ಪುತ್ತೂರು: ಮಾನವೀಯತೆ ಮೆರೆದ ಅಂಚೆ ಇಲಾಖೆ & ಪುತ್ತಿಲ ಪರಿವಾರ

Puttur: ಅಂಚೆ ಇಲಾಖೆ & ಪುತ್ತಿಲ ಪರಿವಾರದ ಜಂಟಿ ಆಶ್ರಯದಲ್ಲಿ, ಕಾವುವಿನಲ್ಲಿ ಇಂದು ನಡೆದ ಆಧಾರ್ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರವು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

Sep 6, 2026 - 21:23
ಪುತ್ತೂರು: ಮಾನವೀಯತೆ ಮೆರೆದ ಅಂಚೆ ಇಲಾಖೆ & ಪುತ್ತಿಲ ಪರಿವಾರ

ಪುತ್ತೂರು: ಅಂಚೆ ಇಲಾಖೆ & ಪುತ್ತಿಲ ಪರಿವಾರದ ಜಂಟಿ ಆಶ್ರಯದಲ್ಲಿ, ಕಾವುವಿನಲ್ಲಿ ಇಂದು ನಡೆದ ಆಧಾರ್ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರವು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. 

ವಯೋಸಹಜ ಕಾರಣಗಳಿಂದ ಶಿಬಿರದ ಸ್ಥಳಕ್ಕೆ ಆಗಮಿಸಲು ಸಾಧ್ಯವಾಗದ ಪೂವಂದೂರು ನಿವಾಸಿ ರಾಧಾ ಅವರ ಮನೆಗೆ (2 ಕಿ.ಮೀ) ತೆರಳಿದ ಅಂಚೆ ಇಲಾಖೆ ಸಿಬ್ಬಂದಿ ಹಾಗೂ ಪುತ್ತಿಲ ಪರಿವಾರದ ಮುಖಂಡರು, ಅವರ ಮನೆ ಬಾಗಿಲಲ್ಲೇ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಿಕೊಟ್ಟು ಮಾನವೀಯತೆ ಮೆರೆದರು. 

ಮನೆ ಬಾಗಿಲಿಗೆ ಈ ಸೇವೆಯನ್ನು ಒದಗಿಸಿದ್ದಕ್ಕೆ ಅವರ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದು, ಇಲಾಖೆ ಮತ್ತು ಸಂಘಟಕರ ಕಾಳಜಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. 

ಈ ವೇಳೆ ಅಂಚೆ ಕಚೇರಿಯ ಅಧಿಕಾರಿಗಳಾದ ಶೇಷಪ್ಪ ಗೌಡ, ಪ್ರಜ್ವಲ್ ಸಿ.ವಿ ಹಾಗೂ ಪುತ್ತಿಲ ಪರಿವಾರದ ಮುಖಂಡರಾದ ಹರೀಶ್ ಕುಂಜಾತ್ತಾಯ, ರವಿಪ್ರಸಾದ್ ರೈ, ಸುನಿಲ್ ಬೋರ್ಕರ್, ಶ್ರೇಯಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶಿಬಿರದ ಯಶಸ್ಸಿಗೂ ಸಹಕರಿಸಿದರು.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.