ವಿವೇಕಾನಂದ ಕಾಲೇಜು: ಎನ್‌ಸಿಸಿ ಕೆಡೆಟ್‌ಗಳ ಅಪ್ರತಿಮ ಸಾಧನೆ

Vivekananda College: ವಿವೇಕಾನಂದ ಕಾಲೇಜಿನ ಎನ್‌ಸಿಸಿ ಕೆಡೆಟ್‌ಗಳು ಅಪ್ರತಿಮ ಸಾಧನೆ ಮಾಡಿದ್ದಾರೆ.

Sep 7, 2026 - 18:36
ವಿವೇಕಾನಂದ ಕಾಲೇಜು: ಎನ್‌ಸಿಸಿ ಕೆಡೆಟ್‌ಗಳ ಅಪ್ರತಿಮ ಸಾಧನೆ

ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಎನ್‌ಸಿಸಿ ಕೆಡೆಟ್‌ಗಳು ಅಪ್ರತಿಮ ಸಾಧನೆ ಮಾಡಿದ್ದಾರೆ. 

ಎನ್‌ಸಿಸಿ ಘಟಕದ ತೃತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಅಕ್ಷತಾ.ಎ (ಮೋಹನ.ಎ ಹಾಗೂ ಶೇಷಮ್ಮ.ಎಂ ದಂಪತಿ ಪುತ್ರಿ), ನವದೆಹಲಿಯಲ್ಲಿ ನಡೆಯುತ್ತಿರುವ ಆಲ್ ಇಂಡಿಯಾ ತಲ್ ಸೈನಿಕ್ ಕ್ಯಾಂಪ್‌ಗೆ ಆಯ್ಕೆಯಾಗಿದ್ದಾರೆ. 

ಕಾಲೇಜಿನ ವಿದ್ಯಾರ್ಥಿಗಳಾದ ತಿಲಕ್ ಹೆಚ್.ವಿ (ಕೊಡಗು ಹೆಬ್ಬಾಲೆಯ ವಿಜಯ ಹೆಚ್.ಎಸ್ ಮತ್ತು ಕವಿತಾ ಹೆಚ್.ಕೆ ದಂಪತಿ ಪುತ್ರ), ಸಂದೇಶ್ (ಕೊಲ್ಯದ ತನಿಯಪ್ಪ ಗೌಡ ಹಾಗೂ ಲಕ್ಷ್ಮಿ ದಂಪತಿ ಪುತ್ರ) ಹಾಗೂ ರವಿಕಿರಣ್ ಎ (ಕಾಣಿಯೂರು ಪದ್ಮಯ್ಯ ಗೌಡ ಮತ್ತು ಆಶಾಲತ ದಂಪತಿ ಪುತ್ರ) ಭಾರತೀಯ ಸೇನೆಗೆ 'ಅಗ್ನಿವೀರ್' ಆಗಿ ನಿಯೋಜನೆಗೊಂಡಿದ್ದಾರೆ.

ಹಾಗೆಯೇ ವಿದ್ಯಾರ್ಥಿ ಅಕ್ಷಯ್, ಡೆಹ್ರಾಡೂನ್ 'ಇಂಡಿಯನ್ ಮಿಲಿಟರಿ ಅಕಾಡೆಮಿ'ಗೆ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ಇವರಿಗೆ ಕಾಲೇಜಿನ ಎನ್‌ಸಿಸಿ ಘಟಕದ ಮುಖ್ಯಸ್ಥ ಲೆ.ಭಾಮಿ ಅತುಲ್ ಶೆಣೈ ತರೆಬೇತಿ ನೀಡಿದ್ದಾರೆ. ಈ ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಎನ್‌ಸಿಸಿ ಘಟಕ, ಐಕ್ಯೂಎಸಿ ಘಟಕ, ಉಪನ್ಯಾಸಕ, ಉಪನ್ಯಾಸಕೇತರ ವೃಂದದ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.