Ambika College: ಅಂಬಿಕಾ ಪದವಿ-ಪೂರ್ವ ವಿದ್ಯಾಲಯದಲ್ಲಿ ಶಿಕ್ಷಕರ ದಿನ ಆಚರಣೆ

Ambika College: ಅಂಬಿಕಾ ಪದವಿ-ಪೂರ್ವ ವಿದ್ಯಾಲಯದಲ್ಲಿ ಈಚೆಗೆ, ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

Sep 12, 2026 - 17:02
Ambika College: ಅಂಬಿಕಾ ಪದವಿ-ಪೂರ್ವ ವಿದ್ಯಾಲಯದಲ್ಲಿ ಶಿಕ್ಷಕರ ದಿನ ಆಚರಣೆ

ಪುತ್ತೂರು: ಭಾರತ ದೇಶದಲ್ಲಿ ಗುರು ಪರಂಪರೆಗೆ ವಿಶೇಷವಾದ ಸ್ಥಾನವಿದೆ. ಗುರುವಿನ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿದರೆ, ನರ ನಾರಾಯಣನಾಗಬಹುದು. ಮಾನವ ಮಾಧವನಾಗಬಹುದು. ಉತ್ತಮ ಸರ್ವೋತ್ತಮನಾಗಬಹುದು. ಅದ್ಭುತವಾಗಿದ್ದರೆ ಪರಮಾದ್ಭುತವಾಗಬಲ್ಲ. ಶಿಷ್ಯನೊಬ್ಬ ಗುರುವಿಗಿಂತ ಉನ್ನತ ಸಾಧನೆ ಮಾಡಿದಾಗ, ಆ ಗುರುವಿನ ಆನಂದಕ್ಕೆ ಪಾರವೇ ಇರುವುದಿಲ್ಲ ಎಂದು ವಾಗ್ಮಿ ಆದರ್ಶ ಗೋಖಲೆ ಹೇಳಿದರು. 

ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿ-ಪೂರ್ವ ವಿದ್ಯಾಲಯದಲ್ಲಿ ಈಚೆಗೆ, ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ, ಭಾಗವಹಿಸಿ ಮಾತನಾಡಿದರು. 

ಶಿಕ್ಷಕರ ದಿನಾಚರಣೆಯೆಂದರೆ, ಡಾ.ಸರ್ವಪಲ್ಲಿ ರಾಧಾಕೃಷ್ಣ ಅವರನ್ನು ನೆನಪಿಸುವ ದಿನ, ಜೊತೆಗೆ ಸಾವಿರಾರು ಶಿಕ್ಷಕರನ್ನು ಗೌರವಿಸುವ ದಿನವಾಗಿದೆ. ಶಿಕ್ಷಕರು ಸದಾ ಕಾಲ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುತ್ತಾರೆ. ಹಿಂದಿನಿಂದಲೂ ವಿದ್ಯಾರಣ್ಯ, ಸುದತ್ತ ಮುನಿ, ದಾದಾಜಿ ಕೊಂಡದೇವ, ಸಮರ್ಥ ರಾಮದಾಸ ಹೀಗೆ ಹಲವಾರು ಗುರುಗಳು ತಮ್ಮ ಶಿಷ್ಯರನ್ನು ಅತ್ಯುನ್ನತ ಶಿಖರಕ್ಕೆ ಏರಿಸಿದ್ದಾರೆ ಎಂದು ತಿಳಿಸಿದರು.

ಕಾಲೇಜಿನ ಶಿಕ್ಷಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವೇದಿಕೆಯಲ್ಲಿ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ, ಉಪ ಪ್ರಾಂಶುಪಾಲೆ ವಿನುತಾ ಎಂ ಸಾಲೆ ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು. 

ವಿದ್ಯಾರ್ಥಿನಿ ಅವನಿ ಪ್ರಾರ್ಥಿಸಿದರು. ದಕ್ಷ ಸ್ವಾಗತಿಸಿದರು. ವೈಷ್ಣವಿ ಜಿ ಪೈ ನಿರೂಪಿಸಿದರು. ರಿಧಿ ಆರ್ ಗೌಡ ವಂದಿಸಿದರು.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.