iQOO Z11 Lite: ಹೊಸ ಐಕ್ಯೂಒ ಜಡ್11 ಲೈಟ್ ಫೋನ್ ಸೇಲ್ ಶುರು!
iQOO Z11 Lite: ನೂತನ 'ಐಕ್ಯೂಒ ಜಡ್11 ಲೈಟ್' ಸ್ಮಾರ್ಟ್‌ಫೋನ್ ಮಾರಾಟವು ಜುಲೈ 30 ಗುರುವಾರದಿಂದ ಮಾರಾಟವು ಶುರುವಾಗಿದೆ. ಅಮೆಜಾನ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಮೂಲಕ ಗ್ರಾಹಕರ ಖರೀದಿಗೆ ಲಭ್ಯವಿದೆ.
ನೂತನ ಐಕ್ಯೂಒ ಜಡ್11 ಲೈಟ್ (iQOO Z11 Lite) ಸ್ಮಾರ್ಟ್‌ಫೋನ್ ಮಾರಾಟವು ಜುಲೈ 30 ಗುರುವಾರದಿಂದ ಮಾರಾಟವು ಶುರುವಾಗಿದೆ. ಅಮೆಜಾನ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಮೂಲಕ ಗ್ರಾಹಕರ ಖರೀದಿಗೆ ಲಭ್ಯವಿದೆ.
ಇದು 4GB + 128GB, 6GB + 128GB ಹಾಗೂ 6GB + 256GB ಇಂಟರ್ನಲ್ ಸ್ಟೋರೇಜ್‌ನ್ನು ಪಡೆದಿದೆ. ಕ್ರಮವಾಗಿ ರೂ.19,499, 21,499 ಮತ್ತು ರೂ.24,499 ದರವನ್ನು ಹೊಂದಿದೆ. 6,500mAh ಸಾಮರ್ಥ್ಯದ ಬ್ಯಾಟರಿಯನ್ನು ತನ್ನದಾಗಿಸಿಕೊಂಡಿದ್ದು, 44W ಫಾಸ್ಟ್ ಚಾರ್ಜಿಂಗ್ ಆಯ್ಕೆಯನ್ನು ಬೆಂಬಲಿಸುತ್ತದೆ.
ಈ ಫೋನ್ 6.74-ಇಂಚಿನ HD ಡಿಸ್‌ಪ್ಲೇ ಹೊಂದಿದೆ. 120Hz ರಿಫ್ರೆಶ್ ರೇಟ್ ಮತ್ತು 1200-ನಿಟ್ಸ್ ಪೀಕ್ ಬ್ರೈಟ್‌ನೆಸ್ ಪಡೆದಿದ್ದು, ಬಿಸಿಲಿನಲ್ಲೂ ಸ್ಪಷ್ಟವಾಗಿ ಗೋಚರಿಸುತ್ತದೆ. ಮೀಡಿಯಾಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್‌ನ್ನು ಒಳಗೊಂಡಿದೆ. ಸೋಲಾರ್ ಫ್ಲೇಮ್ & ಮಿಡ್‌ನೈಟ್ ಬ್ಲೂ ಬಣ್ಣಗಳೊಂದಿಗೂ ಸಿಗುತ್ತದೆ.
ಹೊಸ ಐಕ್ಯೂಒ ಜಡ್11 ಲೈಟ್' ಹಿಂಭಾಗ 50MP ಮುಖ್ಯ ಕ್ಯಾಮೆರಾವನ್ನು ಹೊಂದಿದೆ. ಆಂಡ್ರಾಯ್ಡ್ 16 ಸಾಫ್ಟ್‌ವೇರ್ ಇದ್ದು, ಕಾಲ್ ಕ್ವಾಲಿಟಿಗಾಗಿ 5G ನೆಟ್‌ವರ್ಕ್‌ನ್ನು ಸಪೋರ್ಟ್ ಮಾಡುತ್ತದೆ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.