ಪಟ್ಟೆ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳು: ವಿನಾಯಕ ಚೌತಿ ಹಬ್ಬದ ಪ್ರಯುಕ್ತ ಯಕ್ಷಗಾನ ತಾಳಮದ್ದಳೆ
Vinayaka Chavithi Festival: ಪಟ್ಟೆಯ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ಸಭಾಭವನದಲ್ಲಿ ವಿನಾಯಕ ಚೌತಿ ಹಿನ್ನೆಲೆ, ಈಚೆಗೆ 'ಮಹಾಗಣಪತಿ ಹೋಮ' ಹಾಗೂ 'ಅತಿಕಾಯ ಕಾಳಗ' ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಿತು.
ಪುತ್ತೂರು (ಪಟ್ಟೆ ಬಡಗನ್ನೂರು): ವಿನಾಯಕ ಚೌತಿ ಹಬ್ಬದ ಹಿನ್ನೆಲೆ, ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ಸಭಾಭವನದಲ್ಲಿ ಈಚೆಗೆ 'ಮಹಾಗಣಪತಿ ಹೋಮ' ಹಾಗೂ 'ಅತಿಕಾಯ ಕಾಳಗ' ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ, ಭಾಗವತರಾಗಿ ರಚನಾ ಚಿದ್ಗಲ್, ಚೆಂಡೆ ಮದ್ದಳೆ - ಚಕ್ರತಾಳದಲ್ಲಿ ಲಕ್ಷ್ಮೀಶ ಶಗ್ರಿತ್ತಾಯ, 10ನೇ ತರಗತಿಯ ಆದಿತ್ಯಕೃಷ್ಣ ದ್ವಾರಕಾ, 9ನೇ ತರಗತಿಯ ಸ್ವರೂಪ್ ಭಾಗವಹಿಸಿದ್ದರು.

ಮುಮ್ಮೇಳದಲ್ಲಿ ಅತಿಕಾಯನಾಗಿ ಗಣರಾಜ ಕುಂಬ್ಳೆ, ರಾವಣನಾಗಿ ವೆಂಕಟರಾಮ ಭಟ್ ಸುಳ್ಯ, ಲಕ್ಷ್ಮಣನಾಗಿ ಈಶ್ವರಪ್ರಸಾದ ಧರ್ಮಸ್ಥಳ, ರಾಮನಾಗಿ ಕೃಷ್ಣಮೂರ್ತಿ ಭಟ್ ಕೆಮ್ಮಾರ, ವಿಭೀಷಣನಾಗಿ ನವೀನಕೃಷ್ಣ ಎಸ್ ಉಪ್ಪಿನಂಗಡಿ ಪಾಲ್ಗೊಂಡಿದ್ದರು.
ಪಟ್ಟೆ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ, ನೆರೆದಿದ್ದ ಕಲಾವಿದರನ್ನು ಸ್ವಾಗತಿಸಿದರು. ಉಪಾಧ್ಯಕ್ಷ ಅಮೃತ ಕೃಷ್ಣ ಕಲಾವಿದರಿಗೆ ಶಾಲು ಹಾಕಿ ಸ್ವಾಗತಿಸಿದರು.
ಈ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ನಿರ್ದೇಶಕ ಅಶ್ವಿನಿ ಗೋಪಾಲಕೃಷ್ಣ ಭಟ್, ಜಿ.ಪರಮೇಶ್ವರ್ ಭಟ್, ವೆಂಕಟಕೃಷ್ಣ ಭಟ್ ಸಂಚಾಲಕ ವಿಘ್ನೇಶ್ ಹಿರಣ್ಯ ಹಾಗೂ ಊರಿನ ಕಲಾ ಪೋಷಕರು, ಕೃಷ್ಣ ವಿದ್ಯಾಸಂಸ್ಥೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ನಿರ್ದೇಶಕ ಗಣರಾಜ ಕುಂಬ್ಳೆ ಕಾರ್ಯಕ್ರಮವನ್ನು ನಿರೂಪಿಸಿದರು. ತಾಳಮದ್ದಳೆಯ ತರುವಾಯ ಮಧ್ಯಾಹ್ನ ಎಲ್ಲರು ಭೋಜನವನ್ನು ಸವಿದರು.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.