Anagha Credit Co Operative Society: ದಶಮಾನೋತ್ಸವ ಸಂಭ್ರಮದಲ್ಲಿ ಅನಘ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ.. ವಾರ್ಷಿಕ ಮಹಾಸಭೆ
Anagha Credit Co Operative Society: ಸೆ.13 ಭಾನುವಾರದಂದು 'ಅನಘ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ'ಯ ವಾರ್ಷಿಕ ಮಹಾಸಭೆ ನಡೆಯಿತು.
ಬೆಂಗಳೂರು: ಅನಘ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (Anagha Credit Co Operative Society), ದಶಮಾನೋತ್ಸವದ ಸಂಭ್ರಮದಲ್ಲಿದೆ. ಸೆ.13 ಭಾನುವಾರದಂದು ತನ್ನ 10 ವರ್ಷಗಳ ಯಶಸ್ವಿ ಪಯಣವನ್ನು ಹೆಮ್ಮೆಯಿಂದ ದಾಖಲಿಸಿದೆ. ಪ್ರತಿವರ್ಷದಂತೆ, ಈ ವರ್ಷವು ಸಂಸ್ಥೆಯ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಟೌನ್‌ಶಿಪ್‌ನ ವಾಸವಿ ಮಹಲ್‌ನಲ್ಲಿಆಯೋಜಿಸಲಾಗಿತ್ತು.
ಒಂದು ಸಹಕಾರಿ ಸಂಸ್ಥೆ, ತನ್ನದೇಯಾದ ಬ್ಯಾಂಕಿಂಗ್ ಸ್ವರೂಪವನ್ನು ಪಡೆದುಕೊಂಡು 10 ವರ್ಷಗಳ ಕಾಲ ನಿರಂತರವಾಗಿ ಬೆಳೆಯುವುದು ಸಣ್ಣ ಸಾಧನೆಯಲ್ಲ. ಸದಸ್ಯರು, ಷೇರುದಾರರು, ನಿರ್ದೇಶಕರ ಮಂಡಳಿ ಮತ್ತು ನಿಷ್ಠಾವಂತ ಸಿಬ್ಬಂದಿಗಳ ಸಹಕಾರದಿಂದ ಅನಘ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಇಂದು ವಿಶ್ವಾಸಾರ್ಹ ಸಂಸ್ಥೆಯಾಗಿ ಬೆಳೆದಿದೆ. ಪ್ರಸ್ತುತ ಸಂಸ್ಥೆ 1,500ಕ್ಕೂ ಹೆಚ್ಚು ಷೇರುದಾರರನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತರಣೆಯ ಗುರಿಯೊಂದಿಗೆ ಮುನ್ನಡೆಯುತ್ತಿದೆ.

ಹನ್ನೆರಡು ನಿರ್ದೇಶಕರನ್ನೊಳಗೊಂಡ ಸಂಸ್ಥೆಯ ಆಡಳಿತ ಮಂಡಳಿಯೇ ಅನಘದ ವಿಶೇಷತೆ. ವಿಭಿನ್ನ ಕ್ಷೇತ್ರಗಳಲ್ಲಿ ಅನುಭವ ಹೊಂದಿರುವ ನಿರ್ದೇಶಕರು ತಮ್ಮ ವೃತ್ತಿಪರ ಜ್ಞಾನ ಮತ್ತು ಉದ್ಯಮಶೀಲತೆಯನ್ನು ಸಂಸ್ಥೆಯ ಬೆಳವಣಿಗೆಗೆ ಬಳಸುತ್ತಿದ್ದಾರೆ.
ಸಂಸ್ಥೆಯ ಅಧ್ಯಕ್ಷ ಅಡಿಕೆ ವೆಂಕಟೇಶುಲು ನಗುಮುಖದ ನಾಯಕತ್ವದ ಮೂಲಕ ಎಲ್ಲರನ್ನು ಒಗ್ಗೂಡಿಸಿಕೊಂಡು, ಸಂಸ್ಥೆಯ ಸಾರಥ್ಯ ವಹಿಸಿದ್ದಾರೆ. ಸ್ವತಃ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಅವರು, ಹಣಕಾಸು ಹಾಗೂ ಲೆಕ್ಕಾಚಾರದಲ್ಲಿ ವಿಶೇಷ ಪರಿಣತಿ ಹೊಂದಿದ್ದು, ಸಂಸ್ಥೆಯ ಆಡಳಿತಕ್ಕೆ ವೃತ್ತಿಪರ ಸ್ಪರ್ಶ ನೀಡಿದ್ದಾರೆ.
ಉಪಾಧ್ಯಕ್ಷ ಶ್ರೀನಾಥ್ ಬಾಬು ಮ್ಯಾನೇಜ್ ಮೈ ಪ್ರಾಪರ್ಟೀಸ್ ಪ್ರವರ್ತಕರಾಗಿದ್ದು, ಹಲವು ಸ್ಟಾರ್ಟಪ್ ಉದ್ಯಮಗಳ ಹಿಂದಿನ ಕ್ರಿಯಾಶೀಲ ಶಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.
ಮತ್ತೋರ್ವ ನಿರ್ದೇಶಕ ಸಂಜಯ್ ಜೋಶಿ, ಮುದ್ರಣ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಉದ್ಯಮಿ. ಡೆಕ್ಕನ್ ಹೆರಾಲ್ಡ್ ಸಮೂಹದಿಂದ ವೃತ್ತಿ ಜೀವನ ಆರಂಭಿಸಿದ ಅವರು ಡಿಜಿಟಲ್ ಪ್ರಿಂಟಿಂಗ್ ಸೇರಿದಂತೆ ಮುದ್ರಣ ಕ್ಷೇತ್ರದಲ್ಲಿ ಹಲವು ಹೊಸ ಪ್ರಯತ್ನಗಳಿಗೆ ಪ್ರಿಂಟ್ ಮಾರ್ಕ್ ಮೂಲಕ ಯಶ ಕಂಡಿದ್ದಾರೆ.

ವಿಮಲ್ ಮಾಲು, 'ಮಾಲು ಗ್ರೂಪ್ ಆಫ್ ಕಂಪನಿ'ಗಳ ನಿರ್ದೇಶಕರಾಗಿ ಉದ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು, ರೈಲ್ವೆ ಕ್ಷೇತ್ರದೊಂದಿಗೆ ತಮ್ಮ ಸಂಸ್ಥೆಯ ಸಹಯೋಗವಿದೆ.
ಮಹೇಶ್ ಎಸ್.ಎನ್ ಗಾರ್ಮೆಂಟ್ ಉದ್ಯಮ ಕ್ಷೇತ್ರದ ಅನುಭವಿ ಉದ್ಯಮಿಯಾಗಿದ್ದು, ಕ್ಷೇತ್ರದ ಒಳಹೊರಗನ್ನು ಅರಿತಿರುವ ಕ್ರಿಯಾಶೀಲ ನಿರ್ದೇಶಕರಾಗಿದ್ದಾರೆ.
ಪಿ.ಜಿ. ಖಾರಿಯಪ್ಪ 'ಟ್ರೂ ಕಲರ್ಸ್' ಮೂಲಕ ಮುದ್ರಣ ಇಂಕ್ ಕ್ಷೇತ್ರದಲ್ಲಿ ತಮ್ಮದೇ ಆದ ಉದ್ಯಮ ಅನುಭವ ಹೊಂದಿದ್ದಾರೆ.
ಡಾ.ಪ್ರಫುಲ್ಲಾ ತುಮಾಟಿ, ಪ್ರತಿಷ್ಠಿತ ದಂತ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಂಸ್ಥೆಯ ನಿರ್ದೇಶಕರಾಗಿ ತಮ್ಮ ಅನುಭವವನ್ನು ನೀಡುತ್ತಿದ್ದಾರೆ. ಐ.ಜಿ. ಪಾಟೀಲ ಕೈಗಾರಿಕಾ ಕ್ಷೇತ್ರದ ಅನುಭವಿ ಉದ್ಯಮಿಯಾಗಿದ್ದಾರೆ.
ಇವರೊಂದಿಗೆ ಲತಾ ವಿ, ಅಡಿಕೆ ರಜನಿ ಜೋಶಿ, ರಾಧಿಕಾ ಶ್ರೀನಾಥ್ ಮತ್ತು ಸ್ಮಿತಾ.ಜಿ ಮಹಿಳಾ ನಿರ್ದೇಶಕರಾಗಿ ಸಂಸ್ಥೆಯ ಆಡಳಿತದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ವಿಭಿನ್ನ ವೃತ್ತಿ ಮತ್ತು ಉದ್ಯಮ ಕ್ಷೇತ್ರಗಳಿಂದ ಬಂದಿರುವ ನಿರ್ದೇಶಕರ ಅನುಭವ, ಸದಸ್ಯರ ವಿಶ್ವಾಸ ಹಾಗೂ ಸಿಬ್ಬಂದಿಯ ನಿಷ್ಠಾವಂತ ಸೇವೆ - ಈ ಮೂರರ ಸಮನ್ವಯವೇ ಅನಘದ ಹತ್ತು ವರ್ಷಗಳ ಯಶಸ್ಸಿನ ಪ್ರಮುಖ ಶಕ್ತಿಯಾಗಿದೆ.
ವಾರ್ಷಿಕ ಮಹಾಸಭೆಯ ಸಂದರ್ಭದಲ್ಲಿ ಎಲ್ಲ ನಿರ್ದೇಶಕರು ಒಗ್ಗಟ್ಟಾಗಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದಾಗ ಸಭಾಂಗಣದಲ್ಲಿ ಕರತಾಡನ ಮೊಳಗಿತು. ಹತ್ತು ವರ್ಷಗಳ ಯಶಸ್ವಿ ಪಯಣವನ್ನು ಸ್ಮರಿಸಿದ ಸದಸ್ಯರು, ಸಂಸ್ಥೆಯ ಮುಂದಿನ ಬೆಳವಣಿಗೆಗೆ ಶುಭ ಹಾರೈಸಿದರು.
ಅನಘ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಮುಂದಿನ ದಿನಗಳಲ್ಲಿ ಬೆಳ್ಳಿ ಹಬ್ಬ, ಚಿನ್ನದ ಹಬ್ಬ ಸೇರಿದಂತೆ ಇನ್ನಷ್ಟು ತಲುಪಿ, ಸದಸ್ಯರ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಾ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲಿ ಎಂಬ ಆಶಯ ಮಹಾಸಭೆಯಲ್ಲಿ ವ್ಯಕ್ತವಾಯಿತು.