀಸ್ತೋತ್ರ ಓದಿ.
ಸಿಂಹ:
ಕ್ಷಿಪ್ರಗತಿಯ ಕಾರ್ಯಸಾಧನೆಗೆ ಕೊಂಚ ವಿಘ್ನ.. ಉದ್ಯೋಗದಲ್ಲಿ ಉನ್ನತ ಸ್ಥಾನ ಹೊಂದುವ ಪ್ರಯತ್ನ. ಸ್ವಂತ ಉದ್ಯಮದ ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ಹತ್ತಿರದ ದೇವಾಲಯಕ್ಕೆ ಭೇಟಿ. ಪೂರ್ವ ದಿಕ್ಕಿನಿಂದ ಶುಭ ಸಮಾಚಾರ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಕನಕಧಾರಾ ಸ್ತೋತ್ರ ಓದಿ.
ಕನ್ಯಾ:
ಎಲ್ಲ ರಂಗಗಳಲ್ಲಿ ಜಯಭೇರಿ.. ಉದ್ಯೋಗದಲ್ಲಿ ಗೌರವ. ಅಕಸ್ಮಾತ್ ಧನಪ್ರಾಪ್ತಿಯ ಸಾಧ್ಯತೆ. ಸರ್ಕಾರಿ ಉದ್ಯೋಗಿಗಳಿಗೆ ದಿಢೀರ್ ವರ್ಗಾವಣೆ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆಗೆ ಪ್ರಥಮ ಪ್ರಾಶಸ್ತ್ಯ. ದೂರದೃಷ್ಟಿಯ ಯೋಜನೆಯಲ್ಲಿ ಹೂಡಿಕೆಯಿಂದ ಲಾಭ. ಸಂಕಷ್ಟನಾಶನ ಗಣೇಶ ಸ್ತೋತ್ರ, ಶಿವನಾಮಾವಲ್ಯಷ್ಟಕ, ದೇವೀಸ್ತೋತ್ರ ಓದಿ.
ತುಲಾ:
ದೇವತಾರಾಧನೆಯಿಂದ ಯಶಸ್ಸು ಪ್ರಾಪ್ತಿ.. ಉದ್ಯೋಗ ಸ್ಥಾನದಲ್ಲಿ ನಿಶ್ಚಿಂತೆಯಿಂದ ಕಾರ್ಯನಿರ್ವಹಣೆ. ಆಪ್ತರಿಂದ ಸಕಾಲಿಕ ಸಲಹೆ ಹಾಗೂ ಸಹಕಾರ. ವ್ಯವಹಾರದ ಕ್ಷೇತ್ರ ವಿಸ್ತರಣೆಗೆ ವಿಘ್ನ. ಗುರುಸ್ಮರಣೆಯಿಂದ ಆತ್ಮಸ್ಥೈರ್ಯ ಪ್ರಾಪ್ತಿ. ಗಣೇಶ ದ್ವಾದಶನಾಮ ಸ್ತೋತ್ರ, ವೆಂಕಟೇಶ್ವರ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.
ವೃಶ್ಚಿಕ:
ಗುರು, ದೇವತಾನುಗ್ರಹದಿಂದ ಯಶಸ್ಸು.. ಉದ್ಯೋಗದಲ್ಲಿ ವ್ಯಾವಹಾರಿಕ ಪ್ರೋತ್ಸಾಹ. ಸರ್ಕಾರಿ ನೌಕರರಿಗೆ ಶುಭ ಸಮಾಚಾರ. ಸ್ವಂತ ಉದ್ಯಮ ವಿಸ್ತರಣೆಗೆ ಕಾರ್ಯ ಯೋಜನೆ. ಉದ್ಯೋಗ ಅರಸುತ್ತಿರುವವರಿಗೆ ಅವಕಾಶಗಳು ಗೋಚರ. ಗಣೇಶ ಪಂಚರತ್ನ, ದತ್ತಪಂಜರ ಸ್ತೋತ್ರ, ಮಹಿಷಮರ್ದಿನಿ ಸ್ತೋತ್ರ ಓದಿ.
ಧನು:
ಆರೋಗ್ಯ ಕ್ಷಿಪ್ರಗತಿಯಲ್ಲಿ ಸುಧಾರಣೆ.. ಹಳೆಯ ಒಡನಾಡಿಗಳ ಭೇಟಿಯಿಂದ ನವೋತ್ಸಾಹ. ಉದ್ಯೋಗದಲ್ಲಿ ಗೌರವದ ಸ್ಥಾನ. ಆದಾಯ ಹೆಚ್ಚಳದ ಯೋಜನೆಗಳು ಮುನ್ನಡೆ. ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆ. ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
ಮಕರ:
ಆತ್ಮಬಲ ವೃದ್ಧಿಗೆ ವಿಶೇಷ ಪ್ರಯತ್ನ.ಕಿರಿಯ ಸಹೋದ್ಯೋಗಿಗಳಿಗೆ ಮಾರ್ಗದರ್ಶನ ಸ್ತ್ರೀಯರಿಗೆ ಪತಿಗೃಹದವರಿಂದ ಸಹಾಯ. ಉದ್ಯೋಗ ಪರಿವರ್ತನೆ ಪ್ರಯತ್ನಕ್ಕೆ ಹಂತಹಂತವಾಗಿ ಯಶಸ್ಸು. ಆಪ್ತರಿಂದ ಸಕಾಲಕ್ಕೆ ಸಹಾಯ.ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
ಕುಂಭ:
ಸಾಮಾಜಿಕ ಕಾರ್ಯಗಳಲ್ಲಿ ವಿಶೇಷ ಪಾಲುದಾರಿಕೆ.. ಉದ್ಯೋಗ ಕ್ಷೇತ್ರದಲ್ಲಿ ಗೌರವದ ಸ್ಥಾನ ಮುಂದುವರಿಕೆ. ಸ್ವಂತ ಉದ್ಯಮದ ಹಿತ ಅಬಾಧಿತ. ಮುದ್ರಣ ಸಾಮಗ್ರಿ, ಸ್ಟೇಶನರಿ ವ್ಯಾಪಾರಿಗಳಿಗೆ ಉತ್ತಮ ಆದಾಯ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಉತ್ತಮ ಲಾಭ. ಗಣೇಶ ಅಷ್ಟಕ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.
ಮೀನ:
ಜಗನ್ಮಾತೆಯ ದಯದಿಂದ ಜೀವನ ಸುಗಮ.. ಉದ್ಯೋಗ ಸ್ಥಾನದಲ್ಲಿ ಅನುಕೂಲದ ಸ್ಥಿತಿ. ಸೇವಾರೂಪದ ಕಾರ್ಯಗಳನ್ನು ನಿರ್ವಹಿಸುವವರಿಗೆ ಅನುಕೂಲದ ವಾತಾವರಣ. ಸರ್ಕಾರಿ ಅಧಿಕಾರಿಗಳ ಹಾಗೂ ನೌಕರರ ಉತ್ತಮ ಸ್ಪಂದನ. ಸಂಸಾರದಲ್ಲಿ ಸಂಗಾತಿಯ ಪೂರ್ಣ ಸಹಕಾರ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.