Anagha Credit Co Operative Society: ದಶಮಾನೋತ್ಸವ ಸಂಭ್ರಮದಲ್ಲಿ ಅನಘ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ
Anagha Credit Co Operative Society: ಅನಘ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 2025–26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ನಾಳೆ (ಸೆ.13) ನಡೆಯಲಿದೆ.
ಬೆಂಗಳೂರು: ರಾಜರಾಜೇಶ್ವರಿ ನಗರದ ಅನಘ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (Anagha Credit Co Operative Society) ದಶಮಾನೋತ್ಸವದ ಸಂಭ್ರಮದಲ್ಲಿದೆ. 10 ವರ್ಷಗಳ ಅವಧಿಯಲ್ಲಿ ರೂ.50 ಕೋಟಿ ವಾರ್ಷಿಕ ವಹಿವಾಟು ದಾಖಲಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಅಡಿಕೆ ವೆಂಕಟೇಶುಲು 'ಡೇ2ಡೇ ನ್ಯೂಸ್'ಗೆ ತಿಳಿಸಿದ್ದಾರೆ.
ರೂ.1 ಕೋಟಿ ವಾರ್ಷಿಕ ವಹಿವಾಟಿನೊಂದಿಗೆ, 10 ವರ್ಷಗಳ ಹಿಂದೆ ಶುರುವಾದ ಸಂಸ್ಥೆ, ಇದೀಗ ರೂ.50 ಕೋಟಿ ವಾರ್ಷಿಕ ವಹಿವಾಟಿನ ಹಂತ ತಲುಪಿರುವುದು ಸಂತಸದ ಸಂಗತಿಯಾಗಿದೆ. ಸಣ್ಣ ವ್ಯಾಪಾರಸ್ಥರಿಗಾಗಿ ರೂಪಿಸಿರುವ 'ಅನಘ ಸರಳ ಸಾಲಯೋಜನೆ' ಫುಟ್‌ಪಾತ್ ವ್ಯಾಪಾರಿಗಳು ಸೇರಿದಂತೆ ಅತ್ಯಂತ ಕಿರು ವ್ಯಾಪಾರಿಗಳಿಗೆ ರೂ.25 ಸಾವಿರದಿಂದ ರೂ.1 ಲಕ್ಷದವರೆಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ. ಹೀಗಾಗಿ, ಈ ಯೋಜನೆಯೂ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.
ಸುಮಾರು 1,080 ಷೇರುದಾರರೊಂದಿಗೆ ಆರಂಭಗೊಂಡ ಸಂಸ್ಥೆಯು, ಇಂದು 1,500ಕ್ಕೂ ಹೆಚ್ಚು ಷೇರುದಾರರನ್ನು ಹೊಂದಿದೆ. ಅಲ್ಲದೆ, ಸಂಸ್ಥೆಯ ಎರಡನೇ ಶಾಖೆಯನ್ನು ಮಂಡ್ಯದಲ್ಲಿಯೂ ಆರಂಭಿಸಲಾಗಿದೆ ಎಂದಿದ್ದಾರೆ.
ಗೋಲ್ಡ್ ಲೋನ್, ವಾಹನ ಸಾಲ, ಮಾರ್ಟ್ಗೇಜ್ ಲೋನ್, ಬಿಸಿನೆಸ್ ಲೋನ್ ಮತ್ತು ಪರ್ಸನಲ್ ಲೋನ್ ಒಳಗೊಂಡಂತೆ ವಿವಿಧ ಸಾಲ ಸೌಲಭ್ಯಗಳನ್ನು ಗ್ರಾಹಕರಿಗೆ ನೀಡಲಾಗುತ್ತಿದೆ. ಹಿರಿಯ ನಾಗರಿಕರ ಡೆಪಾಸಿಟ್‌ಗೆ ಶೇ.10% ವಾರ್ಷಿಕ ಬಡ್ಡಿದರದ ಸೌಲಭ್ಯ ಕೊಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುವ ಬ್ಯಾಂಕಿಂಗ್ ತಂತ್ರಜ್ಞಾನವನ್ನು ಅಳವಡಿಸಿಕೊಂಡು, ಅತ್ಯುತ್ತಮ ಬ್ಯಾಂಕಿಂಗ್ ಸೇವೆಗಳನ್ನು ಗ್ರಾಹಕರಿಗೆ ಒದಗಿಸಲಾಗುತ್ತಿದೆ. ಮುಂದಿನ 2 ವರ್ಷಗಳಲ್ಲಿ ರೂ.100 ಕೋಟಿ ವಾರ್ಷಿಕ ವಹಿವಾಟು ಸಾಧಿಸುವ ಗುರಿಯನ್ನು ಸಂಸ್ಥೆಯು ಹೊಂದಿದೆ ಎಂದು ಹೇಳಿದ್ದಾರೆ.
ಸಂಸ್ಥೆಯ ಬೆಳವಣಿಗೆಗೆ 11 ಮಂದಿ ನಿರ್ದೇಶಕರ ಸಂಪೂರ್ಣ ಸಹಕಾರ, ಪಾರದರ್ಶಕ ಆಡಳಿತ ಮತ್ತು ಶಿಸ್ತಿನ ವ್ಯವಹಾರ ಪ್ರಮುಖ ಕಾರಣಗಳಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.
ಈ ವೇಳೆ ಸಂಸ್ಥೆಯ ಉಪಾಧ್ಯಕ್ಷ ಶ್ರೀನಾಥ್ ಬಾಬು ಹೆಚ್.ಅರ್, ನಿರ್ದೇಶಕರಾದ ಸಂಜಯ್ ಜೋಷಿ, ಮಹೇಶ್ ಎಸ್.ಎನ್, ಡಾ.ಪ್ರಫುಲ್ಲಾ ತುಮಾಟಿ, ಪಿ.ಬಿ.ಕಾರ್ಯಪ್ಪ, ವಿಮಲ್ ಮಾಲು, ಐ.ಜಿ.ಪಾಟೀಲ್, ಲತಾ ವಿ ಅಡಿಕೆ, ರಜನಿ ಎಸ್ ಜೋಷಿ, ರಾಧಿಕಾ ಶ್ರೀನಾಥ್ ಹಾಗೂ ಸ್ಮಿತಾ ಜಿ ಗಾಯಕ್ವಾಡ್ ಉಪಸ್ಥಿತರಿದ್ದರು.
ನಾಳೆ (ಸೆ.13) ವಾರ್ಷಿಕ ಮಹಾಸಭೆ:
ಅನಘ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 2025–26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ನಾಳೆ (ಸೆ.13) ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ರಾಜರಾಜೇಶ್ವರಿ ನಗರದ ಐಡಿಯಲ್ ಹೋಂ ಟೌನ್‌ಶಿಪ್‌ನ ವಾಸವಿ ಮಹಲ್‌ನಲ್ಲಿ ಈ ಮಹಾಸಭೆವನ್ನು ಆಯೋಜಿಸಲಾಗಿದೆ.
ಸಂಸ್ಥೆಯ ದಶಮಾನೋತ್ಸವದ ಸಂಭ್ರಮದ ಹಿನ್ನೆಲೆ, ಜರುಗುತ್ತಿರುವ ಈ ಮಹಾಸಭೆಯಲ್ಲಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಂಘದ ಅಧ್ಯಕ್ಷ ಅಡಿಕೆ ವೆಂಕಟೇಶುಲು ಮನವಿ ಮಾಡಿದ್ದಾರೆ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.