Today Gold Price: ಇಂದು ಚಿನ್ನ & ಬೆಳ್ಳಿ ದರ ಏರಿಕೆ

Today Gold Price: ಚಿನಿವಾರ ಪೇಟೆಯಲ್ಲಿ ಇಂದು (ಗುರುವಾರ), ಚಿನ್ನ ಹಾಗೂ ಬೆಳ್ಳಿ ಬೆಲೆಗಳು ಏರಿಕೆಯಾಗಿವೆ.

Sep 10, 2026 - 11:16
Today Gold Price: ಇಂದು ಚಿನ್ನ & ಬೆಳ್ಳಿ ದರ ಏರಿಕೆ

Today Gold Price: ಚಿನಿವಾರ ಪೇಟೆಯಲ್ಲಿ ಇಂದು (ಗುರುವಾರ), ಚಿನ್ನ ಹಾಗೂ ಬೆಳ್ಳಿ ಬೆಲೆಗಳು ಏರಿಕೆಯಾಗಿದ್ದು, ಹೊಸ ಆಭರಣ ಖರೀದಿಸುವವರ ಜೇಬಿಗೆ ಕತ್ತರಿ ಬಿದ್ದಿದೆ. 

ರಾಜ್ಯದಲ್ಲಿ (ಬೆಂಗಳೂರು) 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.1,200 ಏರಿಕೆಯಾಗಿ ರೂ.1,55,510 ಇದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ರೂ.1,100 ಹೆಚ್ಚಳವಾಗಿ ರೂ.1,42,550ಕ್ಕೆ ತಲುಪಿದೆ. 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.900 ಏರಿಕೆಯಾಗಿ ರೂ.1,16,630 ಆಗಿದೆ. 

ಅದೇ ರೀತಿಯಲ್ಲಿ 1 ಕೆಜಿ ಬೆಳ್ಳಿ ರೂ.5,000 ಹೆಚ್ಚಳವಾಗಿ ರೂ.2,55,000 ಬೆಲೆಯಲ್ಲಿ ಮಾರಾಟವಾಗುತ್ತಿದೆ.

ಷೇರುಪೇಟೆ: ನಕಾರತ್ಮಕ ವಹಿವಾಟು

ಭಾರತದ ಷೇರುಪೇಟೆ ಆರಂಭಿಕ ವಹಿವಾಟು ಕುಸಿತವಾಗಿದೆ. ಬಿಎಸ್‌ಇ ಸೆನ್ಸೆಕ್ಸ್ 21.69 ಅಂಕಗಳು ಕುಸಿತವಾಗಿ 75,216.22 ಅಂಕಗಳಿಗೆ ತಲುಪಿದೆ. ಆದಾಗ್ಯೂ ನಿಫ್ಟಿ 15.10 ಅಂಕಗಳು ಏರಿಕೆಯಾಗಿ 23,446.60 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ.  

ಎನ್‌ಟಿಪಿಸಿ, ಅದಾನಿ ಪೋರ್ಟ್ಸ್, ಟೆಕ್ ಮಹೀಂದ್ರಾ, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ಎಲ್&ಟಿ ಷೇರುಗಳು ಲಾಭದಲ್ಲಿವೆ. ಐಸಿಐಸಿಐ ಬ್ಯಾಂಕ್, ಟಿಸಿಎಸ್, ಐಟಿಸಿ, ಕೋಟಕ್ ಬ್ಯಾಂಕ್ ಹಾಗೂ ಸನ್ ಫಾರ್ಮಾ ಷೇರುಗಳು ನಷ್ಟದಲ್ಲಿವೆ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.