ದಿನ ಭವಿಷ್ಯ: ಜುಲೈ 31, 2026.. ಈ ದಿನ ಯಾರಿಗೆ ಶುಭ?

Daily Horoscope: ಇಂದು (ಗುರುವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.

Jul 31, 2026 - 10:54
ದಿನ ಭವಿಷ್ಯ: ಜುಲೈ 31, 2026.. ಈ ದಿನ ಯಾರಿಗೆ ಶುಭ?

ಮೇಷ:

ಸಪ್ತಾಹ ಅಂತ್ಯದ ಮುನ್ನಾ ದಿನ ಪ್ರಗತಿಯ ವೇಗವರ್ಧನೆ. ಶನಿಯ ಪ್ರಭಾವ ಇದ್ದರೂ ದೈವಾನುಗ್ರಹ ಮಿಗಿಲು. ಉದ್ಯಮಗಳು ಸಮಾಧಾನದ ಸ್ಥಿತಿಯಲ್ಲಿ. ಕೆಲವರಿಗೆ ಹಠಾತ್ ಧನಲಾಭ. ಮಹಿಳೆಯರ  ಗೃಹೋದ್ಯಮ ಉತ್ತುಂಗ ಸ್ಥಿತಿಯತ್ತ..ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ಶನಿಮಹಾತ್ಮೆ ಓದಿ.

ವೃಷಭ:

ಚೆನ್ನಾಗಿ ಯೋಚಿಸಿ ಹೆಜ್ಜೆಯಿಡಿ.. ಉದ್ಯೋಗದಲ್ಲಿ ಯಥಾಸ್ಥಿತಿ.  ಕೃಷಿ ಕ್ಷೇತ್ರಕ್ಕೆ  ಹೆಚ್ಚು ಆಸಕ್ತರ  ಪ್ರವೇಶ. ಬಡವರಿಗೆ ಸರಕಾರಿ ಯೋಜನೆಗಳ ಸೌಲಭ್ಯ ಪ್ರಾಪ್ತಿ. ಗೃಹಿಣಿಯರಿಗೆ ವಿಶೇಷ ಸಮಾಧಾನ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.
 
ಮಿಥುನ:

ಯಾವುದೇ ಪರಿಸ್ಥಿತಿಯಲ್ಲಿ ಧೈರ್ಯ ಕಳೆದುಕೊಳ್ಳಬೇಡಿ.. ಉದ್ಯೋಗ ಸ್ಥಾನದಲ್ಲಿ ದಿಟ್ಟ ಹೆಜ್ಜೆಗಳು. ಉದ್ಯಮ ಅಭಿವೃದ್ಧಿಗೆ ಹರಿದು ಬಂದ ನೆರವು. ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ. ಮನೆಯಲ್ಲಿ  ಸಂತೋಷದ ವಾತಾವರಣ. ಸಂಕಷ್ಟನಾಶನ ಗಣೇಶ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ಆದಿತ್ಯ ಹೃದಯ ಓದಿ.

ಕರ್ಕಾಟಕ:

ನಡೆದು ಬಂದ ದಾರಿಯ  ಹಿನ್ನೋಟದಿಂದ ಸಮಾಧಾನ.. ಅಕಸ್ಮಾತ್ ಧನಾಗಮ ಯೋಗ. ಬಂಧುವರ್ಗದಿಂದ  ಶುಭವಾರ್ತೆ. ಕೃಷ್ಯುತ್ಪನ್ನ ಮಾರಾಟದಿಂದ ಉತ್ತಮ ಲಾಭ. ಕುಟುಂಬದಲ್ಲಿ ಪರಸ್ಪರ ಸ್ನೇಹ, ಸದ್ಭಾವನೆ ವೃದ್ಧಿ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಸ್ತೋತ್ರ, ಶನಿಸ್ತೋತ್ರ ಓದಿ.

ಸಿಂಹ: 

ಹೊಸ ಉತ್ಪಾದನಾ ಕ್ಷೇತ್ರಗಳ ಶೋಧ.. ಉದ್ಯೋಗ ಕ್ಷೇತ್ರದಲ್ಲಿ ಹಿರಿಯ ಸ್ಥಾನ..ವಿಸ್ತೃತ ಕಾರ್ಯಕ್ಷೇತ್ರದಲ್ಲಿ ಕ್ಷಿಪ್ರ  ಪ್ರಗತಿಯ ಅನುಭವ. ವಸ್ತ್ರೋದ್ಯಮಿಗಳಿಗೆ ನಿರೀಕ್ಷಿತ ಲಾಭ. ವಿದ್ಯಾರ್ಥಿಗಳಿಗೆ ಹಿಗ್ಗಿದ ಅಧ್ಯಯನೋತ್ಸಾಹ.ಗಣೇಶ ಕವಚ, ದತ್ತಪಂಜರ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
 
ಕನ್ಯಾ:

ಯಂತ್ರೋಪಕರಣ ವ್ಯಾಪಾರಿಗಳಿಗೆ ಲಾಭ. ಕುಶಲಕರ್ಮಿಗಳಿಗೆ ಯೋಗ್ಯ ಸ್ಥಾನದಲ್ಲಿ ಉದ್ಯೋಗ.ಮಕ್ಕಳ ಕಲಿಕೆ ಆಸಕ್ತಿ ವೃದ್ಧಿಗೆ ಅನುಕೂಲ ವಾತಾವರಣ.ದ್ವಿಚಕ್ರ ವಾಹನ ಚಾಲನೆಯಲ್ಲಿ ಎಚ್ಚರ. ಆದಾಯ ಗಳಿಕೆಯ ಅನ್ಯ ಮಾರ್ಗಗಳ ಶೋಧನೆ ಮುಂದುವರಿಕೆ.ಗಣೇಶ ಅಷ್ಟಕ, ವೇದಸಾರ ಶಿವಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

ತುಲಾ:

ಸಹಚರರ ಸಲಹೆಯ ಪ್ರಯೋಜನ. ದೇವತಾ ಸಾನ್ನಿಧ್ಯಕ್ಕೆ ಭೇಟಿಯಿಂದ ಮನಸ್ಸಿಗೆ ಸಮಾಧಾನ. ಕಾರ್ಯನಿಷ್ಠ ವ್ಯಕ್ತಿಗಳಿಗೆ ಗೌರವ.  ಮಕ್ಕಳಿಂದಾಗಿ ಪೋಷಕರಿಗೆ ಗೌರವ. ಸಣ್ಣ ಬಗೆಯ ಉದ್ಯಮ ಆರಂಭಿಸಲು ಸಂಕಲ್ಪ.. ಗಣೇಶ ದ್ವಾದಶನಾಮ ಸ್ತೋತ್ರ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವವಗ್ರಹ ಸ್ತೋತ್ರ ಓದಿ.

ವೃಶ್ಚಿಕ:

 ಉದ್ಯೋಗ ಸ್ಥಾನದಲ್ಲಿ ನೆಮ್ಮದಿ, ತೃಪ್ತಿ.. ಸರ್ಕಾರಿ ನೌಕರರಿಗೆ ಪುಢಾರಿಗಳ ಕಿರಿಕಿರಿ. ಸಹಕಾರಿ ಸಂಸ್ಥೆಗಳ ಸಮಸ್ಯೆ ನಿವಾರಣೆ. ಸಂಸಾರದಲ್ಲಿ ಹಿರಿಯರು, ಗೃಹಿಣಿಯರಿಗೆ ಆನಂದದ ಸನ್ನಿವೇಶ. ಆಧ್ಯಾತ್ಮಿಕ ವ್ಯಕ್ತಿಗಳಿಂದ ಮಾರ್ಗದರ್ಶನ.ಗಣೇಶ ಕವಚ, ಧಿವನಾಮಾವಲ್ಯಷ್ಡಕ, ಲಕ್ಷ್ಮೀಸ್ತೋತ್ರ ಓದಿ.

ಧನು: 

ಸಣ್ಣ ಸಣ್ಣ ಕಿರಿಕಿರಿಗಳು  ದೂರ.. ಸಣ್ಣ ಉದ್ಯಮ ಘಟಕದ ಉತ್ಪಾದನೆ ವೃದ್ಧಿ. ಖಾದಿ ಉಡುಪು ಮಾರಾಟಗಾರರಿಗೆ ಲಾಭ.. ಸ್ವಯಾರ್ಜಿತ ಆಸ್ತಿಯಲ್ಲಿ ಕೃಷಿ ಪ್ರಗತಿ. ಜೇನು, ಹೈನುಗಾರಿಕೆ ಕೈಗೊಳ್ಳಲು ಆಸಕ್ತಿ. ಗಣೇಶ ಪಂಚರತ್ನ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ರವಿಸ್ತೋತ್ರ ಓದಿ.

ಮಕರ: 

ವಾರ ಮುಗಿಯುವ ಮೊದಲೇ ಹೊಸ ಜವಾಬ್ದಾರಿಗಳು.. ಸ್ವಂತ ಉದ್ಯಮದ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆ. ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ವರಮಾನ ವೃದ್ಧಿ.  ದಂಪತಿಗಳ ನಡುವಿನ ವೈಮನಸ್ಯ ದೂರ.. ಹೊಸಬರ ಪರಿಚಯದಿಂದ ಲಾಭ. ಗಣಪತಿ ಅಥರ್ವಶೀರ್ಷ, ನರಸಿಂಹ ಕವಚ, ಮಹಿಷಮರ್ದಿನಿ ಸ್ತೋತ್ರ ಓದಿ.

ಕುಂಭ: 

ಸರಿಸಾಟಿಯಿಲ್ಲದ ಚುರುಕುಬುದ್ಧಿ ಪ್ರದರ್ಶನ.. ಉದ್ಯೋಗ ಸ್ಥಾನದಲ್ಲಿ ಹಲವರಿಗೆ ಮಾರ್ಗದರ್ಶನ. ಏಕಕಾಲಕ್ಕೆ ಹಲವು ಕರ್ತವ್ಯಗಳ ಒತ್ತಡ. ಆಪ್ತರಿಂದ ಸಕಾಲಿಕ ಸಹಾಯದ ಕೊಡುಗೆ. ಉದ್ಯಮದ ಗ್ರಾಹಕರಿಂದ ನಿರೀಕ್ಷೆ ಮೀರಿದ ಬೇಡಿಕೆಗಳು. ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ಶನಿಮಹಾತ್ಮೆ ಓದಿ.

ಮೀನ:

ಮಾಮೂಲಿನಂತೆ ಹಲವು ಕಾರ್ಯಗಳ ಒತ್ತಡ. ಒಂದಕ್ಕಿಂತ ಹೆಚ್ಚು ಕೆಲಸಗಳಿಗೆ ಗಮನ ಹರಿಸುವ ಅನಿವಾರ್ಯತೆ. ಸರ್ಕಾರಿ ನೌಕರರಿಗೆ ಸಮಾಧಾನ ತಂದ ಕೊಡುಗೆ.. ಕಾರ್ಯ ನಿರ್ವಹಣೆಗೆ ಸರ್ವಜನರ ಮೆಚ್ಚುಗೆ.ಕೃಷಿಕರಿಗೆ ಸಾಮಾನ್ಯ ಸಂತೃಪ್ತಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.