Ghamasaan: ಘಮಸಾನ್ ಚಿತ್ರ OTTಯಲ್ಲಿ ಬಿಡುಗಡೆ
Ghamasaan: ಬಾಲಿವುಡ್ ಆಕ್ಷನ್-ಕ್ರೈಮ್ ಥ್ರಿಲ್ಲರ್ ಸಿನಿಮಾ 'ಘಮಸಾನ್' ಒಟಿಟಿಯಲ್ಲಿ ಬಿಡುಗಡೆಗೊಂಡಿದೆ.
ಬಾಲಿವುಡ್ ಆಕ್ಷನ್-ಕ್ರೈಮ್ ಥ್ರಿಲ್ಲರ್ ಸಿನಿಮಾ 'ಘಮಸಾನ್' (Ghamasaan) ಒಟಿಟಿಯಲ್ಲಿ ಬಿಡುಗಡೆಗೊಂಡಿದೆ. ಇಂದಿನಿಂದ ಜೀ5 (ZEE5) ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
ಉತ್ತರ ಪ್ರದೇಶದ ಕುಖ್ಯಾತ ಡಕಾಯಿತನನ್ನು ಹಿಡಿಯಲು ಹೊರಡುವ ಪ್ರಾಮಾಣಿಕ ಪೊಲೀಸ್ ಅಧಿಕಾರಿಯ ಕಥೆಯನ್ನು ಆಧರಿಸಿದೆ. ತಿಗ್ಮಾಂಶು ಧುಲಿಯಾ ಆಕ್ಷನ್ ಕಟ್ ಹೇಳಿದ್ದಾರೆ. ಜ್ಯೋತಿ ದೇಶಪಾಂಡೆ, ಪಿಯೂಷ್ ಸಿಂಗ್, ಅಶ್ವಿನಿ ಚೌಧರಿ, ಅಭಯಾನಂದ್ ಸಿಂಗ್ ಹಾಗೂ ಸೌರಭ್ ಗುಪ್ತಾ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ದೇವ್ ಅಗರ್ವಾಲ್ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಅನುಜ್ ಗರ್ಗ್ ಮ್ಯಾಸಿಕ್ ನೀಡಿದ್ದು, ಸೌರಭ್ ಪ್ರಭುದೇಸಾಯಿ ಸಂಕಲ ಮಾಡಿದ್ದಾರೆ. ಅರ್ಷದ್ ವಾರ್ಸಿ, ಪ್ರತಿಕ್ ಗಾಂಧಿ, ಇಶಿತಾ ದತ್ತಾ ಮತ್ತು ರಾಜ್‌ಪಾಲ್ ಯಾದವ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.