ಪುತ್ತೂರು ಪಿಲಿಗೊಬ್ಬು-2026: ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ
Puttur Piligobbu-2026: ಅ.17ರಂದು ನಡೆಯಲಿರುವ ಬಹುನಿರೀಕ್ಷಿತ 'ಪುತ್ತೂರು ಪಿಲಿಗೊಬ್ಬು-2026' ಸೀಸನ್-4 ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಇಲ್ಲಿನ ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇಗುಲದಲ್ಲಿ ಬಿಡುಗಡೆಗೊಳಿಸಲಾಯಿತು.
ಪುತ್ತೂರು: 'ವಿಜಯ ಸಾಮ್ರಾಟ್' ಇವರ ಆಶ್ರಯದಲ್ಲಿ, ಸಹಜ್ ರೈ ಬಳಜ್ಜ ಅವರ ನೇತೃತ್ವದಲ್ಲಿ ಅ.17ರಂದು ನಡೆಯಲಿರುವ ಬಹುನಿರೀಕ್ಷಿತ ಪುತ್ತೂರು ಪಿಲಿಗೊಬ್ಬು-2026 (Puttur Piligobbu-2026) ಸೀಸನ್-4 ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಇಲ್ಲಿನ ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇಗುಲದಲ್ಲಿ ಬಿಡುಗಡೆಗೊಳಿಸಲಾಯಿತು.
ದೇವರ ವಿಶೇಷ ಪೂಜೆಯೊಂದಿಗೆ ನೆರವೇರಿದ ಈ ಸರಳ ಸಮಾರಂಭದಲ್ಲಿ, ಧಾರ್ಮಿಕ ಮತ್ತು ದೈವಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಶಶಾಂಕ್ ನೆಲ್ಲಿತ್ತಾಯ, ಆಮಂತ್ರಣ ಪತ್ರಿಕೆಯನ್ನು ಅನಾವರಣಗೊಳಿಸಿದರು.

ಆ ಬಳಿಕ ಅವರು ಮಾತನಾಡಿ, 'ಸಹಜ್ ರೈ ಬಳಜ್ಜ' ಮುಂದಾಳತ್ವದಲ್ಲಿ ಕಳೆದ 3 ವರ್ಷಗಳಿಂದ ನಡೆಯುತ್ತಿರುವ ಪುತ್ತೂರು ಪಿಲಿಗೊಬ್ಬು, ಕರಾವಳಿಯ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಹುಲಿವೇಷ ವೈಭವವನ್ನು ಪುತ್ತೂರಿಗೆ ತಂದುಕೊಟ್ಟಿದೆ. ಈ ಕಾರ್ಯಕ್ರಮವು ಪುತ್ತೂರಿನ ಜನರಲ್ಲಿ ಒಂದು ಹಬ್ಬದ ವಾತಾವರಣವನ್ನು ನಿರ್ಮಿಸುತ್ತಾ ಬಂದಿದೆ' ಎಂದು ಹೇಳಿದರು.
ಈ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ, ವಿಜಯ ಸಾಮ್ರಾಟ್ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಸಹಜ್ ರೈ ಬಳಜ್ಜ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಎಸ್.ಬಿ.ಜಯರಾಮ ರೈ ಬಳ್ಳೆಜ್ಜ, ವಿಜಯ ಸಾಮ್ರಾಟ್‌ನ ಪ್ರಧಾನ ಕಾರ್ಯದರ್ಶಿ ಶರತ್ ಆಳ್ವ ಕೂರೇಲು, ಕಾರ್ಯಾಧ್ಯಕ್ಷ ರತನ್ ರೈ ಕುಂಬ್ರ, ಸಹ ಸಂಚಾಲಕ ರಾಜೇಶ್ ರೈ ಪರ್ಪುಂಜ, ಉಪಾಧ್ಯಕ್ಷ ಶಂಕರ್ ಭಟ್ ಈಶಾನ್ಯ, ಪವನ್ ಶೆಟ್ಟಿ ಕಂಬಳತ್ತಡ್ಡ, ದಿನೇಶ್ ವಾಸುಕಿ, ಕಿರಣ್ ರೈ ಬಲ್ಲಾಡು, ನಿತೇಶ್ ನೆಲಪ್ಪಾಲು, ಕಾರ್ಯದರ್ಶಿಗಳಾದ ಸುರೇಶ್ ಪಿದಪಟ್ಟ, ಧನುಷ್ ಹೊಸಮನೆ, ಆದರ್ಶ ಶೆಟ್ಟಿ ಉಪ್ಪಿನಂಗಡಿ, ಪ್ರಜ್ವಲ್ ಎಂ.ಎಸ್, ಜೊತೆಗೆ ಕಾರ್ಯದರ್ಶಿಗಳಾದ ಆನಂದ ಗೌಡ ತೆಂಕಿಲ, ಪ್ರೀತಮ್ ಶೆಟ್ಟಿ ಪೆರ್ನೆ, ಗೌತಮ್ ಗೌಡ, ಸಂಘಟನಾ ಕಾರ್ಯದರ್ಶಿ ಮಹೇಶ್ ಆಚಾರ್ಯ, ಕೋಶಾಧಿಕಾರಿಗಳಾದ ಅಶೋಕ್ ಅಡೂರು, ರಾಜೇಶ್ ಕೆ.ಗೌಡ, ಕಾರ್ಯಕಾರಿ ಸಮಿತಿ ಸದಸ್ಯರಾದ ಉಮೇಶ್ ಪೂಜಾರಿ ಮುರುವ, ಆದೇಶ್ ಶೆಟ್ಟಿ ಉಪ್ಪಿನಂಗಡಿ, ಹರೀಶ್ ರೈ ಜಾರತ್ತಾರು, ಚಂದ್ರಶೇಖರ ರೈ ಸಣಂಗಲ, ಪ್ರದೀಪ್ ರೈ ಕರ್ನೂರು, ನಿತಿನ್ ಬೊಡ್ಡೋಣಿ, ಸವಿನ್ ಗೌಡ, ಪ್ರದೀಪ್ ರೈ ಮಾಡಾವು, ಸಚಿನ್ ಶೆಟ್ಟಿ ಪಟ್ಟೆ, ಹರೀಶ್ ಕುಲಾಲ್ ಬೆದ್ರಾಳ, ಜಗದೀಶ್ ಜೆ.ಆರ್ ನಾಯಕ್, , ಭರತ್ ಚನಿಲ, ಶರತ್ ಗೌಡ ಮುದಲಾಜೆ, ಉಮೇಶ್ ಹಡೀಲು, ಕಿಶನ್ ರೈ, ಚರಣ್ ರೈ ಮಠ, ಲೋಹಿತ್ ಗೌಡ ಗುತ್ತು, ಭರತೇಶ್ ಪೂಜಾರಿ, ಅನೂಪ್ ಪೆರಿಗೇರಿ, ರಂಜಿತ್ ಗೌಡ ಪಟ್ಟೆ ಹಾಗೂ ಹಲವು ಮಂದಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.